ವಿನೂತನ ಪ್ರೇಮಕಥಾಹಂದರದ ಆಕ್ಷನ್ ಡ್ರಾಮಾ ಕಥೆಯ ಚಿತ್ರ “ಇರೋದೊಂದು ಜೀವನ..” ಆರಂಭ’ - CineNewsKannada.com

ವಿನೂತನ ಪ್ರೇಮಕಥಾಹಂದರದ ಆಕ್ಷನ್ ಡ್ರಾಮಾ ಕಥೆಯ ಚಿತ್ರ “ಇರೋದೊಂದು ಜೀವನ..” ಆರಂಭ’

“ದೊಡ್ಮನೆಹುಡ್ಗ” ಚಿತ್ರದಲ್ಲಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಹೇಳಿದ್ದ ಡೈಲಾಗ್ “ಇರೋದೊಂದು ಜೀವನ..” ಈಗ ಚಿತ್ರದ ಶೀರ್ಷಿಕೆಯಾಗಿದೆ. ವಿನೂತನ ಪ್ರೇಮಕಥಾಹಂದರದ ಆಕ್ಷನ್ ಡ್ರಾಮಾ ಕಥೆಯ ಚಿತ್ರ ಸೆಟ್ಟೇರಿದೆ

ಸಲಗ ಚಿತ್ರದಿಂದ ಕೆಂಡನಾಗಿ ಖ್ಯಾತಿನಪಡೆದು,ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಮೂಲಕ ನಾಯಕನಟನಾಗಿ ಬಡ್ತಿ ಪಡೆದ ಶ್ರೇಷ್ಠ, “ಇರೋದೊಂದು ಜೀವನ” ಚಿತ್ರಕ್ಕೆ ನಾಯಕನಾಗಿ ಚಿತ್ರರಂಗದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ದಾರೆ. ಶ್ರೇಷ್ಠನಿಗೆ ನಾಯಕಿಯಾಗಿ ನಂದು ರಾಜ್ ಅಭಿನಯಿಸುತ್ತಿದ್ದು ಉದಯ್ ಜಾಗ್ವಾರ್ ಅನ್ನೋ ಉತ್ತರ ಕರ್ನಾಟಕ ಪ್ರತಿಭೆ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದ ಗಮನ ಸೆಳೆಯುವ ಉದ್ದೇಶಹೊಂದಿದ್ಧಾರೆ.

“ಇರೋದೊಂದು ಜೀವನ” ಚಿತ್ರಕ್ಕೆ ಉತ್ತರ ಕರ್ನಾಟಕ ಭಾಗದ ಹೀರೋ ಅಂತ್ಲೇ ಗುರುತಿಸಿಕೊಂಡಿರುವ ನವೀನ್ ಶಂಕರ್ ಉತ್ತರ ಭಾಗದ ಗೆಳೆಯ ಶ್ರೇಷ್ಠನ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.

ಇರೋದೊಂದು ಜೀವನ ಚಿತ್ರವನ್ನು ಎಸ್ ಕುಮಾರ್ ನಿರ್ದೇಶಿಸುತ್ತಿದ್ದು, ಅಜನೀಶ್ ಲೋಕನಾಥ್ ಶಿಷ್ಯ ನವೀನ್ ವಾಸುದೇವ್ ಸಂಗೀತ ಸಂಯೋಜಿಸ್ತಿದ್ದಾರೆ.ಧನು ಛಾಯಾಗ್ರಣಹ ಮಾಡುತ್ತಿದ್ಧಾರೆ. ಎಲ್ ನಾಗಭೂಷಣ್ ಚಿತ್ರ ನಿರ್ಮಿಸ್ತಿದ್ದಾರೆ. ಮುಹೂರ್ತದೊಂದಿಗೆ ಚಿತ್ರೀಕರಣ ಆರಂಭಿಸಿದ್ದು ಚಿತ್ರತಂಡ ಎರಡೇ ಹಂತದಲ್ಲಿ ಚಿತ್ರೀಕರಣ ಮುಗಿಸಿ ಹೊಸವರ್ಷದ ಹೊತ್ತಿಗೆ ತೆರೆಗೆ ಬರುವ ಗುರಿ ಹಾಕಿಕೊಂಡಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin