Actor Vijay Raghavendra's wife Spanda passes away

ನಿದ್ರೆಯಲ್ಲಿದ್ದಾಗಲೇ ಚಿರನಿದ್ರೆಗೆ ಜಾರಿದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ - CineNewsKannada.com

ನಿದ್ರೆಯಲ್ಲಿದ್ದಾಗಲೇ ಚಿರನಿದ್ರೆಗೆ ಜಾರಿದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ

ಕೆಲವೇ ದಿನಗಳಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಾಗಿದ್ದ ನಟ ವಿಜಯ್ ರಾಘವೇಂದ್ರ ಬದುಕಲ್ಲಿ ಬಿರುಗಾಳಿ ಬೀಸಿದೆ. ಪತ್ನಿ ಸ್ಪಂದನ ಬ್ಯಾಂಕಾಂಗ್‍ನಲ್ಲಿ ಹೃಧಾಯಾಘಾತ ಸಂಭವಿಸಿ ನಿಧನರಾಗಿದ್ದಾರೆ. ಸಂಭ್ರಮದ ಆಚರಣೆ ಸಮಯಕ್ಕೆ ಮುನ್ನವೇ ಸೂತಕದ ಛಾಚೆ ಆವರಿಸಿದೆ.

2007ರ ಆಗಸ್ಟ್ 26 ರಂದು ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಪ್ರೀತಿಸಿ ಮದುವೆಯಾಗಿದ್ದರು. ಕೆಲವೇ ದಿನಗಳಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕು ಎನ್ನುವ ಖುಷಿಯಲ್ಲಿದ್ದ ಸಂದರ್ಭದಲ್ಲಿ ನಟ ವಿಜಯ ರಾಘವೇಂದ್ರ ಅವರ ಬಾಳಲ್ಲಿ ಬಿರುಗಾಳಿ ಎದ್ದಿದೆ.

ಮೃತ ಸ್ಪಂದನ, ಪತಿ ವಿಜಯ್ ರಾಘವೇಂದ್ರ ಮತ್ತು ಪುತ್ರ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸ್ಪಂದನ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಕುಟುಂಬದ ಬ್ಯಾಂಕಾಂಗ್ ತೆರಳಿದೆ. ನಿಧನದ ಬಗ್ಗೆ ಕುಟುಂಬದ ಸದಸ್ಯರು ಇನ್ನೂ ಯಾವ ಕಾರಣಕ್ಕೆ ಹೀಗಾಗಿದೆ ಎನ್ನುವ ಮಾಹಿತಿ ಹಂಚಿಕೊಂಡಿಲ್ಲ.

ಸ್ಪಂದನ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಮ್ ಅವರ ಪುತ್ರಿಯಾಗಿದ್ದಾರೆ. ಪುತ್ರಿ ನಿಧನರಾದ ಸುದ್ದು ತಿಳಿಯುತ್ತಿದಂತೆ ಬಿ.ಕೆ ಶಿವರಾಮ್ ಮತ್ತು ಪುತ್ರನ ಜೊತೆಗೂಡಿ ವಿದೇಶದತ್ತ ತೆರಳಿದ್ದಾರೆ

ಅಪೂರ್ವ ಚಿತ್ರದಲ್ಲಿ ಸ್ಪಂದನಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಪತಿಗಾಗಿ ಕಿಸ್ಮತ್ ಎನ್ನುವ ಚಿತ್ರವನ್ನು ಸ್ಪಂದನಾ ನಿರ್ಮಾಣ ಮಾಡಿ ನಿರ್ಮಾಪಕರು ಆಗಿದ್ದರು.

ಬ್ಯಾಂಕಾಕ್‍ನಿಂದ ಸ್ಪಂದನ ಅವರ ಪಾರ್ಥೀವ ಶರೀರವನ್ನು ನಾಳೆ ಬೆಂಗಳೂರಿಗೆ ತರುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕುಟುಂಬದ ಸದಸ್ಯರು ಬ್ಯಾಂಕಾಕ್‍ಗೆ ತೆರಳಿದ್ದು ಎಲ್ಲಾ ಫಾರ್ಮಾಲಿಟಿ ಮುಗಿಸಿಕೊಂಡು ಆ ನಂತರ ನಾಳೆ ಮೃತ ದೇಹವನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಸುಳ್ಳು ಸುದ್ದಿ ಹರಡಬೇಡಿ:ಹರಿಪ್ರಸಾದ್

ಸ್ಪಂದನ ಮರಣೋತ್ತರ ಪರೀಕ್ಷೆ ವರದಿ ಬರುವ ತನಕ ಸುಳ್ಳು ಸುದ್ದಿ, ಊಹಾಪೋಹದ ವಿಷಯ ಹರಡಬೇಡಿ.ಮರಣೋತ್ತರ ಪರೀಕ್ಷೆ ಆಗುವ ತನಕ ಯಾವುದೇ ಕಪೋಲ ಕಲ್ಪಿತ ಸುದ್ದಿ ಪ್ರಸಾರ ಮಾಡಬೇಡಿ, ವರದಿ ಬಂದ ನಂತರ ಏನು ಇದೆಯೋ ಅದನ್ನು ಪ್ರಸಾರ ಮಾಡಿ ಎಂದು ಮಾದ್ಯಮಗಳಿಗೆ ಎಂದು ವಿಧಾನ ಪರಿಷತ್ ಸದಸ್ಯ ಬಿ,ಕೆ ಹರಿಪ್ರಸಾದ್ ತಿಳಿಸಿದ್ದಾರೆ.

ನಾಲ್ಕೈದು ಸಹೋದರ ಸಂಬಂಧಿಯೊಂದಿಗೆ ಸ್ಪಂಧನ ವಿದೇಶಕ್ಕೆ ಪ್ರವಾಸಕ್ಕೆ ಹೋಗಿದ್ದರು. ಆಗ ಈ ದುರ್ಘನೆ ಸಂಭವಿಸಿದೆ ಇದು ನೋವಿನ ಸಂಗತಿ ಎಂದಿದ್ಧಾರೆ.

ಅತ್ತಿಗೆ ಮೇಲೇಳಲಿಲ್ಲ; ಶ್ರೀಮುರಳಿ

ಅತ್ತಿಗೆ ಮಲಗಿದವರು ಎದ್ದೇಳಲಿಲ್ಲ ಅಂತ ನನಗೆ ಸಿಕ್ಕಿರುವ ಮಾಹಿತಿ ಎಂದ ನಟ ಶ್ರೀಮುರುಳಿ ಇಂದಿಲ್ಲಿ ಹೇಳಿದ್ದಾರೆ.

ಸ್ಪಂದನಾ ವಿಜಯ ರಾಘವೇಂದ್ರ ಸಾವಿನ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿದ ಶ್ರೀಮುರುಳಿ,’ಅಣ್ಣ ನನಗೆ ಕಾಲ್ ಮಾಡಿ ಹೇಳಿದ್ದು ಇಷ್ಟೆ. ಅತ್ತಿಗೆ ಮಲಗಿದವರು ಎದ್ದೇಳಲಿಲ್ಲ ಎಂದು ಹೇಳಿದರು ಎಂದಿದ್ದಾರೆ.

ನಂತರ ಏನಾಯಿತು ಎನ್ನುವುದರ ಕುರಿತು ನಾಳೆಯೇ ಸ್ಪಷ್ಟತೆ ಸಿಗಲಿದೆ. ಅತ್ತಿಗೆಯ ಅಗಲಿಕೆ ಆಘಾತ ಮೂಡಿಸಿದೆ’ ಎಂದು ಹೇಳಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin