The 14th edition of SAIMA will be held on September 12 and 13.

14ನೇ ಆವೃತ್ತಿಯ ಸೈಮಾ ಸೆಪ್ಟಂಬರ್ 12 ಮತ್ತು 13 ರಂದು ಆಯೋಜನೆ - CineNewsKannada.com

14ನೇ ಆವೃತ್ತಿಯ ಸೈಮಾ ಸೆಪ್ಟಂಬರ್ 12 ಮತ್ತು 13 ರಂದು ಆಯೋಜನೆ

ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಜನಪ್ರಿಯ ಪ್ರಶಸ್ತಿ ಸಮಾರಂಭವಾದ ‘ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್’ ಮತ್ತೆ ಬಂದಿದೆ. ಈ ಬಾರಿಯ 14ನೇ ಆವೃತ್ತಿಯ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವು ಬರುವ ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿದೆ.

ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ನಟ ಶ್ರೀಮುರಳಿ, ನಟಿಯರಾದ ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ ಹಾಗೂ ಫಾರಿಯಾ ಅಬ್ದುಲ್ಲಾ ಉಪಸ್ಥಿತರಿದ್ದು ಕಾರ್ಯಕ್ರಮದ ಮಾಹಿತಿ ಹಂಚಿಕೊಂಡರು.

ನಟ ಶ್ರೀಮುರುಳಿ ಮಾತನಾಡಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಆವೃತ್ತಿಯು ಅತ್ಯಂತ ವೈಭವಯುತವಾಗಿ ಮೂಡಿಬರಲಿದೆ. ಕಳೆದ 14 ವರ್ಷಗಳಿಂದ ಸೈಮಾ ಜೊತೆ ನಮಗೆ ಸುದೀರ್ಘ ನಂಟಿದೆ. ನಮ್ಮ ಕುಟುಂಬಕ್ಕೂ ಸೈಮಾಗೂ ವಿಶೇಷವಾದ ಬಾಂಧವ್ಯವಿದೆ. ಅಪ್ಪು ಮಾಮ ಅವರು ನಾಲ್ಕು ಬಾರಿ, ಶಿವಣ್ಣ ಮಾಮ ಮೂರು ಬಾರಿ ಇಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಅಣ್ಣ (ವಿಜಯ್ ರಾಘವೇಂದ್ರ) ಎರಡು ಬಾರಿ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ. ನನಗೂ ‘ಮಫ್ತಿ’ ಚಿತ್ರದ ನಟನೆಗಾಗಿ ‘ಬೆಸ್ಟ್ ಲೀಡ್ (ಕ್ರಿಟಿಕ್)’ ಪ್ರಶಸ್ತಿ ಲಭಿಸಿತ್ತು” ಎಂದು ನೆನಪಿಸಿಕೊಂಡರು.

ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಮಾತನಾಡಿ, “ಸೈಮಾ ಸಂಸ್ಥೆ ಮುಖ್ಯವಾಗಿ ನಂಬಿಕೆ, ಬದ್ಧತೆ ಮತ್ತು ನಿರಂತರತೆಯ ಭದ್ರ ಬುನಾದಿಯ ಮೇಲೆ ನಿರ್ಮಾಣವಾಗಿದೆ. ಸೈಮಾ ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗದೆ, ಇಡೀ ದೇಶದಲ್ಲೇ ಅತ್ಯಂತ ಜನಪ್ರಿಯ ಹಾಗೂ ಗೌರವಾನ್ವಿತ ಪ್ರಶಸ್ತಿ ಸಮಾರಂಭವಾಗಿ ಬೆಳೆದು ನಿಂತಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin