ಟಾಲಿವುಡ್‍ಗೆ ಮತ್ತೊಬ್ಬ ಸೂಪರ್ ಹಿರೋ ಕಲ್ಯಾನ್ ದಾಸರಿ ಎಂಟ್ರಿ
ಟಾಲಿವುಡ್‍ನಲ್ಲಿ ಸದ್ದು ಮಾಡುತ್ತಿರುವ ನಿರ್ದೇಶಕರ ಸಾಲಿನಲ್ಲಿ ಪ್ರಶಾಂತ್ ವರ್ಮಾ ಸಹ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಪ್ರೇಕ್ಷಕರ ಮನ ಗೆದ್ದಿರುವ ಪ್ರಶಾಂತ್ ವರ್ಮಾ, ಮತ್ತೊಮ್ಮೆ ಆರ್‍ಕೆಡಿ ಸ್ಟುಡಿಯೋಸ್ ಜೊತೆ ಕೈಜೋಡಿಸಿದ್ದಾರೆ. “ಅಧಿರ” ಮೂಲಕ ಹೊಸ ಹೀರೋ ಆಗಿ ಕಲ್ಯಾಣ್ ದಾಸರಿ ಅದ್ದೂರಿಯಾಗಿ ಸಿನಿ ಪ್ರವೇಶ ಮಾಡುತ್ತಿದ್ದಾರೆ.

ಟಾಲಿವುಡ್‍ನಲ್ಲಿ ಜಾಂಬಿ ಪ್ರಕಾರದ ಹೊಸ ಅಧ್ಯಾಯವನ್ನು ಪರಿಚಯಿಸಿ, ಭಾರತದ ಮೊದಲ ಮೂಲ ಸೂಪರ್‍ಹೀರೋ ಸಿನಿಮಾ “ಹನುಮಾನ್” ಮೂಲಕ ಕ್ರಾಂತಿಗೆ ಮುನ್ನುಡಿ ಬರೆದಿದ್ದ ಈ ನಿರ್ದೇಶಕ, ಈಗ ಹೊಸ ಪ್ರಾಜೆಕ್ಟ್‍ನತ್ತ ಚಿತ್ತ ಹರಿಸಿದ್ದಾರೆ.
ಹಿರಿಯ ನಟ ಎಸ್. ಜೆ. ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿವಾಜ್ ರಾಮೇಶ್ ದುಗ್ಗಲ್ ಆರ್‍ಕೆಡಿ ಸ್ಟುಡಿಯೋಸ್ ಪ್ರತಿಷ್ಠಿತ ಚಿತ್ರ ನಿರ್ಮಿಸುತ್ತಿದ್ದು, ಶರಣ್ ಕೋಪಿಸೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ
ಭಾರತೀಯ ಇತಿಹಾಸ ಮತ್ತು ಆಧುನಿಕ ಸಿನೆಮಾ ಶೈಲಿಯನ್ನೂ ಒಟ್ಟುಗೂಡಿಸಿಕೊಂಡು “ಅಧಿರ” ಸಿನಿಮಾ ಮೂಡಿಬರಲಿದೆ. ಪ್ರಶಾಂತ್ ವರ್ಮಾ ಸಿನೆಮಾಟಿಕ್ ಯೂನಿವರ್ಸ್ ಮೂಲಕ ಮತ್ತೊಂದು ವಿಶೇಷ ಕಥೆ ನೋಡುಗರ ಕಣ್ಣ ಮುಂದೆ ಬರಲಿದೆ.

ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎಸ್. ಜೆ. ಸೂರ್ಯ ಅವರ ಫಸ್ಟ್ ಲುಕ್ ಪೆÇೀಸ್ಟರ್ ಸಹ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಸೂರ್ಯ ಜತಗೆ ಕಲ್ಯಾಣ್ ದಾಸರಿ ಸಹ ಸೂಪರ್ ಹೀರೋ ರೀತಿ ಕಂಡು ಅಚ್ಚರಿ ಮೂಡಿಸಿದ್ದಾರೆ.
ಧರ್ಮವನ್ನು ರಕ್ಷಿಸಲು ಹೋರಾಡುವ ಹೊಸ ಸೂಪರ್‍ಹೀರೋನ ಕಥೆಯೇ ಈ ?ಅಧಿರ?. ಸಿಡಿಲಿನಂತಿರುವ ಆ?ಯಕ್ಷನ್, ಉಸಿರು ಬಿಗಿಸುವ ದೃಶ್ಯ ವೈಭವ, ಮನ ಸೆಳೆಯುವ ಸಂಗೀತ ಹಾಗೂ ಭವ್ಯ ನಿರೂಪಣೆಯೊಂದಿಗೆ ಈ ಚಿತ್ರವು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

