A father-son bond story, “Janaka” releases on October 4

ತಂದೆ-ಮಗನ ಬಾಂಧವ್ಯದ ಕಥೆಯ “ಜನಕ” ಅಕ್ಟೋಬರ್ 4 ರಂದು ಬಿಡುಗಡೆ - CineNewsKannada.com

ತಂದೆ-ಮಗನ ಬಾಂಧವ್ಯದ ಕಥೆಯ “ಜನಕ” ಅಕ್ಟೋಬರ್ 4 ರಂದು ಬಿಡುಗಡೆ

ತಂದೆ ಮಗನ ಸುತ್ತ ನಡೆಯುವ ಹೃದಯಂಗಮ ಕಥಾಹಂದರ ಹೊಂದಿರುವ ಚಿತ್ರ ‘ಜನಕ’ ಅಕ್ಟೋಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಯುವಪ್ರತಿಭೆ ಮನು ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜೊತೆಗೆ ಚಿತ್ರದ ನಾಯಕನಾಗೂ ಅಭಿನಯಿಸಿದ್ದಾರೆ. ಚಿತ್ರದಲ್ಲಿ ತಂದೆ ಮತ್ತು ಮಗನ ಸಂಬಂಧ ಮತ್ತು ಪ್ರೀತಿಯ ಕುರಿತು ಹೇಳಲಾಗಿದ್ದು, ಮಗ ತನ್ನ ತಂದೆಯ ಹೆಸರನ್ನು ಉಳಿಸಲು ಮತ್ತು ಅವನ ಕನಸನ್ನು ನನಸಾಗಿಸಲು ಹೋಗಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆಂಬುದನ್ನು ವಿವರಿಸಲಾಗಿದೆ.

ಓಂಶಕ್ತಿ ಕ್ರಿಯೇಶನ್ಸ್ ಲಾಂಛನದಲ್ಲಿ ನಾಯಕನ ತಾಯಿಯೂ ಆದ ಎ.ಪ್ರೇಮಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮನು ಹಾಗೂ ತಾಯಿ ಇಬ್ಬರೂ ಸಿನಿಮಾ ಬಗ್ಗೆ ಮೊದಲಿಂದಲೂ ಆಸಕ್ತಿ ಬೆಳೆಸಿಕೊಂಡವರು.

ನಾಯಕ ಕಮ್ ನಿರ್ದೇಶಕ ಮನು ಮಾತನಾಡಿ, ತಾಯಿಯ ಆಸೆಯಂತೆ ಜನಕ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಅಲ್ಲದೆ ಚಿತ್ರದ ನಾಯಕನಾಗಿಯೂ ಸಹ ಅಭಿನಯಿಸಿದ್ದೇನೆ. ಹೀಗೆ ಮೊದಲ ಚಿತ್ರದಲ್ಲೇ ಎರಡೂ ಕೆಲಸ ನಿಭಾಯಿಸುವುದು ನನಗೆ ಸ್ವಲ್ಪ ಕಷ್ಟವಾಯಿತು ಎಂದು ನಾಯಕ ಕಮ್ ನಿರ್ದೇಶಕ ಮನು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.

ತಂದೆಗೆ ತನ್ನ ಮಗನನ್ನು ಒಬ್ಬ ಡಾಕ್ಟರ್ ಮಾಡಬೇಕೆಂಬ ಆಸೆ, ಅದಕ್ಕಾಗಿ ಆತ ಮಗನನ್ನು ಮೆಡಿಕಲ್ ಓದಿಸುತ್ತಾನೆ. ಮುಂದೆ ಆ ಮಗ ತನ್ನ ತಂದೆಯ ಕನಸು ಈಡೇರಿಸಲು ಏನೆಲ್ಲ ಮಾಡುತ್ತಾನೆ. ಎನ್ನುವುದೇ ಚಿತ್ರದ ಕಥೆ. ಕೊನೆಗೆ ಆತ ತಂದೆಯ ಆಸೆಯಂತೆ ಡಾಕ್ಟರ್ ಆಗ್ತಾನಾ ಇಲ್ವಾ ಅನ್ನೋದೇ ಜನಕ ಚಿತ್ರದ ಕಾನ್ಸೆಪ್ಟ್. ಫ್ಯಾಮಿಲಿ ಎಂಟರ್ ಟೈನರ್ ಜತೆಗೆ ಸಸ್ಪೆನ್ಸ್, ಆಕ್ಷನ್ ಕೂಡ ಚಿತ್ರದಲ್ಲಿದೆ. ಈಗಾಗಲೇ ನಮ್ಮ ಚಿತ್ರದ ಟ್ರೈಲರ್ ಎಲ್ಲಾ ಕಡೆ ವೈರಲ್ ಆಗಿದ್ದು ಚಿತ್ರ ಯಾವಾಗ ರಿಲೀಸ್ ಎಂದು ಜನ ಆಸಕ್ತಿಯಿಂದ ಕೇಳುತ್ತಿದ್ದಾರೆ. ಅಕ್ಟೋಬರ್ 4 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದಾರೆ

ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮೊದಲ ನಾಯಕಿ ಪಾತ್ರ ಹಳ್ಳಿಯ ಕಥೆಯಲ್ಲಿ ಬಂದರೆ, ನಾಯಕ ಸಿಟಿಯ ಕಾಲೇಜ್ ಓದುವಾಗ ಒಬ್ಬ ಹುಡುಗಿಯ ಜತೆ ಲವ್ವಾಗುತ್ತದೆ. ಚಿತ್ರದಲ್ಲಿ 5 ಹಾಡುಗಳಿದ್ದು, ರಾಘವ ಸುಭಾಷ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಹಂಪಿ, ಹೊಸಪೇಟೆ, ಮಲ್ಲಾಪುರದ ಸುತ್ತ ಮುತ್ತ ಸುಮಾರು 50 ದಿನಗಳ ಕಾಲೀ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಇನ್ನು ಈ ಚಿತ್ರದಲ್ಲಿ ರಕ್ಷಾ ಹಾಗೂ ಶಾಲಿನಿ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಸುರೇಶ್ ಬಾಬು, ರಾಜಲಕ್ಷ್ಮಿ, ಆನಂದ್ ಈ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.

ರಣಧೀರ ಅವರ ಛಾಯಾಗ್ರಹಣ, ಕೌರವ್ ವೆಂಕಟೇಶ್ ಅವರ ಸಾಹಸ ಸಂಯೋಜನೆ, ಸಲಾಂ ವೀರೋಲಿ ಅವರ ಹಿನ್ನೆಲೆ ಸಂಗೀತ ಜನಕ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin