"Karki", a story of caste conflict, will hit the screens on September 20

ಜಾತಿ ಸಂಘರ್ಷದ ಕಥೆಯ “ಕರ್ಕಿ” ಇದೇ ಸೆಪ್ಟೆಂಬರ್ 20 ರಂದು ತೆರೆಗೆ - CineNewsKannada.com

ಜಾತಿ ಸಂಘರ್ಷದ ಕಥೆಯ “ಕರ್ಕಿ” ಇದೇ ಸೆಪ್ಟೆಂಬರ್ 20 ರಂದು ತೆರೆಗೆ

ಸಮಾಜದ ವರ್ಣ ಸಂಘರ್ಷದ ಕಥೆಯನ್ನು ಮುಂದಿಟ್ಟುಕೊಂಡು ನಿರ್ಮಾಣ ಮಾಡಿರುವ ” ಕರ್ಕಿ” ಚಿತ್ರ ಇದೇ ಸೆಪ್ಟೆಂಬರ್ 20 ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ.ತಮಿಳಿನ ಖ್ಯಾತ ನಿರ್ದೇಶಕ ನಿರ್ದೇಶಕ ಪವಿತ್ರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪಳನಿಪ್ರಕಾಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ

ನಿರ್ದೇಶಕ ಪವಿತ್ರನ್ ಮಾತನಾಡಿ, ತಮಿಳಿನ ಮೂಲ ಚಿತ್ರವನ್ನು ಕನ್ನಡದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಇಲ್ಲಿಯ ನೆಟಿವಿಟಿಗೆ ತಕ್ಕಂತೆ ಸಿನಿಮಾ ಮಾಡಲಾಗಿದೆ.ಅದಕ್ಕಾಗಿ ದಾವಣಗೆರೆ ಜಿಲ್ಲೆಯ ಕ್ಯಾಸನಕೆರೆ ಹಳ್ಳಿಯನ್ನು ಆಯ್ಕೆಮಾಡಿಕೊಂಡು ಅಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಮೂಲಕ ಸಾಮಾಜಿಕ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ ಎನ್ನುವ ಮಾಹಿತಿ ಹಂಚಿಕೊಂಡರು

ನಿರ್ಮಾಪಕ ಪಳನಿ ಪ್ರಕಾಶ್ ಮಾತನಾಡಿ ,ಚಿತ್ರವನ್ನು ನಾವೇ ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಹುಟ್ಟಿ ಬೆಳದ ಹಿನ್ನೆಲೆಯಲ್ಲಿ ತಮಿಳು, ಮಲೆಯಾಳಂನಿಂದ ಚಿತ್ರ ನಿರ್ಮಾಣ ಮಾಡುವ ಅವಕಾಶ ಸಿಕ್ಕರೂ ಅದಕ್ಕೆ ಒಪ್ಪಿಗೆ ನೀಡದೆ ಕನ್ನಡದಲ್ಲಿ ಚಿತ್ರ ನಿರ್ಮಾಣ ಮಾಡಿದ್ದೇನೆ. ಇನ್ನೂ ಎರಡು ಕನ್ನಡ ಚಿತ್ರಗಳನ್ನು ನಮ್ಮ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿದೆ. ಚಿತ್ರದ ಕಥೆ ಇಷ್ಟವಾದ ಹಿನ್ನೆಲೆಯಲ್ಲಿ ಸಿನಿಮಾ ಮಾಡಿದ್ದೇನೆ ಎಂದರು.

ಕರ್ಕಿ ಚಿತ್ರವನ್ನು ಹಿಂದಿಯಲ್ಲಿ ಕರಣ್ ಜೋಹರ್ ರಿಮೇಕ್ ಮಾಡಲು ಮುಂದಾಗಿದ್ದಾರೆ ಇದು ಚಿತ್ರ ಬಿಡುಗಡೆಗೆ ಮುನ್ನ ಚಿತ್ರತಂಡಕ್ಕೆ ಸಿಕ್ಕ ಗೆಲುವು ಎಂದು ಮಾಹಿತಿ ಹಂಚಿಕೊಂಡರು

ನಟ ಜೆಪಿ ರೆಡ್ಡಿ ಮಾತನಾಡಿ , ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ನಿರ್ಮಾಪಕರು ಬಿಡುಗಡೆ ಮಾಡ್ತಾ ಇದ್ದಾರೆ. 68 ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಸಮಾಜದಲ್ಲಿ ಮೇಲು ಕೀಳು ಸರಿಯಲ್ಲ ಎಲ್ಲರೂ ಸಮಾನರು ಎನ್ನುವುದನ್ನು ಚಿತ್ರದ ಮೂಲಕ ಹೇಳಲಯ ಹೊರಟಿದ್ದೇವೆ. ಶ್ರೀಮಂತ ಮನೆತನದ ಹುಡುಗಿ ಪರಿಚಯವಾದರೆ ಅದು ಪ್ರೀತಿ ಎಂದು ಯಾಕೆ ಅಂದುಕೊಳ್ಳಬೇಕು .ಸ್ನೇಹಿತರಾಗಿಯೂ ಇರೋಣ ಎಂದು ಹೇಳುವ ಪ್ರಯತ್ನವನ್ನು ಚಿತ್ರದ ಮೂಲಕ ಮಾಡಿದ್ದೇವೆ ಎಂದರು

ಚಿತ್ರಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದೇವೆ. ಸಾಹಿತಿ ಕವಿರಾಜ್ ಅವರು ನಮ್ಮ ಸೊಗಡಿಗೆ ತಕ್ಕಂತೆ ಹಾಡು ಬರೆದಿದ್ದಾರೆ. ಚಿತ್ರೀಕರಣ ಮಾಡಿದ ದಾವಣಗೆರೆ ಹಳ್ಳಿಯಲ್ಲಿ ಶೌಚಾಲಯ ನಿರ್ಮಾಣ ಮಾಡಲು ಚಿತ್ರತಂಸ ಮುಂದಾಗಿದೆ. ನಾಯಿ ಮತ್ತು ಮನುಷ್ಯನ ನಡುವೆ ನಡೆಯುವ ಕಥೆಯೂ ಕೂಡ. ಇದೇ ವಾರ ಚಿತ್ರ ಬಿಡುಗಡೆಯಾಗುತ್ತಿದ್ದು ಎಲ್ಲರ ಸಹಕಾರವಿರಲಿ ಎಂದು ಹೇಳಿದರು

ಖಳನಟ ವಾಲೆ ಮಂಜು ಮಾತನಾಡಿ, ಒಳ್ಳೆಯ ಸಂದೇಶವಿರುವ ಚಿತ್ರ. ನಟನೆಯ ಬಗ್ಗೆ ಅನುಭವ ಇರಲಿಲ್ಲ ನಿರ್ದೇಶಕರು ಹೇಳಿ ಮಾಡಿಸಿದ್ದಾರೆ ಚಿತ್ರಕ್ಕೆ ಸಹಕಾರವಿರಲಿ ಎಂದು ಕೇಳಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin