Review: “Congratulations Brother,” a cute love story about Rakshi, who gets caught between Siri and Tanu

Review: ಸಿರಿ,ತನು ನಡುವೆ ಸಿಕ್ಕಿಕೊಂಡ ರಕ್ಷಿಯ ಮುದ್ದಾದ ಪ್ರೇಮಕತೆಯ ಚಿತ್ರ “ಕಂಗ್ರಾಜುಲೇಷನ್ ಬ್ರದರ್” - CineNewsKannada.com

Review: ಸಿರಿ,ತನು ನಡುವೆ ಸಿಕ್ಕಿಕೊಂಡ ರಕ್ಷಿಯ ಮುದ್ದಾದ ಪ್ರೇಮಕತೆಯ ಚಿತ್ರ “ಕಂಗ್ರಾಜುಲೇಷನ್ ಬ್ರದರ್”

ಚಿತ್ರ: ಕಂಗ್ರಾಜುಲೇಷನ್ಸ್ ಬ್ರದರ್
ನಿರ್ದೇಶನ: ಪ್ರತಾಪ್ ಗಂಧರ್ವ
ತಾರಾಗಣ: ರಕ್ಷಿತ್ ನಾಗ್, ಸಂಜನಾ ದಾಸ್, ಅನುಷಾ, ಶಶಿಕುಮಾರ್, ಸ್ವಾತಿ, ರವಿ ಭಟ್, ರಾಘು ರಾಮನಕೊಪ್ಪ, ಚೇತನ್ ದುರ್ಗಾ ಮತ್ತಿತರರು
ರೇಟಿಂಗ್: *** 3.5/ 5

ಸಾಮಾಜಿಕ ಜಾಲತಾಣದಲ್ಲಿ ಹವಾಸೃಷ್ಠಿಸಿದ್ದ ಸಂಭಾಷಣೆ “ಕಂಗ್ರಾಜುಲೇಷನ್ ಬ್ರದರ್” ಅದೇ ಪದವನ್ನು ಇಟ್ಟುಕೊಂಡು ಗಂಭೀರ ವಿಷಯವನ್ನು ಮನರಂಜನಾತ್ಮಕವಾಗಿ ಹೇಳಿರುವ ಚಿತ್ರ ಇದು. ಒಬ್ಬ ಹುಡಗನಿಗೆ ಇಬ್ಬರು ಹುಡುಗಿಯರು ಸಿಕ್ಕರೆ ಜೀವನದಲ್ಲಿ ಏನೆಲ್ಲಾ ಆಗಲಿದೆ ಎನ್ನುವ ವಿಷಯವನ್ನು ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ.

ಅನುಭವಿ ನಿರ್ದೇಶಕ ಹರಿ ಸಂತು ಮಾರ್ಗದರ್ಶನದಲ್ಲಿ ನಿರ್ದೇಶಕ ಪ್ರತಾಪ್ ಗಂಧರ್ವ ಜನರಿಗೆ ಇಷ್ಟವಾಗುವ ಮತ್ತು ಈಗಿನ ಕಾಲಘಟ್ಟದಲ್ಲಿ ನಡೆಯುವ ಯುವಜನರ ಮನಸ್ಥಿತಿ ಮತ್ತು ಕಥೆಯನ್ನು ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಅವರ ಪ್ರಯತ್ನದಲ್ಲಿ ಸಫಲರಾಗಿದ್ದಾರೆ ಕೂಡ.

ಸಾಮಾನ್ಯವಾಗಿ ಯೋಚನೆ ಮಾಡದ, ಮಾಡಲೂ ಸಾಧ್ಯವಿರದ ಇದ್ದರೂ ಅಲ್ಲೊಂದು ಇಲ್ಲೊಂದು ಇರಬಹುದಾದ ಘಟನೆಯನ್ನು ಪ್ರಧಾನವಾಗಿಟ್ಟುಕೊಂಡು ಜನರಿಗೆ ಹಾಸ್ಯದ ದಾಟಿಯಲ್ಲಿ ಮನರಂಜನೆ ನೀಡುವ ಉದ್ದೇಶದಿಂದ ಚಿತ್ರ ಮಾಡಿರುವ ಚಿತ್ರ ಇದು.

ಒಬ್ಬ ಹುಡುನ ಬದುಕಿನಲ್ಲಿ ಇಬ್ಬರು ಹುಡುಗಿಯರು ಒಂದೇ ಸಮಯದಲ್ಲಿ ಬಂದರೆ ಅದರಿಂದ ಆಗುವ ಲಾಭ ನಷ್ಟ. ತೊಂದರೆ ತಾಪತ್ರೆ, ಅನುಭವಿಸುವ ಪಡಪಾಟಲು ಸೇರಿದಂತೆ ಹಲವು ವಿಷಯಗಳನ್ನು ಚಿತ್ರದ ಮೂಲಕ ಹೇಳಲಾಗಿದೆ. ರಕ್ಷಿತ್‍ಗೆ (ರಕ್ಷಿತ್ ನಾಗ್) ಗೆ ಸಿರಿ (ಅನೂಷಾ) ಕಂಡರೆ ಪ್ರೀತಿ. ಪ್ರೀತಿ ಮಾಡುವ ಹುಡುಗಿ ಸಿರಿಗೆ ತನು (ಸಂಜನಾ ದಾಸ್) ಎನ್ನುವ ಸ್ನೇಹಿತೆ ಇದ್ದಾಳೆ. ಸಿರಿ ಮತ್ತು ತನು ಒಬ್ಬರನ್ನೊಬ್ಬರು ಬಿಟ್ಟಿರಲಾರದ ಗೆಳೆತನ,ಆತ್ಮೀಯತೆ. ಇಂತಹ ಹುಡುಗಿಯರು ಒಬ್ಬನೇ ಹುಡುಗನ್ನು ಇಷ್ಟಪಟ್ಟರೆ ಊಹೆ ಮಾಡುವುದು ಕಷ್ಟ.

ಇಬ್ಬರು ಹುಡುಗಿಯರು ಒಬ್ಬನೇ ಹುಡುಗನ್ನು ಪ್ರೀತಿ ಮಾಡಿ ಒಬ್ಬಳ ಜೊತೆಗೆ ಇನ್ನೊಬ್ಬಳು, ಮೂವರ ನಡುವಿನ ಜೀವನ ಹೇಗಿರುತ್ತದೆ. ಹುಡುಗ ಸಿಕ್ಕ ಮೇಲೂ ಸ್ನೇಹಿತೆಯರು ಸ್ನೇಹಿತೆಯರಾಗಿ ಇರುತ್ತಾರಾ ಇಲ್ಲ ಮುಂದೇ ಎನ್ನುವುದು ಕಥನ ಕುತೂಹಲ ಅದನ್ನು ಚಿತ್ರದಲ್ಲಿ ನೋಡಿದರೆ ಅದರ ಮಜಾನೇ ಬೇರೆ.

ತಂದೆ-ಮಗನ ಭಾವನಾತ್ಮಕ ಸಂಬಂಧ, ಒಬ್ಬ ಹುಡುಗ ಇಬ್ಬರು ಹುಡುಗಿಯರ ನಡುವಿನ ಪ್ರೀತಿಯನ್ನು ಹಾಸ್ಯದ ದಾಟಿಯಲ್ಲಿ ಪ್ರೇಕ್ಷಕರ ಮುಂದೆ ಇಡುವಲ್ಲಿ ನಿರ್ದೇಶಕ ಪ್ರತಾಪ್ ಗಂಧರ್ವ ಯಶಸ್ವಿಯಾಗಿದ್ದಾರೆ.ಮೋಜು, ಮಸ್ತಿ, ಕುಸ್ತಿ ಸೇರಿದಂತೆ ಒಂದಿಷ್ಟು ವಿಷಯಗಳನ್ನು ಚಿತ್ರದ ಮೂಲಕ ಪ್ರೇಕ್ಷಕರ ಮುಂದಿಟ್ಟಿದ್ಧಾರೆ. ಈ ಮೂಲಕ ವಿಭಿನ್ನ ಪ್ರೇಮಕಥೆ ಜನರಿಗೆ ರುಚಿಸಬಹುದು

ಚಿತ್ರದ ದ್ವಂದ್ವಾರ್ಥಗಳು ಯುವ ಜನರನ್ನು ಗಮದಲ್ಲಿಟ್ಟುಕೊಂಡೇ ಬರೆದಂತಿದೆ. ಇನ್ನೂ ಕೆಲವರಿಗೆ ಇಡಿಸದೆ ಇರಬಹುದು, ಹರಿ ಸಂತು ಅವರಂತಹ ಅನುಭವ ನಿರ್ದೇಶಕರು ಹೊಸ ತಂಡದ ಜೊತೆ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಯಾವ ರೀತಿಯ ಚಿತ್ರ ನೀಡಬಹುದು ಎನ್ನುವ ಒಂದಷ್ಟು ನಾಡಿಮಿಡಿತ ಅರಿತುಕೊಂಡು ಸಿನಿಮಾ ಕಟ್ಟಿಕೊಟ್ಟಂತೆ ಇದೆ.

ನಾಯಕ ರಕ್ಷಿತ್ ನಾಗ್, ಹಾಗು ನಾಯಕಿಯರಲ್ಲಿ ಅನೂಷಾ ,ಸಂಜನಾ ದಾಸ್ ತಮ್ಮ ತಮ್ಮ ಪಾತ್ರಗಳಿಗೆ ಜೀವ ನೀಡಿದ್ದಾರೆ ಹಿರಿಯ ನಟ ಶಶಿಕುಮಾರ್ ಪಾತ್ರದ ಮೂಲಕವೇ ಗಮನ ಸೆಳೆಯುವ ಕೆಲ;ಸ ಮಾಡಿದ್ದಾರೆ

ಸೂರಜ್ ಜೋಯಿಸ್ ಮತ್ತು ಧ್ರುವ ಸಂಗೀತ, ಗುರುಪ್ರಸಾದ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಚಿತ್ರ ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸಮಾಡದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin