Review: ಸಿನಿಮಾವನ್ನೇ ಉಸಿರಾಗಿಸಿಕೊಂಡವರ ಮನರಂಜನೆಯ ಹೂರಣದ ಚಿತ್ರ “ಟೈಮ್ ಪಾಸ್”
ಚಿತ್ರ : ಟೈಮ್‍ಪಾಸ್
ನಿರ್ದೇಶನ ; ಕೆ.ಚೇತನ್ ಜೋಡಿದಾರ್,
ತಾರಾಗಣ: ಇಮ್ರಾನ್ ಪಾಷ, ವೈಸಿರಿ ಕೆ ಗೌಡ, ಕೆ,ಚೇತನ್ ಜೋಡಿದಾರ್ ,ರತ್ಷಾರಾಮ್, ಓಂ ಶ್ರೀ ಯಕ್ಷಿಪ್, ಪ್ರಭಾಕರ್ ರಾವ್, ನವೀನ್ ಕುಮಾರ್,ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮತ್ತಿತರರು
ರೇಟಿಂಗ್ ; * 3.5 / 5
ಮಾಡುವ ಕೆಲಸ ಯಾವುದೇ ಆಗಲಿ ಅದರಲ್ಲಿ ಶ್ರದ್ದೆ, ಕಾಳಜಿ, ಕಠಿಣ ಪರಿಶ್ರಮ, ಗೆಲ್ಲುವ ವಿಶ್ವಾಸವಿದ್ದರೆ ಮಾಡುವ ಪ್ರತಿ ಪ್ರಯತ್ನವೂ ಸಫಲವಾಗಲಿದೆ. ಅದಕ್ಕಾಗಿ ಕಾಯಬೇಕು ಎನ್ನುವುದನ್ನು ನಿರೂಪಿಸಿರುವ ಚಿತ್ರ ” ಟೈಮ್ ಪಾಸ್”
ನಿರ್ದೇಶಕ ಕೆ ಚೇತನ್ ಜೋಡಿದಾರ್ ,ಸೋಲನ್ನು ಗೆಲುವಾಗಿಸುವ ಸೂತ್ರವನ್ನು ಮುಂದಿಟ್ಡುಕೊಂಡು ಒಂದಷ್ಟು ತುಂಟತನ, ಡಬ್ಬಲ್ ಮೀನಿಂಗ್ ಸಂಭಾಷಣೆ, ಮನಸ್ಸಿದ್ದರೆ ಮಾಡುವ ಯಾವುದೇ ಕೆಲಸ ಅಸಾಧ್ಯವಲ್ಲ ಎನ್ನುವುದನ್ನು ಸಿನಿಮಾ ಮೂಲಕ ನಿರೂಪಿಸಿದ್ದಾರೆ ಜೊತೆಗೆ ಕೌಟುಂಬಿಕ ಸಂಬಂಧಗಳಿಗೂ ಚಿತ್ರದಲ್ಲಿ ಒತ್ತು ನೀಡಿದ್ದಾರೆ. ಜೊತೆಗೆ ಮನರಂಜನೆಗೂ ಆದ್ಯತೆ ನೀಡಿದ್ದಾರೆ
ಸಿನಿಮಾದೊಳಗೊಂದು ಸಿನಿಮಾ, ಕನ್ನಡದಲ್ಲಿ ಅನೇಕ ಸಿನಿಮಾಗಳು ಬಂದಿವೆ. ಆದರೆ ಟೈಮ್‍ಪಾಸ್ ಈ ಮುಂಚೆ ಸಿನಿಮಾದೊಳಗೆ ಸಿನಿಮಾ ಬಂದ ಸಿನಿಮಾಕ್ಕಿಂತ ಭಿನ್ನವಾಗಿದೆ. ಇಲ್ಲಿ ಕಲಾವಿದರು ಹೊಸಬರಾದರೂ ಚಿತ್ರದ ಕಥೆಯ ಇಲ್ಲಿ ನಾಯಕ.ನಾಯಕಿ, ಕಥೆಯೇ ಎಲ್ಲರನ್ನು ಮುನ್ನೆಡೆಸಿದೆ.
ಶಂಕರ್ (ಇಮಾನ್ರಾ ಪಾಷ) ಗೆ ಸಿನಿಮಾ ಮೇಲೆ ಎಲ್ಲಿಲ್ಲದ ಪ್ರೀತಿ, ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವುದು ಆತನ ಜೀವನದ ಬಹುದೊಡ್ಡ ಕನಸು. ಅಪ್ಪ- ಅಮ್ಮನ ವಿರೋದ ಕಟ್ಟಿಕೊಂಡು ಮನೆ ಬಿಟ್ಟು ಹೊರ ಬರ್ತಾನೆ. ಪ್ರೀತಿಸಿದ ಹುಡುಗಿ ( ವೈಸಿರಿ ಕೆ ಗೌಡ)ಗೆ ಹುಡುಗ ಜೀವನದಲ್ಲಿ ಸಾಧನೆ ಮಾಡಬೇಕು ಮನೆಗೆ ಬಂದು ಮಗಳನ್ನು ಕೇಳಿ ಮದುವೆ ಮಾಡಿಕೊಳ್ಳಬೇಕು ಎನ್ನುವ ಆಸೆ.
ಇನ್ನೊಂದೆಡೆ ಯಾರದೋ ಕಥೆಗೆ ಇನ್ನೋರೋ ಹೆಸರು ಹಾಕಿಕೊಂಡು ಹಣ ಹೆಸರು ಮಾಡ್ತಾರೆ. ಮಾಡಿದ ಕೆಲಸಕ್ಕೆ ಸೂಕ್ತ ಸಂಭಾವನೆ ಕೊಡದೆ ಅವಮಾನಿಸುತ್ತಾರೆ. ಇತ್ತೆ ಸಿನಿಮಾ ನಿರ್ದೇಶಕನಾಗಬೇಕು ಎನ್ನುವ ಛಲ ಬಿಡದ ಶಂಕರ್, ಸೋತು ಸುಣ್ಣವಾದ ನಿರ್ಮಾಪಕ ಬೆನ್ನುಬಿದ್ದು ಸಿನಿಮಾ ನಿರ್ಮಾಣ ಮಾಡಲು ಮುಂದಾಗತ್ತಾನೆ. ತನ್ನ ಸುತ್ತ ಮುತ್ತಲಿರುವ ಮಂದಿಯೇ ನಾಯಕ,ನಾಯಕಿ, ಮತ್ತು ಕಲಾವಿದರು. ಕಷ್ಠಪಟ್ಟು ಮಾಡಿದ ಸಿನಿಮಾ ಯಶಸ್ವಿಯಾಗುತ್ತಾ ಇಲ್ಲ ಮುಂದೇನು ಎನ್ನುವುದು ಚಿತ್ರದ ತಿರುಳು
ನಿರ್ದೇಶಕ ಕೆ. ಚೇತನ್ ಜೋಡಿದಾರ್, ಟೈಮ್ ಪಾಸ್ ಚಿತ್ರಕ್ಕಾಗಿ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ಕಲಾವಿದರೂ ಕೂಡ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರರಂಗದಲ್ಲಿ ತನಗಾದ ನೋವು, ಅವಮಾನ ಮತ್ತು ಹೊಸಬರನ್ನು ಚಿತ್ರರಂಗ ನಡೆಸಿಕೊಳ್ಳುವ ಬಗೆ ಎಲ್ಲವೂ ಕಣ್ಣಿಗೆ ಕಟ್ಟಿದಹಾಗೆ ಚಿತ್ರದ ಮೂಲಕ ತೆರೆಗೆ ತಂದಿದ್ಧಾರೆ. ಈ ನಿಟ್ಟಿನಲ್ಲಿ ನಿರ್ದೇಶಕರು ತಮ್ಮ ಕೆಲಸದಲ್ಲಿ ಯಶಸ್ಸು ಕಂಡಿದ್ಧಾರೆ.
ಚಿತ್ರದಲ್ಲಿ ನಟಿಸಿರುವಇಮ್ರಾನ್ ಪಾಷ, ವೈಸಿರಿ ಕೆ ಗೌಡ, ,ರತ್ಷಾರಾಮ್, ಓಂ ಶ್ರೀ ಯಕ್ಷಿಪ್, ಪ್ರಭಾಕರ್ ರಾವ್, ನವೀನ್ ಕುಮಾರ್,ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ.
ಚಿತ್ರದಲ್ಲಿ ಎರಡು ಮೂರು ಸನ್ನಿವೇಶಗಳನ್ನು ಸಂಭಾಷಣೆಯ ಮೂಲಕವೇ ಹೇಳುವ ಪ್ರಯತ್ನ ಮಾಡಬಹುದಿತ್ತು. ಅದನ್ನು ಅಷ್ಟು ವಿಜೃಂಭಿಸುವ ಅಗತ್ಯ ಮತ್ತು ಅನಿವಾರ್ಯತೆ ಇರಲಿಲ್ಲ, ಇನ್ನುಳಿದಂತೆ ನಿರ್ದೇಶಕರು ಉತ್ತಮ ಪ್ರಯತ್ನ ಮಾಡಿದ್ದಾರೆ, ಟೈಮ್ ಪಾಸ್ ಚಿತ್ರ ಚಿತ್ರಮಂದಿರದಲ್ಲಿ ಕುಳಿತರೆ ಟೈಮ್ ಪಾಸ್ ಆದದ್ದೇ ಗೊತ್ತಾಗುವುದಿಲ್ಲ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

