Actor Kiccha Sudeep produced for Sanchit Sanjeev's sister's son film

ಸಹೋದರಿಯ ಪುತ್ರ ಸಂಚಿತ್ ಸಂಜೀವ್ ಚಿತ್ರಕ್ಕೆ ನಟ ಕಿಚ್ಚ ಸುದೀಪ್ ನಿರ್ಮಾಣ - CineNewsKannada.com

ಸಹೋದರಿಯ ಪುತ್ರ ಸಂಚಿತ್ ಸಂಜೀವ್ ಚಿತ್ರಕ್ಕೆ ನಟ ಕಿಚ್ಚ ಸುದೀಪ್ ನಿರ್ಮಾಣ

ಮ್ಯಾಕ್ಸ್ ಸಿನಿಮಾದ ಬ್ಲಾಕ್ ಬ್ಲಸ್ಟರ್ ಸಕ್ಸಸ್ ಖುಷಿಯಲ್ಲಿರುವ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸುದ್ದಿ ಕೊಟ್ಟಿದ್ದಾರೆ. ಹೊಸ ವರ್ಷಕ್ಕೆ ಅಭಿನಯ ಚಕ್ರವರ್ತಿ ಹೊಸ ಸಿನಿಮಾ ಪ್ರಕಟಿಸಿದ್ದಾರೆ. ಕಿಚ್ಚ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಅಲ್ಲ. ಬದಲಾಗಿ ಸುದೀಪ್ ನಿರ್ಮಾಣ ಮಾಡುತ್ತಿರುವ ಚಿತ್ರ.

#SanchithSanjeev

ಕಿಚ್ಚನ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಮತ್ತು ಕೆ ಆರ್ ಜಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದೆ. ವಿಶೇಷ ಎಂದರೆ ಸಿನಿಮಾಗೆ ನಾಯಕನಾಗಿ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕನಾಗಿ ನಟಿಸ್ತಿದ್ದಾರೆ.

ಸಂಚಿತ್ ಗೆ ಜಿಮ್ಮಿ ಚಿತ್ರದ ಬಳಿಕ ಎರಡನೇ ಚಿತ್ರವಾಗಿದೆ. ಸಿನಿಮಾಗೆ ಕಿಚ್ಚ ಬಂಡವಾಳ ಹೂಡುತ್ತಿರೋದು ಸಿನಿಮಾದ ನಿರೀಕ್ಷೆ ದುಪ್ಪಟ್ಟು ಮಾಡಿದೆ.ಎಕ್ಕ ಸಿನಿಮಾದ ಬಳಿಕ ಕೆ ಆರ್ ಜಿ ಸ್ಟುಡಿಯೋಸ್ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದೆ. ಕೆ ಆರ್ ಜಿ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರ್ತಿದೆ.

ಸುದೀಪ್ ಸಹೋದರಿಯ ಪುತ್ರನ ಸಿನಿಮಾ ಆಗಿರೋದ್ರಿಂದ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಂಚಿತ್ ಮೊದಲ ಸಿನಿಮಾಗೆ ವಿವೇಕ ನಿರ್ದೇಶನದ ಹೊಣೆಗಾರಿಕೆ ಹೊತ್ತಿದ್ದಾರೆ. ನಿರ್ದೇಶಕರ ಚೊಚ್ಚಲ ಸಿನಿಮಾವಾಗಿದೆ.

#SanchithSanjeev

ಈ ಮೊದಲು ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿರೋ ಅನುಭವ ಹೊಂದಿರೋ ವಿವೇಕ, ಈಗ ಸ್ವತಂತ್ರ ನಿರ್ದೇಶಕನಾಗಿ ಸ್ಯಾಂಡಲ್ವುಡ್ ಎಂಟ್ರಿ ಕೊಡುತ್ತಿದ್ದಾರೆ. ಮೈಸೂರು ಮೂಲದ ವಿವೇಕ, ಸಂಚಿತ್ ಗ ವಿಭಿನ್ನ ಕಥೆಯನ್ನ ತೆರೆ ಮೇಲೆ ತರೋ ಪ್ರಯತ್ನ ಮಾಡ್ತಿದ್ದಾರೆ.

#SanchithSanjeev

ಕ್ರೈಂ ಥ್ರಿಲ್ಲರ್ ಸ್ಟೋರಿ ಆಗಿದ್ದು, ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಜನವರಿ 24ರಂದು ಅದ್ದೂರಿಯಾಗಿ ಲಾಂಚ್ ಆಗಲಿದೆ. ಮುಹೂರ್ತದ ಬಳಿಕ ಶೂಟಿಂಗ್ ಕೂಡ ಅಂದಿನಿಂದಲೇ ಪ್ರಾರಂಭವಾಗಲಿದೆ. ಇನ್ನು ಈ ಸಿನಿಮಾದ ನಾಯಕಿ ಯಾರು.. ತಂತ್ರಜ್ಞರು ಯಾರು ಎನ್ನುವ ಅನೇಕ ಪ್ರಶ್ನೆಗಳಿಗೆ ಮುಹೂರ್ತದ ದಿನವೇ ಉತ್ತರ ಸಿಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin