ಕಾಂತಾರ ಯುವರಾಣಿ “ಐರಾಕೃಷ್ಣ”ಗೆ ಕನ್ನಡ, ತಮಿಳುನಲ್ಲಿ ಅವಕಾಶಗಳ ಸುರಿಮಳೆ
ಸಿನಿಮಾಗೂ ಮಾಡಲಿಂಗೂ ಒಂದಕ್ಕೊಂದು ಬಿಟ್ಟಿರಲಾರದ ನಂಟು. ಒಂದು ರೀತಿ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಿನಿಮಾಕ್ಕೆ ಬಂದವರು ಮಾಡಲಿಂಗ್ ಲೋಕದಲ್ಲಿ ರಾಂಪ್ ಮೇಲೆ ಹೆಜ್ಜೆ ಒಂದಲ್ಲ ಒಂದು ಭಾರಿ ಹಾಕುತ್ತಾರೆ, ಅದೇ ಮಾಡಲಿಂಗ್ ನಲ್ಲಿ ಗುರುತಿಸಿಕೊಂಡವರು ಸಿನಿಮಾಗೂ ಕಾಲಿಟ್ಟು ಸಿನಿಮಾಲೋಕದಲ್ಲಿ ಅದೃಷ್ಠ ಗಿಟ್ಟಿಸಿಕೊಂಡ ಅನೇಕ ಉದಾಹರಣೆಗಳಿವೆ.

ಈ ಸಾಲಿಗೆ ಯುವ ಪ್ರತಿಭಾನ್ವಿತ ನಟಿ ಐರಾ ಕೃಷ್ಣ ಕೂಡ ಸೇರ್ಪಡೆ,ಕಾಂತಾರ ಚಾಪ್ಟರ್ -1 ಚಿತ್ರದಲ್ಲಿ ಯುವರಾಣಿಯಾಗಿ ಮಿಂಚಿದ ಯುವ ನಟಿ “ಐರಾ ಕೃಷ್ಣ” ಕಾಂತಾರ ಚಿತ್ರದ ಯಶಸ್ಸಿನ ನಂತರ ಒಂದರ ಹಿಂದೆ ಒಂದು ಅವಕಾಗಳು ಹುಡುಕಿಕೊಂಡು ಬರುತ್ತಿವೆ
ಐರಾ ಈಗಾಗಲೇ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿ ಕಲಾ ಕೌಶಲ್ಯ ಸಾಬೀತುಪಡಿಸಿದ್ದಾರೆ. ಕನ್ನಡದಲ್ಲಿ ನನ್ನ ಪ್ರಕಾರ, ಕನ್ನಡದ ಧರಣಿ ಮಂಡಳ ಮಧ್ಯಗೊಳಗೆ, ನೋಡಿದವರು ಏನೆಂತಾರೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ ಸ್ಟುಡಿಯೋ ಗ್ರೀನ್ ರೆಬಲ್ ಹಾಗೂ ನಿರಮ್ ಮಾರುಮ್ ಉಳಗಿಲ್ ದಲ್ಲಿ ನಾಯಕಿ ನಟಿಯಾಗಿ ಮಿಂಚಿದ್ದಾರೆ. ಪೋರ್ ವಿಂಡೋಸ್ ಎಂಬ ಮತ್ತೊಂದು ತಮಿಳು ಚಿತ್ರ ಬಿಡುಗಡೆಗೆ ಐರಾ ಕೃಷ್ಣ ಎದುರು ನೋಡುತ್ತಿದ್ದಾರೆ.

ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ನಟಿ ಐರಾ ಕೃಷ್ಣ ಸಂತಸಗೊಂಡಿದ್ದಾರೆ
ಸಿನಿಮಾದ ಜೊತೆ ಜೊತೆಗೆಟ್ಯಾಲಿ, ಎವಿಟಿ ಚಹಾ, ಅಮುಲ್ ಇಂಡಿಯಾ, ಹಿಮಾಲಯ, ಪೀಟರ್ ಇಂಗ್ಲೆಂಡ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಜಾಹೀರಾತುಗಳಲ್ಲಿಯೂ ಐರಾ ಕೃಷ್ಣ ನಟಿಸಿ ಸೈಎನಿಸಿಕೊಂಡಿದ್ದಾರೆ
ಯಾರೂ ಈ ಐರಾ ಕೃಷ್ಣಾ:
ರಿಷಬ್ ಶೆಟ್ಟಿ ಅವರ ನಟನೆ, ನಿರ್ದೇಶನದಲ್ಲಿ ಮೂಡಿಬಂದಿರುವ ‘ಕಾಂತಾರ: ಚಾಪ್ಟರ್ 1’ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿಯೂ ಭರ್ಜರಿ ಕಮಾಯಿ ಮಾಡುತ್ತಿರುವ ಚಿತ್ರದಲ್ಲಿ ಯುವರಾಣಿಯಾಗಿ ಭಟ್ಕಳದ ಬಾಲೆ ಐರಾ ಕೃಷ್ಣ ಮಿಂಚಿದ್ದಾರೆ. ರಾಜ ಕುಲಶೇಖರನ ಪತ್ನಿಯಾಗಿ ಜೀವ ತುಂಬಿದ್ದ ಐರಾ ಕಾಂತಾರದ ಸೈಲೆಂಟ್ ಸುಂದರಿ.

ತಮಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿದ್ದಾರೆ. ಕಾಂತಾರ 1 ಗೆಲುವಿನ ಬಳಿಕ ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಅಂದಹಾಗೇ ಐರಾ ಕೃಷ್ಣ ಮೂಲತಃ ಮೂಡಭಟ್ಕಳದ ನಿವಾಸಿ. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಟಾಪ್ ಮಾಡೆಲ್ ಹಂಟ್ ಸ್ಪರ್ಧೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಇವರೊಂದಿಗೆ ಸ್ಪರ್ಧಿಸಿ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದರು. ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್ ಲಿಸ್ಟ್ ನಲ್ಲಿ ತೇರ್ಗಡೆ ಹೊಂದಿದ ನಂತರ ಅನೇಕ ಕಿರುಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡಿರು. ಹೀಗೆ ಶುರುವಾದ ಐರಾ ಜರ್ನಿ ಕಾಂತಾರ ಚಾಫ್ಟರ್ 1ರ ಯಶಸ್ಸಿನ ನಂತರ ಐರಾ ಯಶಸ್ಸು ಆರಂಭವಾಗಿದೆ

