Kendada Seragu Movie Review: ಗಂಡನಿಲ್ಲದ ಹೆಣ್ಣು,, ನೂರಾರು ಕಣ್ಣುಗಳ ಸುತ್ತ ಸಾಗುವ ಕಥನ “ಕೆಂಡದ ಸೆರಗು”
ನಿರ್ದೇಶನ: ರಾಕಿ ಸೋಮ್ಲಿ
ತಾರಾಗಣ: ಭೂಮಿಶೆಟ್ಟಿ, ಮಾಲಾಶ್ರೀ, ಶೋಬಿತಾ, ಪ್ರತಿಮಾ ಠಾಕೂರ್, ಹರೀಶ್ ಅರಸು,ಯಶ್ ಶೆಟ್ಟಿ, ವರ್ಧನ್, ಬಾಲರಾಜವಾಡಿ, ಮೋಹನ್ ಕುಮಾರ್ ಮತ್ತಿತರರು
ರೇಟಿಂಗ್: *** 3/ 5
“ಪೊಲೀಸಪ್ಪ ನೋಡಿದ್ರೆ,,, ನಿನ್ ಮಗಳು ನನ್ಗೆ ಬೇಕು ಅಂತಾನೆ,,, ನಾನು ಮಲಗಿರುವವನ ಜೊತೆ ಮಗಳನ್ನು ಮಲಗಿಸಲಾ,,”
ವಯಸ್ಸಿಗೆ ಬಂದ ಮಗಳ ಮುಂದೆ ಅಸಹಯಾಕತೆ ವ್ಯಕ್ತಪಡಿಸುವ ಹೆತ್ತ ಕುರುಳಿನ ನೋವು, ತಲ್ಲಣ. ತುಮುಲ ಒಂದೆಡೆಯಾದೆರೆ.
ಕಳೆದುಕೊಳ್ಳೋದು ಇಲ್ಲಾಂದ್ರೆ ಕಳೆದುಕೊಳ್ಳ ಭಯ ಯಾಕೆ ಎನ್ನುವ ಮಗಳ ದಿಟ್ಟತನ,
ತಾಯಿ-ಮಗಳ ನೋವು, ನಲಿವು, ಸಂಕಷ್ಠಗಳ ಮೇಲೆ ಬೆಳಕು ಚೆಲ್ಲುವ ಕೆಂಡದ ಸೆರಗು ಚಿತ್ರ ತೆರೆಗೆ ಬಂದಿದೆ, ನಿರ್ದೇಶಕ ರಾಕಿ ಸೋಮ್ಲಿ, ತಮ್ಮದೆ ಆದ ಕೃತಿಯನ್ನು ಚಿತ್ರದ ಮೂಲಕ ಜನರಮುಂದೆ ತಂದಿದ್ಧಾರೆ.
ಲಂಬಾಣಿ ಸಮುದಾಯದ ಮಹಿಳೆ ಅನಿರೀಕ್ಷಿತವಾಗಿ ಗಂಡನನ್ನು ಕಳೆದುಕೊಂಡ ನಂತರ ಸಮಾಜದಲ್ಲಿ ಹಾಗು ಊರ ಮುಂದೆ ಆಕೆ ಎದುರಿಸುವ ಶೋಷಣೆ, ದಬ್ಬಾಳಿಕೆ, ಒಂಟಿ ಎಂದು ಆಕೆಯನ್ನು ದುರುಪಯೋಗ ಪಡಿಸಿಕೊಳ್ಳುವ ಮಂದಿ, ಮನಸ್ಸಿಲ್ಲದಿದ್ದರೆ ಹೊಂದಿಕೊಳ್ಳುವ ಪರಿಸ್ಥಿತಿಯನ್ನು ತೆರೆಗೆ ಮುಂದೆ ಇಟ್ಟಿದ್ದಾರೆ ನಿರ್ದೇಶಕರು
ಗಂಡನ್ನು ಕಳೆಉಕೊಂಡ ನೇತ್ರಾ (ಶೋಬಿತಾ ) ಇರುವ ಒಬ್ಬಳೇ ಮಗಳು ಪವಿತ್ರ ( ಭೂಮಿ ಶೆಟ್ಟಿ) ಭೂಮಿ ಶೆಟ್ಟಿಯನ್ನು ಅಕ್ಕರೆಯಿಂದ ಬೆಳಸಿದಳು, ಊರ ಗೌಡ ದಾದಾ( ಯಶ್ ಶೆಟ್ಟಿ) ಈಕೆಯ ಸೌದರ್ಯಕ್ಕೆ ನೋಡಿ ಮರಳಾಗಿ ಆಕೆಯನ್ನು ತನ್ನವಳನ್ನಾಗಿ ಮಾಡಿಕೊಂಡು ಬಿಡ್ತಾನೆ. ಈ ನಡುವೆ ಅಮೂಲ್ಯ ( ಪ್ರತಿಮಾ ಠಾಕೂರ್) ಮತ್ತು ಸಮೀರ್ (ಹರೀಶ್ ಅರಸು) ಮೋಜು ಮಸ್ತಿ ಮತ್ತೊಂದೆಡೆ.
ಗಂಡನಿಲ್ಲದಳ ಮನೆಗೆ ಪ್ರತಿದಿನ ಹಲವು ಮಂದಿ ಬಂದರೂ ಮಗಳನ್ನು ಅವರಾರಿಗೂ ಕಾಣದೆ ಬಚ್ಚಿಟ್ಟವಳು, ಒಂದು ದಿನ ಮನೆಗೆ ಬಂದ ಪೊಲೀಸ್ ಅಧಿಕಾರಿ, ತಾಯಿ ಜೊತೆಗೆ ಆಕೆಯ ಮೇಲೂ ಕಣ್ಣು ಹಾಕ್ತಾನೆ. ಮತ್ತೊದೆಡೆ ಪವಿತ್ರ ಕುಸ್ತಿಯಲ್ಲಿ ಪ್ರಶಸ್ತಿ ಗೆದ್ದು ಕಿರಿಯ ವಯಸ್ಸಿನ ಐಪಿಸ್ ಅಧಿಕಾರಿಯಾಗುತ್ತಾಳೆ, ಆ ಸಂಭ್ರಮದಲ್ಲಿ ಊರಿಗೆ ಬಂದಾಗ ಆಕೆಯ ತಾಯಿಯನ್ನು ಕೊಲೆ ಮಾಡಿರುವ ಸಂಗತಿ ತಿಳಿದು ಬಿಡುತ್ತದೆ, ಮಾಲಾಶ್ರೀ ಪಾತ್ರ ಏನು, ಚಿತ್ರದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಚಿತ್ರ ನೋಡಿದರೆ ಚೆನ್ನ
ನಿರ್ದೇಶಕ ರಾಕಿಸೋಮ್ಲಿ ಒಳ್ಳೆಯ ಕತೆ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅದನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ಅಂದುಕೊಂಡು ತರವಲ್ಲಿ ಅವರಿಗೆ ಸಾಧ್ಯವಾಗಿಲ್ಲ, ನೇತ್ರಾ ಪಾತ್ರದ ಒಂದೊಂದು ಸನ್ನಿವೇಶದಲ್ಲಿ ಒಂದೊಂದು ರೀತಿ ಕಾಣುತ್ತಾರೆ, ಮೇಕಪ್, ಕಂಟಿನ್ಯುಟಿ ಕಾಪಾಡಲು ಸಾಧ್ಯವಾಗಿಲ್ಲ.
ಸಿನಿಮಾ ಪ್ರಚಾರಕರ್ತರಾಗಿರುವ ಹರೀಶ್ ಅರಸು, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಿಭಾಯಿಸಿದ್ದಾರೆ. ಭವಿಷ್ಯದಲ್ಲಿ ಒಳ್ಳೆಯ ನಟನಾಗುವ ಎಲ್ಲಾ ಲಕ್ಷಣ ತೋರಿದ್ದಾರೆ
ಭೂಮಿಶೆಟ್ಟಿ, ಮಾಲಾಶ್ರೀ,ಪ್ರತಿಮಾ ಠಾಕೂರು, ವರ್ಧನ್, ಯಶ್ಶೆಟ್ಟಿ, ಬಾಲರಾಜವಾಡಿಮ ಸಿಂಧು ಲೋಕನಾಥ್ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.
ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಾಗ ಅದರ ನಿರೂಪಣೆಯೂ ಅಷ್ಟೇ ಚೆನ್ನಾಗಿದ್ದಾಗ ಮಾತ್ರ ಪ್ರೇಕ್ಷಕರ ಮನಸ್ಸು ತಟ್ಟಲು ಸಾಧ್ಯ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

