"Boss" Celebrity Movie: Is it related to D-Boss? Watch the movie - Director V. lava

“ಬಾಸ್” ಸೆಲೆಬ್ರಿಟಿಯ ಚಿತ್ರ : ಡಿಬಾಸ್‍ಗೆ ಸಂಬಂಸಿದ್ದಾ ಅಲ್ಲವಾ ಚಿತ್ರ ನೋಡಿ-ನಿರ್ದೇಶಕ ವಿ. ಲವ - CineNewsKannada.com

“ಬಾಸ್” ಸೆಲೆಬ್ರಿಟಿಯ ಚಿತ್ರ : ಡಿಬಾಸ್‍ಗೆ ಸಂಬಂಸಿದ್ದಾ ಅಲ್ಲವಾ ಚಿತ್ರ ನೋಡಿ-ನಿರ್ದೇಶಕ ವಿ. ಲವ

“ಬಾಸ್” ಈ ಹೆಸರು ಎಲ್ಲಾ ಕಡೆ ಇದ್ದರೂ ಕನ್ನಡ ಚಿತ್ರರಂಗದಲ್ಲಿ ಒಂದು ಕೈ ಮೇಲಾಗಿ ಸದ್ದು ಕೇಳಿಬರುತ್ತಿದೆ, ಸಹಜವಾಗಿ ಅಭಿಯಾನಿಗಳಿಗೆ ಯಾರಿಗೆ ಬಾಸ್ ಎನ್ನುತ್ತಾರೆ ಎನ್ನುವುದು ತಿಳಿಸಿದೆ. ಇತ್ತೀಚೆಗೆ ನಡೆದ ಕ್ರೈಮ್ ಮರ್ಡರ್ ಘಟನೆಯನ್ನು ಮುಂದಿಟ್ಟುಕೊಂಡು “ಬಾಸ್” ಹೆಸರಲ್ಲಿ ಚಿತ್ರವನ್ನು ತೆರೆಗೆ ಕಟ್ಟಿಕೊಡಲು ತಂಡ ಮುಂದಾಗಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆ ಹಂತಕ್ಕೆ ಬಂದಿದೆ.

“ಬಾಸ್” ಸಮಾಜದಲ್ಲಿ ನಡೆದ ನೈಜ ಘಟನೆ ಆಧರಿಸಿ ತಯಾರು ಮಾಡಿದ ಚಿತ್ರ, ಕ್ರೈಮ್, ಮರ್ಡರ್, ಥ್ರಿಲ್ಲರ್ ಎಲ್ಲವೂ ಇದೆ. ಚಿತ್ರದ ಪೋಸ್ಟರ್, ಶೀರ್ಷಿಕೆ ನೋಡಿದರೆ ನಟ ದರ್ಶನ್‍ಗೆ ಸಂಬಂಧಿಸಿದ ಚಿತ್ರವಾ ಅಥವಾ ಅಲ್ಲವೇ ಎನ್ನುವುದು ತಿಳಿಯಬೇಕಾದರೆ ಟೀಸರ್ ಮತ್ತು ಟ್ರೈಲರ್‍ವರೆಗೆ ಕಾಯಬೇಕು, ಜೊತೆಗೆ ಚಿತ್ರದಲ್ಲಿ ಏನು ಎನ್ನುವುದನ್ನು ತೋರಿಸಿದ್ದೇವೆ ಎಂದರು ನಿರ್ದೇಶಕ ವಿ.ಲವ

ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದೆ. ನಟ ತನುಷ್ ಶಿವಣ್ಣ ಚಿತ್ರದ ನಾಯಕನಾಗಿ ನಟಿಸಿದ್ದು, ಮೋನಿಕಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. “ಬಾಸ್” ಚಿತ್ರಕ್ಕೆ “ಸತ್ಯಮೇವ ಜಯತೇ” ಎಂಬ ಅಡಿಬರಹವಿದೆ. ಕುತೂಹಲಗಳಿಗೆ ಉತ್ತರ ಚಿತ್ರದಲ್ಲಿ ಸಿಗಲಿದೆ ಎನ್ನುವ ಮೂಲಕ ಮತ್ತಷ್ಟು ಕುತೂಹಲ ಕಾಪಾಡಿಕೊಂಡರು ನಿರ್ದೇಶಕರು

ನಾಯಕ ತನುಷ್ ಶಿವಣ್ಣ ಮಾತನಾಡಿ ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರ ನಿರ್ವಹಣೆ ಮಾಡಿದ್ದೇನೆ. ಚಿತ್ರದಲ್ಲಿ ಎಲ್ಲರೂ “ಬಾಸ್” ಎನ್ನುತ್ತಾರೆ. ತಾವೆಲ್ಲರು ಹಿಂದಿನ ಚಿತ್ರಗಳಿಗೆ ತೋರಿದ ಪೆÇ್ರೀತ್ಸಾಹ ಈ ಚಿತ್ರದಲ್ಲೂ ಮುಂದುವರೆಯಲಿ ಎಂದರು.

ನಾಯಕಿ ಮೋನಿಕಾ ಗೌಡ ಮಾತನಾಡಿ ನನ್ನ ಪಾತ್ರ ಕೂಡ ಚೆನ್ನಾಗಿದೆ. ಶೀಲಾ ನನ್ನ ಪಾತ್ರದ ಹೆಸರು ಎಂದು ಹೇಳಿದರು.

ಚಿತ್ರದಲ್ಲಿ ನಟಿಸಿರುವ ಸಂದೀಪ್ ಮಾತನಾಡಿ ನಿರ್ದೇಶಕರು ಪಾತ್ರದ ಬಗ್ಗೆ ಏನೂ ಹೇಳುವಂತಿಲ್ಲ ಎಂದಿದ್ಧಾರೆ. ಟೀಸರ್ ಮತ್ತು ಟ್ರೈಲರ್‍ನಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ. ಅಲ್ಲಿಯ ತನಕ ಕಾಯೋಣ. ನಿರ್ದೇಶಕರು ಹೇಳಿದ್ದರೆ ಪಾತ್ರದ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಕಲಾವಿದರಾಗಿ ನಿರ್ದೇಶಕರು ಹೇಳಿದ ಹಾಗೆ ಕೇಳುವುದು ನಮ್ಮ ಕೆಲಸ ಎಂದರು

ಚಿತ್ರದಲ್ಲಿ ನಟಿಸಿರುವ ವೀರೇನ್ ಕೇಶವ್, ಸುಜನ್ ಶೆಟ್ಟಿ, ದುನಿಯಾ ಮಹೇಶ್, ಜೋಶ್ ಅಕ್ಷಯ್, ಮಹೇಶ್, ಮನು, ಮಂಡ್ಯ ರವಿ, ಮಹೇಂದ್ರ ರಾವ್, ಪೃಥ್ವಿ, ನಿಶಾಂತ್, ಮೋಹಿತ್, ಲಕ್ಷ್ಮಣ್ ಪೂಜಾರಿ, ಸಂಗೀತ ನಿರ್ದೇಶಕ ಡೆವಿ ಸುರೇಶ್, ಛಾಯಾಗ್ರಾಹಕ ಶರತ್ ಹಾಗೂ ಸಹ ನಿರ್ದೇಶಕ ಮಂಜುನಾಥ್ ಮುಂತಾದವರು “ಬಾಸ್” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು

ಚಿತ್ರಕ್ಕೆ ಡೆವಿ ಸುರೇಶ್ ಸಂಗೀತ ನಿರ್ದೇಶನ, ಶರತ್ ಎನ್ ಆರ್ ಪುರ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಹಾಗೂ ಮಂಜುನಾಥ್ ಮತ್ತು ತೀರ್ಥ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin