“ಫ್ಲರ್ಟ್” ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದ ನಟ ಚಂದನ್ ಕುಮಾರ್
ಕಿರುತೆರೆ,ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡು ಉದ್ಯಮಿಯೂ ಆಗಿರುವ ನಟ ಚಂದನ್ ಕುಮಾರ್ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ,.ಅದು ಅವರ ಹುಟ್ಟುಹಬ್ಬಕ್ಕೆ.
ಚಂದನ್ ಅವರ 10ನೇ ಚಿತ್ರವನ್ನು ಅವರೇ ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಜೊತೆಗೆ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲು ಸಜ್ಜಾಗಿದ್ದಾರೆ
ಎವರೆಸ್ಟ್ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ನಾಯಕನಾಗಿ ಮತ್ತು ನಿರ್ದೇಶಕನಾಗಿ ನಟಿಸುತ್ತಿರುವ ಹೊಸ ಚಿತ್ರ “ ಪ್ಲರ್ಟ್” ಈಗಾಗಲೇ ಚಿತ್ರೀಕರಣ ಸದ್ದಿಲ್ಲದೆ ಆರಂಭವಾಗಿದ್ದು ಹಿರಿಯ ಕಲಾವಿದರಾದ ಅವಿನಾಶ್,ಸಾಧುಕೋಕಿಲ, ಶೃತಿ,ಗಿರೀಶ್ ಶಿವಣ್ಣ ಸೇರಿದಂತೆ ಮತ್ತಿತರ ಕಲಾವಿದರು ಭಾಗಿಯಾಗಿದ್ದ ನ್ಯಾಯಾಲಯದ ಸನ್ನಿವೇಶ ಸೆರೆ ಹಿಡಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೆರೆಹಿಡಿಯಲಾದ ಚಿತ್ರದ ತುಣುಕುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ ಕುತೂಹಲ ಹುಟ್ಟುಹಾಕಿದ್ದಾರೆ. ಫ್ಲರ್ಟ್ ಚಿತ್ರ ಕನ್ನಡ ಚಿತ್ರರಂಗದ ದೊಡ್ಡ ತಾರಾಬಳಗವಿದೆ. ಜೆಸ್ಸಿ ಗಿಫ್ಟ್ ಸಂಗೀತ, ವೇಣುಗೋಪಾಲ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಬಿಗ್ ಬಾಸ್ ರನ್ನರ್ ಅಪ್ ಆಗಿ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿ, ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕ ಎನ್ನಿಸಿಕೊಂಡಿರೋ ಚಂದನ್, 3000ಕ್ಕೂ ಅಧಿಕ ಎಪಿಸೋಡ್ಸ್‍ಗಳ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ
5 ರಿಯಾಲಿಟಿ ಶೋ ಹಾಗೂ 2 ಭಾಷೆಯಲ್ಲಿ 6 ಧಾರಾವಾಹಿಗಳಲ್ಲಿ ಮಿಂಚಿದ ನಂತರ, ಇದೀಗ ವೃತ್ಯಿ ಬದುಕಿನ ಹೊಸ ಹೆಜ್ಜೆ ಇಟ್ಟಿದ್ದಾರೆ. ಈ ಹುಟ್ಟುಹಬ್ಬಕ್ಕೆ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಸಂಗತಿಯನ್ನು ಎಲ್ಲರೆದುರು ಅನಾವರಣ ಮಾಡಿದ್ದಾರೆ