Majestic then, Majestic 2 today: Bharat, Samhita Vinya duo film

ಅಂದು ಮೆಜೆಸ್ಟಿಕ್ ಚಿತ್ರ, ಇಂದು ಮೆಜೆಸ್ಟಿಕ್-2 : ಭರತ್, ಸಂಹಿತಾ ವಿನ್ಯಾ ಜೋಡಿಯ ಚಿತ್ರ - CineNewsKannada.com

ಅಂದು ಮೆಜೆಸ್ಟಿಕ್ ಚಿತ್ರ, ಇಂದು ಮೆಜೆಸ್ಟಿಕ್-2 : ಭರತ್, ಸಂಹಿತಾ ವಿನ್ಯಾ ಜೋಡಿಯ ಚಿತ್ರ

ಎರಡು ದಶಕಗಳ ಹಿಂದೆ ತೆರೆಗೆ ಬಂದಿದ್ದ “ಮೆಜೆಸ್ಟಿಕ್” ಚಿತ್ರ ನಟ ದರ್ಶನ್ ಅವರಿಗೆ ಚಿತ್ರರಂಗದ ವೃತ್ತಿ ಬದುಕಿನಲ್ಲಿ ಬಹುದೊಡ್ಡ ತಿರುವು ಕೊಟ್ಟ ಚಿತ್ರ. ಇದೀಗ “ಮೆಜೆಸ್ಟಿಕ್-2 “ ಚಿತ್ರದ ಮೂಲಕ ಭರತ್ ಮತ್ತು ನಟಿ ಸಂಹಿತಾ ವಿನ್ಯಾ ಅವರು ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.

ಚಿತ್ರದ ಮುಹೂರ್ತ ನಡೆಯಿತು. ಹಿರಿಯ ನಟಿ ಶೃತಿ ಸೇರಿದಂತೆ ಇಡೀ ಚಿತ್ರತಂಡ ಹಾಜರಿದ್ದು ಮೆಜೆಸ್ಟಿಕ್-2 ಚಿತ್ರಕ್ಕೆ ಶುಭ ಹಾರೈಸಿತು ನಿರ್ಮಾಪಕ ಆನಂದಪ್ಪ ಪತ್ನಿ ನಿರ್ಮಲಾ ಕ್ಲಾಪ್ ಮಾಡಿದರು, ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್‍ಗೆ ಜೋಡಿಯಾಗಿ ಮೆಜೆಸ್ಟಿಕ್-2 ಚಿತ್ರದಲ್ಲಿ ಸಂಹಿತಾ ವಿನ್ಯಾ ಕಾಣಿಸಿಕೊಂಡಿದ್ದಾರೆ. ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಶೃತಿ ನಟಿಸುತ್ತಿದ್ದಾರೆ.

ಈ ವೇಳೆ ನಿರ್ದೇಶಕ ರಾಮು ಮಾತನಾಡಿ, ಮೆಜೆಸ್ಟಿಕ್‍ನಲ್ಲಿ ಏನೆನೆಲ್ಲ ನಡೆಯುತ್ತಿವೆ ಎನ್ನುವ ಘಟನೆ ಇಟ್ಟುಕೊಂಡು ಮೆಜೆಸ್ಟಿಕ್ ಕಥೆ ಬರೆಯಲಾಗಿದೆ ರೌಡಿಸಂ ಹೇಗೆ ನಡೀತಿದೆ ಎಂದುಚಿತ್ರದಲ್ಲಿ ಹೇಳುತ್ತಿದ್ದೇನೆ. ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥೆಯಿದು.ಮೆಜೆಸ್ಟಿಕ್‍ನಲ್ಲಿ ಏನು ನೋಡಿದ್ದಿರೋ ಅದಕ್ಕಿಂತ ಹತ್ತು ಪಟ್ಟು ಈ ಸಿನಿಮಾದಲ್ಲಿ ನೋಡಬಹುದು. ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ತಟ್ಟುತ್ತೇನೆ ಎನ್ನುವ ಧೈರ್ಯ ನನ್ನಲ್ಲಿದೆ ಎಂದು ಹೇಳಿದರು

ನಾಯಕ ಭರತ್ ಮಾತನಾಡಿ ಮೆಜೆಸ್ಟಿಕ್ ಶೀರ್ಷಿಕೆಯೇ ಫವರ್ ಫುಲ್, ಮೆಜೆಸ್ಟಿಕ್ ಅಂದಕೂಡಲೇ ನೆನಪಿಗೆ ಬರುವುದು ಡಿಬಾಸ್, ನಾನು ಅವರ ಅಭಿಮಾನಿ. ಚಿತ್ರದಲ್ಲಿ ಮರಿದಾಸ ಪಾತ್ರ ಮಾಡುತ್ತಿದ್ದು ತಯಾರು ಮಾಡಿಕೊಂಡಿದ್ದೇನೆ ಎಂದರು

ನಾಯಕಿ ಸಂಹಿತಾ ವಿನ್ಯಾ ಮಾತನಾಡಿ ತನ್ನ ಪಾತ್ರದ ಕುರಿತು ಮಾಹಿತಿ ನೀಡಿ ಒಳ್ಳೆಯ ಪಾತ್ರ ಸಿಕ್ಕಿದೆ ನಟಿಸಲು ಎದುರು ನೋಡುತ್ತಿದ್ದೇನೆ ಎಂದರು

ನಿರ್ಮಾಪಕ ಆನಂದಪ್ಪ ಮಾತನಾಡಿ ಪಿಂಕ್‍ನೋಟ್ ಚಿತ್ರ ನಿರ್ಮಿಸುತ್ತಿದ್ದು ಡಬ್ಬಿಂಗ್ ಕಾರ್ಯ ನಡೀತಿದೆ. ಇದು ಎರಡನೇ ಚಿತ್ರ. 2 ಹಂತಗಳಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ ಎಂದರು

ವಿನು ಮನಸು ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin