ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹುಟ್ಟುಹಬ್ಬಕ್ಕೆ “ದ ಕಫ್ತಾನ್” ಆಲ್ಬಂ ಸಾಂಗ್ ಬಿಡುಗಡೆ
ಹೆಬ್ಬುಲಿ,”ಒಂದಲ್ಲಾ ಎರಡಲ್ಲಾ” ಹಾಗೂ “ರಾಬರ್ಟ್” ಚಿತ್ರಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರಿಗೆ ಜುಲೈ 27 ರಂದು ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪೃಕೃತಿ ಪೆÇ್ರಡಕ್ಷನ್ಸ್ ಮೂಲಕ ಶರಣಪ್ಪ ಗೌರಮ್ಮ ಅವರು “ದ ಕಫ್ತಾನ್” ಆಲ್ಬಂ ಸಾಂಗ್ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಕಿಕ್ ಬಾಕ್ಸಿಂಗ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶರಣಪ್ಪ ಗೌರಮ್ಮ “ಯಾವ ಮೋಹನ ಮುರಳಿ ಕರೆಯಿತು” ಚಿತ್ರದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.
“ನನಗೆ ಉಮಾಪತಿ ಶ್ರೀನಿವಾಸ್, ಅವರ ಮೇಲೆ ಅಪಾರ ಪ್ರೀತಿ ಹಾಗೂ ಗೌರವ. ನಮ್ಮ ಎಲ್ಲಾ ಕೆಲಸಗಳಿಗೂ ಅವರ ಪ್ರೋತ್ಸಾಹ ಇರುತ್ತದೆ. ಹಾಗಾಗಿ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಮುಂಚಿತವಾಗಿಯೇ ತಿಳಿಸುತ್ತಿರುವುದಾಗಿ ನಿರ್ಮಾಪಕ ಶರಣಪ್ಪ ಗೌರಮ್ಮ ತಿಳಿಸಿದ್ದಾರೆ.
ಪದ್ದಿ ಮಲ್ನಾಡ್ ಬರೆದು, ಅನಿಲ್ ಸಿ ಜೆ ಹಾಡಿ, ಸಂಗೀತ ನೀಡಿರುವ ಈ ” ದ ಕಫ್ತಾನ್ ” ಆಲ್ಬಂ ಸಾಂಗ್ ಮಾಸ್ ಮ್ಯೂಸಿಕ್ ಅಡ್ಡ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
ಆಗಸ್ಟ್ ನಲ್ಲಿ ಯಾವ ಮೋಹನ ಮುರಳಿ ಕರೆಯಿತು:
ಈ ನಡುವೆ ನಿರ್ಮಾಪಕ ಶರಣಪ್ಪ ಗೌರಮ್ಮ ಅವರು ನಿರ್ಮಾಣ ಮಾಡಿರುವ ವಿಭಿನ್ನ ಕಥಾ ಹಂದರದ ಚಿತ್ರ ಆಗಸ್ಟ್ ನಲ್ಲಿ ತೆರೆಗೆ ತರುವ ಉದ್ದೇಶವಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ
ಅಂಗವಿಕಲ ಮಗು ಮತ್ತು ನಾಯಿ ನಡುವಿನ ಭಾವನಾತ್ಮಕ ಸಂಬಂಧವನ್ನು ಚಿತ್ರರೂಪಕ್ಕೆ ತಂದಿದ್ದು ಕನ್ನಡದಲ್ಲಿ ಮತ್ತೊಂದು ಅತ್ಯುತ್ತಮ ಚಿತ್ರವಾಗಲಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿವೆ. ಈ ನಡುವೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.