Actor Rithvik, Chaitra starrer "Marnaami" poster released

ನಟ ಋತ್ವಿಕ್, ಚೈತ್ರ ನಟನೆಯ “ಮಾರ್ನಮಿ” ಚಿತ್ರದ ಪೋಸ್ಟರ್ ಬಿಡುಗಡೆ - CineNewsKannada.com

ನಟ ಋತ್ವಿಕ್, ಚೈತ್ರ ನಟನೆಯ “ಮಾರ್ನಮಿ” ಚಿತ್ರದ ಪೋಸ್ಟರ್ ಬಿಡುಗಡೆ

ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗಮನ ಸೆಳೆದಿರುವ ನಟ ಋತ್ವಿಕ್‍ಮಠದ್ ಹಾಗು ನಟನೆ ಹಾಗು ಗ್ಲಾಮರ್‍ನಿಂದ ಮಿಂಚುತ್ತಿರುವ ನಟಿ ಚೈತ್ರಾ ಜೆ ಆಚಾರ್ ಅಭಿನಯಧ ” ಮಾರ್ನಮಿ” ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

ಎಸ್‍ಆರ್‍ವಿ ಚಿತ್ರಮಂದಿರದ ಸಿಬ್ಬಂದಿ ವೆಂಕಟೇಶ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.ಶಿಲ್ಪಾ ನಿಶಾಂತ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು ರಿತಿಶ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದೇ ವೇಳೆ ಚಿತ್ರದ ಟೈಟಲ್ ಟೀಸರ್ ಕೂಡ ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ಪ್ರಕಾಶ್ ತುಮ್ಮಿನಾಡು, ಸೋನುಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದು ಅಕ್ಟೋಬರ್ 1 ರಿಂದ ಚಿತ್ರೀಕರಣ ನಡೆಯಲಿದೆ.ಕರಾವಳಿಯ ಹುಲಿವೇಷ ಸೇರಿದಂತೆ ಅದರ ಹಿನ್ನೆಲೆಯಲ್ಲಿ ಚಿತ್ರದ ಚಿತ್ರೀಕರಣ ಮಾಡುವ ಉದ್ದೇಶ ಹೊಂದಿದೆ.

ನಾಯಕ ಋತ್ವಿಕ್ ಮಠದ್,ಮಾತನಾಡಿ ಕರಾವಳಿ ಭಾಗದ ಸನ್ನಿವೇಶದ ಹಿನ್ನೆಲೆಯಲ್ಲಿ ಚಿತ್ರ ನಡೆಯಲಿದೆ ಕರಾವಳಿ ಭಾಷೆ ,ಹುಲಿ ಕುಣಿತ ಕಲಿಯುತ್ತಿದ್ದೇನೆ. ಮುದ್ದಾದ ಲವ್ ಸ್ಟೋರಿ. ಕರಾವಳಿ ಭಾಗದ ಲವ್ ಸ್ಟೋರಿ ಕಥೆ ಹೊಂದಿದೆ ಎಂದರು.

ಕಿರುತೆರೆ ಮತ್ತು ಸಿನಿಮಾದಲ್ಲಿ ನಟಿಸುತ್ತಿರುವ ಹಿನ್ನೆಲೆಯಲ್ಲಿ ಎರಡೂ ನಿರ್ಮಾಣ ಸಂಸ್ಥೆಯೊಂದಿಗೆ ಮಾತನಾಡಿ ತಲಾ ಹದಿನೈದು ದಿನಗಳನ್ನು ಎರಡು ನಿರ್ಮಾಣ ಸಂಸ್ಥೆಗಳಿಗೆ ನೀಡಲಾಗುವುದು ಚಿತ್ರದಲ್ಲಿ ನಟಿಸುವುದನ್ನು ಎದುರು ನೋಡುತ್ತಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು.

ನಟಿ ಚೈತ್ರಾ ಜೆ ಆಚಾರ್ ಮಾತನಾಡಿ, ಒಳ್ಳೆಯ ಕಥೆ ಎಮೋಷನ್, ಅಪಿಯರನ್ಸ್ ಸೇರಿದಂತೆ ಬ್ಯೂಟಿಫುಲ್ ಲವ್ ಸ್ಟೋರಿ, ಯಂಗ್ ನಿಂದ ಓಲ್ಡ್ ಆಗುವ ತನಕ ಕಥೆ ಸಾಗಲಿದೆ. ಪ್ರತಿಯೊಂದು ಚಿತ್ರವೂ ಮುಖ್ಯ. ಸಿನಿಮಾದಲ್ಲಿ ಭಾಗಿಯಾಗಿದ್ದೆ ಎನ್ನುವ ಹೆಮ್ಮೆ ಇದೆ. ಡೇಟ್ಸ್ ಸಮಸ್ಯೆ ಇದ್ದರೂ ನಿರ್ದೇಶಕರು ನನಗಾಗಿ ಕಾದಿದ್ದಾರೆ. ಜೊತೆಗೆ ಕಥೆ ಕೇಳಿ ಥ್ರಿಲ್ ಆಗಿದ್ದೇನೆ. ಚಿತ್ರೀಕರಣದಲ್ಲಿ ಭಾಗಿಯಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದರು

ನಿರ್ಮಾಪಕ ನಿಶಾಂತ್ ಮಾತನಾಡಿ ಕಿರುತೆರೆಯಲ್ಲಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ನಿರ್ಮಾಣ ಮಾಡುವ ಆಸೆ ಇತ್ತು. ಇದಕ್ಕಾಗಿ ಹಲವಾರು ಕತೆ ಕೇಳಿದ್ದೆವು. ಒಮ್ಮೆ ಪತ್ನಿ ನಾವೆ ಯಾಕೆ ನಿರ್ಮಾಣ ಮಾಡಬಾರದು ಅಂದರು. ನಾಡು, ಕಲೆ ,ಸೇರಿದಂತೆ ಇನ್ನಿತರೆ ವಿಷಯದ ಹಿನ್ನೆಲೆಯಲ್ಲಿ ಚಿತ್ರದ ಕಥೆ ವಸ್ತು ಇದೆ. ದಸರಾದ ಹಿಂದೆ ಮುಂದೆ ನಡೆಯುವ ಕಥೆ. ಹೀಗಾಗಿ ಮಾರ್ನಮಿ ಎನ್ನುವ ಹೆಸರು ಇಡಲಾಗಿದೆ ಎಂದರು ಹೇಳಿದರು

ನಿರ್ಮಾಪಕಿ ಶಿಲ್ಲಾ ನಿಶಾಂತ್ ಮಾತನಾಡಿ, ಪತಿಯ ಕನಸಿಗೆ ಪೂರಕವಾಗಿ ಬೆನ್ನಿಗೆ ನಿಂತಿದ್ದೇನೆ. ಟೀಸರ್ ಚೆನ್ನಾಗಿ ಬಂದಿದೆ ಎಂದರು

ನಿರ್ದೇಶಕ ರಿಷಿತ್ ಶೆಟ್ಟಿ ಮಾತನಾಡಿ ಅಕ್ಟೋಬರ್‍ನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಕಲಾತ್ಮಕ ಚಿತ್ರಗಳಿಗೆ ಹೆಚ್ಚು ಕೆಲಸ ಮಾಡಿದ್ದೇನೆ. ಸುಧಿ ಆರ್ಯನ್ ಉತ್ತಮ ಕಥೆ ಮಾಡಿದ್ದರು. ಮಾರ್ನಮಿ, ಲವ್ ಸ್ಟೋರಿ ಸುತ್ತ ನಡೆಯುವ ಕಥೆ. ಮೂರು ಕಾಲಘಟ್ಟದಲ್ಲಿ ನಡೆಯಲಿದೆ. ಯಶ್ ಶೆಟ್ಟಿ, ಚೈತ್ರಾ ಶೆಟ್ಟಿ ,ಹುಲಿ ವೇಷ ಕಥೆಯ ಹಿನ್ನೆಲೆಯಲ್ಲಿ ಬರುತ್ತೆ. ದೈವರಾಧನೆ ಚಿತ್ರದಲ್ಲಿ ಬಳಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು

ಅಕ್ಟೋಬರ್ 1 ರಿಂದ ಚಿತ್ರೀಕರಣ, ಮಂಗಳೂರು ಸುತ್ತ ಚಿತ್ರೀಕರಣ ನಡೆಯಲಿದೆ ಸುಮಾರು 70 ದಿನಗಳ ಕಾಲ ಚಿತ್ರೀಕರಣ ಮಾಡುವ ಗುರಿ ಹೊಂದಲಾಗಿದೆ. ಸುನಿಮಾದಲ್ಲಿ ಮೂರು ದಸರಾ ತೋರಿಸಲಾಗುತ್ತಿದೆ. ಅದಕ್ಕಾಗಿ ಸೆಟ್ ಹಾಕಲಾಗುವುದು ಎಂದರು

ಸಂಗೀತ ನಿರ್ದೇಶಕ ಚರಣ್ ರಾಜ್, ಕಥೆಗಾರ ಸುಧಿ ಆರ್ಯನ್, ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್ ಮತ್ತಿತತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin