Peter Movive Review :ನಂಬಿಕೆ, ದ್ರೋಹದ ಸುತ್ತ ನಡೆಯುವ ಕುತೂಹಲಕಾರಿ ಕಥನ “ಪೀಟರ್”

Peter Movive Review :ನಂಬಿಕೆ, ದ್ರೋಹದ ಸುತ್ತ ನಡೆಯುವ ಕುತೂಹಲಕಾರಿ ಕಥನ “ಪೀಟರ್” - CineNewsKannada.com

Peter Movive Review :ನಂಬಿಕೆ, ದ್ರೋಹದ ಸುತ್ತ ನಡೆಯುವ ಕುತೂಹಲಕಾರಿ ಕಥನ “ಪೀಟರ್”

ಚಿತ್ರ : ಪೀಟರ್
ನಿರ್ದೇಶನ : ಸುಕೇಶ್ ಶೆಟ್ಟಿ
ತಾರಾಗಣ : ರಾಜೇಶ್ ಧ್ರುವ, ಡಾ,ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ, ರಘು ಪಾಂಡೇಶ್ವರ್, ಪ್ರತಿಮಾ ನಾಯಕ್, ರಾಮನಾಡಗೌಡ, ವರುಣ್ ಪಟೇಲ್, ಭರತ್, ದೀನಾ, ರಾಧಾಕೃಷ್ಣ ಕುಂಬ್ಳೆ ಮತ್ತಿತರರು
ರೇಟಿಂಗ್ : *** 3.5 / 5

ತಾಯಿ ಮಗನ ಬಾಂಧವ್ಯ, ಪ್ರೀತಿ,ಮಮಕಾರ, ಸ್ನೇಹದ ಮುಖವಾಡ ,ದ್ರೋಹ ಮತ್ತು ದ್ವೇಷದ ಸುಳಿಯಲ್ಲಿ ಸೇರಿಕೊಂಡ ಕುತೂಹಲಕಾರಿ ಚಿತ್ರ “ಪೀಟರ್”.

ನಿರ್ದೇಶಕ ಸುಕೇಶ್ ಶೆಟ್ಟಿ, ನಂಬಿಕೆ, ದ್ರೋಹದಿಂದ ಆಗುವ ಅನಾಹುತಗಳ ಜೊತೆಗೆ ತಾಯಿ-ಮಗನ ಸೆಂಟಿಮೆಂಟ್ ಅಂಶಗಳನ್ನೂ ಮನಮುಟ್ಟುವಂತೆ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ತಮ್ಮ ಕೆಲಸವನ್ನು ಶ್ರದ್ದೆ ಹಾಗು ಪ್ರಾಮಾಣಿಕತೆಯಿಂದ ಮಾಡಿದ್ದಾರೆ.

ದೈನಂದಿನ ಜೀವನದಲ್ಲಿ ನಡೆಯುವ ಒಂದಷ್ಟು ಘಟನೆಗಳು, ಜೀವನ ಪಯಣದಲ್ಲಿ ನಡೆಯು ಆಟ,ವಿಧಿಯಾಟ, ಗೊತ್ತೋ ಗೊತ್ತಿಲ್ಲದೆ ನಡೆಯುವ ಘಟನೆಗಳು, ಪ್ರೀತಿ, ಪ್ರೇಮ, ಸ್ನೇಹ ಸೇರಿದಂತೆ ಇನ್ನಿತರೆ ವಿಷಯಗಳು ಚಿತ್ರದಲ್ಲಿ ಅಚ್ಚುಕಟ್ಟಾಗಿ ಬಳಿಸಿಕೊಂಡಿದ್ದಾರೆ ನಿರ್ದೇಶಕರು.

ಪೀಟರ್ (ರಾಜೇಶ್ ಧ್ರುವ) ಹಿಂದೂ ಸಂಸ್ಕೃತಿ , ಆಚಾರ ಎಂದರೆ ಎಲ್ಲಿಲ್ಲದ ಪ್ರೀತಿ ಗೌರವ, ಇದೇ ಕಾರಣಕ್ಕೆ ಚಂಡೆ ಬಾರಿಸುವ ಕಲೆ ಕರಗತ ಮಾಡಿಕೊಂಡವ. ಗುರುಗಳು ಹೇಳಿಕೊಟ್ಟ ಕಲೆಯನ್ನು ದೇವರ ಮುಂದೆ ಅರ್ಪಣೆ, ಅದರ ಹೊಣೆಗಾರಿಕೆ ಹೊತ್ತವ ಪೀಟರ್.

ಓದಿಗಾಗಿ ಬರುವ ಮೀರಾ( ರಮೀಕ್ಷಾ ಶೆಟ್ಟಿ) ಕಂಡೊಡನೆ ಪರಿಚಯ, ಸ್ನೇಹ, ಪ್ರೀತಿಯ ಬೀಜ ಮೊಳಕೆಹೊಡೆಯುತ್ತದೆ. ಬಿಟ್ಟು ಬಿಡಲಾರದಷ್ಟು ಇಬ್ಬರ ನಡುವೆ ಪ್ರೀತಿ ಬೆಟ್ಟದಷ್ಟು ಬೆಳದುಬಿಡುತ್ತದೆ. ಅನಾರೋಗ್ಯ ಪೀಡಿತ ತಾಯಿ ಮೇರಿ ( ಪ್ರತಿಭಾ ನಾಯಕ್) ಕುಡುಕ ಅಪ್ಪ ಜೋಸೆಫ್ ( ರಾಧಾಕೃಷ್ಣ ಕುಂಬ್ಳೆ) ಅಣ್ಣನ ಬದುಕಿನ ನಡೆದ ದುರಂತ, ಹಸಿ ಹಸಿಯಾಗಿರುವಾಗಲೇ ಪಕ್ಕದ ಮನೆಗೆ ಬರುವ ಶಿಕ್ಷಕಿ ರಾಧಾ ( ಜಾನ್ವಿ ರಾಯಲ) ಮತ್ತು ಆಕೆಯ ಮಗ, ಇಲ್ಲಿಂದ ಕಥೆ ಮತ್ತೊಂದು ಮಗ್ಗಲು ಪಡೆಯುತ್ತದೆ

ರಾಧಾ ಪ್ರವೇಶ ನಂತರ ಒಂದಷ್ಟು ತಲ್ಲಣ, ತಳಮಳ, ಕೋಪ, ದ್ವೇಷ ಪೀಟರ್ ತಾಯಿಗೆ ಕಾಡುತ್ತದೆ. .ಇದಕ್ಕೆ ಕಾರಣ ಏನು, ಈ ನಡುವೆ ನಡೆಯುವ ಒಂದಷ್ಟು ಫ್ಲಾಶ್ ಬ್ಯಾಕ್, ಬದುಕಿನ ಘಟನೆಗಳನ್ನು ಅನಾವರಣ ಮಾಡಿದೆ, ಪ್ರೀತಿಸಿದ ಹುಡುಗಿಯ ಸಾವು.. ಮುಂದೇನು ಎನ್ನುವುದನ್ನು ತಿಳಿಯಬೇಕಾದರೆ ಚಿತ್ರ ನೋಡಿದರೆ ಚೆನ್ನ..

ದೂರದರ್ಶನದಂತಹ ಉತ್ತಮ ಅಭಿರುಚಿಯ ಚಿತ್ರ ಕಟ್ಟಿಕೊಟ್ಟಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಮತ್ತೊಮ್ಮೆ ವಿಭಿನ್ ಕಥಾವಸ್ತು ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ಧಾರೆ. ಕೆಲವೊಂದು ಸೂಕ್ಷ್ಮ ವಿಷಯಗಳನ್ನು ಅಚ್ಚುಕಟ್ಟಾಗಿ ತೆರೆಗೆ ಕಟ್ಟಿಕೊಡುವ ಮೂಲಕ ತಮ್ಮ ಕೆಲಸ ಯಶಸ್ವಿಯಾಗಿ ನಿಭಾಯಿಸಿದ್ಧಾರೆ

ನಾಯಕ ರಾಜೇಶ್ ಧ್ರುವ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಿಸಿದ್ಧಾರೆ, ಜೊತಗೆ ಇಡೀ ಪಾತ್ರವನ್ನು ಜೀವಿಸಿ ತಾವೊಬ್ಬ ಪಕ್ವ ಕಲಾವಿದ ಎನ್ನುವುದನ್ನು ನಿರೂಪಿಸಿದ್ದಾರೆ

ನಟಿ ಜಾನ್ವಿ ರಾಯಲ, ರಮೀಕ್ಷಾ ಶೆಟ್ಟಿ ಸಿಕ್ಕ ಪಾತ್ರವನ್ನು ಜೀವಿಸಿದ್ದಾರೆ. ಉಳಿದಂತೆ ರಾಮನಾಡಗೌಡ, ಪ್ರತಿಭಾ ನಾಯಕ್, ರಾಧಾಕೃಷ್ಣ ಕುಂಬ್ಳೆ, ರಘು ಪಾಂಡೇಶ್ವರ್ ಸೇರಿದಂತೆ ಹಲವು ಪಾತ್ರಗಳು ಗಮನ ಸೆಳೆದಿವೆ. ವಿಭಿನ್ನ ಚಿತ್ರ ನೋಡಲು ಬಯಸುವ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin