Actor and producer Ashu Bedra released a new movie on his birthday.

ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಪ್ರಕಟಿಸಿದ ನಟ, ನಿರ್ಮಾಪಕ ಅಶು ಬೆದ್ರ - CineNewsKannada.com

ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಪ್ರಕಟಿಸಿದ ನಟ, ನಿರ್ಮಾಪಕ ಅಶು ಬೆದ್ರ

“ಅಳಿದು ಉಳಿದವರು” ಸಿನಿಮಾ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್‍ಗೆ ಪರಿಚಿರತರಾದವರು ಅಶು ಬೆದ್ರ ವಫಾ. ಬರೀ ನಾಯಕನಾಗಿ ಅಲ್ಲ ನಿರ್ಮಾಪಕನಾಗಿ ಕನ್ನಡ ಕಿರುತೆರೆ ಹಾಗೂ ಹಿರಿತೆರೆಗೂ ಗೊತ್ತು ಈ ಪ್ರತಿಭಾನ್ವಿತ ನಟ..ರಾಧಾ ಕಲ್ಯಾಣ ಸೀರಿಯಲ್ ಜೊತೆ ಅಳಿದು ಉಳಿದವರು ಹಾಗೂ ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ ನಿರ್ಮಿಸಿದ್ದ ಅಶು ಬೆದ್ರ ಈಗ ಮತ್ತೊಂದು ಪ್ರಯತ್ನದ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿದೆ. ಅದರ ಮೊದಲ ಭಾಗವಾಗಿ ಇಂದು ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಅಶು ಬೆದ್ರ ಹೊಸ ಸಿನಿಮಾದ ಮೇಕಿಂಗ್‍ನ್ನು ಅವರ ಹುಟ್ಟುಹಬ್ಬ ವಿಶೇಷವಾಗಿ ಅನಾವರಣ ಮಾಡಲಾಗಿದೆ. ಅಶು ಬೆದ್ರ ಜನ್ಮದಿನ. ಅಶು ಜನ್ಮದಿನದ ಉಡುಗೊರೆಯಾಗಿ ಸ್ಪೆಷಲ್ ಝಲಕ್ ಮೂಲಕ ಚಿತ್ರತಂಡ ಶುಭಾಷಯ ಕೋರಿದೆ. ಅಂದಹಾಗೇ ಅಶು ಬೆದ್ರ ಹೊಸ ಕನಸಿಗೆ ಪ್ರವೀಣ್ ಕಾಡಶೆಟ್ಟಿ ಸಾಥ್ ಕೊಡುತ್ತಿದ್ದಾರೆ.

ಚಿತ್ರದ ಮೂಲಕ ಪ್ರವೀಣ್ ಅವರು ನಿರ್ದೇಶಕರಾಗಿ ಆಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸದ್ಯ ಮೇಕಿಂಗ್ ಬಿಡುಗಡೆ ಮಾಡಿರುವ ಚಿತ್ರತಂಡ, ಶೀಘ್ರದಲ್ಲೇ ಟೈಟಲ್ ಜೊತೆಗೆ ಉಳಿದ ತಾರಾಬಳಗ, ತಾಂತ್ರಿಕ ಬಳಗದ ಬಗ್ಗೆ ಮಾಹಿತಿ ನೀಡಲಿದೆ.

ಪ್ರವೀಣ್ ಕಾಡಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಅಶು ಬೆದ್ರ ವಫಾ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇನ್ನೂ ಮೇಕಿಂಗ್ ವಿಡಿಯೋ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಹಳ್ಳಿ ಸೊಗಡನ್ನು ತೆರೆದಿಡುವ ವಿಡಿಯೋ ತುಣುಕು ನೋಡ್ತಿದ್ದರೆ ಸಾಕಷ್ಟು ಜನ ಈ ಸಿನಿಮಾಗೆ ಪರಿಶ್ರಮ ಹಾಕಿರುವುದು ಗೊತ್ತಾಗುತ್ತಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದ್ದು, ಟೈಟಲ್, ಆಕ್ಟರ್..ಹೀಗೆ ಒಂದೊಂದಾಗಿಯೇ ಚಿತ್ರತಂಡ ಅಪ್ ಡೇಟ್ ಕೊಡಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin