ಕಿಕ್ ಬಾಕ್ಸಿಂಗ್ ಟು ಸ್ಯಾಂಡಲ್‍ವುಡ್ : ಸಾಧನೆ ಮಾಡುವ ಹಂಬಲ- ನಿರ್ಮಾಪಕ ಶರಣಪ್ಪ
ರಷ್ಯಾದಲ್ಲಿ ನಡೆದ ವಿಶ್ವ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದ ಶರಣಪ್ಪ ಗೌರಮ್ಮ ಅವರು ಇದೀಗ ‘ಯಾವ ಮೋಹನ ಮುರಳಿ ಕರೆಯಿತು” ಚಿತ್ರದ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ.
ಬಾಡಿ ಬಿಲ್ಡರ್ ಕೂಡ ಆಗಿರುವ ಶರಣಪ್ಪ, ಯಾವ ಸ್ಟಾರ್ ಹಿರೋಗೂ ಕಡಿಮೆ ಇಲ್ಲದ ಮೈಕಟ್ಟು ಹೊಂದಿದ್ದಾರೆ. ಶರಣಪ್ಪ ಅವರ ಭಾವಚಿತ್ರ ನೋಡಿದವರೂ ಯಾರೂ ಇವರನ್ನು ನಿರ್ಮಾಪಕ ಅನ್ನುವುದಿಲ್ಲ. ಬದಲಾಗಿ ಬಾಲಿವುಡ್ ನಾಯಕನಂತೆ ಕಾಣುತ್ತಾರೆ. ಅದಕ್ಕೆ ತಕ್ಕಂತೆ ಮೈಕಟ್ಟು ಮತ್ತು ದೇಹವನ್ನು ದಂಡಿಸಿದ್ದಾರೆ. ಉತ್ತಮ ದೇಹಾದಾಧ್ಯತೆ ಹೊಂದಿರುವ ಶರಣಪ್ಪ ಅವರನ್ನು ಮುಂದೊಂದು ದಿನ ನಾಯಕನಾದರು ಅಥವಾ ನೀವೇ ನಾಯಕನಾಗಿ ಎಂದು ನಿರ್ದೇಶಕರೂ ಹೇಳಿದರೂ ಅಚ್ಚರಿಯಿಲ್ಲ.
ಕಿಕ್ ಬಾಕ್ಸಿಂಗ್ ನಿಂದ ಚಿತ್ರರಂಗಕ್ಕೆ ಬಂದ ಬಗೆಯನ್ನು ನಿರ್ಮಾಪಕ ಶರಣಪ್ಪ ಅವರು ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. 2018ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ನಾನು ಮತ್ತು ವಿನೋದ್ ಎನ್ನುವ ಇಬ್ಬರು ಮಾತ್ರ ಪ್ರತಿನಿಧಿಸಿದ್ದೆವು. ಅದರಲ್ಲಿ ನಾನು ಸೈಮಿ ಫೈನಲ್‍ನಲ್ಲಿ ಸೋತು ಕಂಚಿನ ಪದಕ ಪಡೆದೆ ಎಂದಿದ್ದಾರೆ.
ಹಿಂದಿನ ದಿನ 6 ಪಂದ್ಯದಲ್ಲಿ ಭಾಗಿಯಾಗಿದ್ದೆ. ತುಂಬಾ ಸುಸ್ತು ಮತ್ತು ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಚಿನ್ನ ಗೆಲ್ಲಬೇಕು ಎನ್ನುವ ಛಲವಿದ್ದರೂ ದೇಹ ಸ್ಪಂದಿಸಿರಲಿಲ್ಲ. ಹಾಗಂತ ಉತ್ಸಾಹ ಕೂಡ ಕಡಿಮೆ ಇರಲಿಲ. ಚಿನ್ನ ಗೆಲ್ಲುವ ಗುರಿಯೇ ಇತ್ತು. ಆದರೆ ಕಡೆ ಗಳಿಗೆಯಲ್ಲಿ ಸಾಧ್ಯವಾಗಲಿಲ್ಲ.
ಮೊದಲಿನಿಂದಲೂ ಚಿತ್ರರಂಗದಲ್ಲಿ ಸಾಧನೆ ಮಾಡುವ ಹಂಬಲವಿತ್ತು. ಜೊತೆಗೆ ಚಿತ್ರರಂಗವೂ ಉದ್ಯಮವಾಗಿರುವುದರಿಂದ ಇಲ್ಲಿಯೇ ಸಾಧನೆ ಮಾಡಲು ಮುಂದಾಗಿದ್ದೇನೆ. ಚಿತ್ರಕ್ಕೆ ಏನೆಲ್ಲಾ ಬೇಕೋ ಅದನ್ನು ಒದಗಿಸಿದ್ದೇನೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಕನಸು ಕಂಡಿದ್ದಾರೆ. ಚಿತ್ರ ಸದ್ದು ಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ
ಪ್ರವೃತ್ತಿಯಲ್ಲಿ ಬಾಡಿ ಬಿಲ್ಡರ್ ಕೂಡ ಆಗಿದ್ದೇನೆ.ಹೀಗಾಗಿ ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು.ಇಲ್ಲಿಯೇ ನೆಲೆ ಕಂಡುಕೊಳ್ಳಬೇಕು ಎನ್ನುವ ಉದ್ದೇಶದಿಂದ ಚಿತ್ರ ನಿರ್ಮಾಣ ಮಾಡಿದ್ದೇನೆ. ಸರಿ ಸುಮಾರು 1 ಕೋಟಿಗೂ ಅಧಿಕ ವೆಚ್ಚವಾಗಿದೆ. ವಿಭಿನ್ನ ಚಿತ್ರ ಎಂದರು.
ಯಾವ ಮೋಹನ ಮುರಳಿ ಕರೆಯಿತು ಚಿತ್ರ ಮಕ್ಕಳ ಚಿತ್ರ. ಶಿವಮೊಗ್ಗ ಸಾಗರ ಸೇರಿದಂತೆ ಮತ್ತಿತರ ಕಡೆ ಒಂದೇ ಹಂತದಲ್ಲಿ 30 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಎಲ್ಲಾ ಅಂದುಕೊಂಡಂತೆ ಆದರೆ ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಚಿತ್ರ ಯಶಸ್ವಿಯಾದರೆ ಮತ್ತಷ್ಟು ಚಿತ್ರ ಮಾಡುವ ಉದ್ದೇಶ ಮತ್ತು ಗುರಿ ಇದೆ.
ತಮ್ಮ ಪುತ್ರಿ ಪ್ರಕೃತಿ ಸೇರಿದಂತೆ ಹಲವು ಮಂದಿ ಚಿತ್ರದಲ್ಲಿ ನಟಿಸಿದ್ದಾರೆ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ಮತ್ತು ನಂಬಿಕೆ ನಿರ್ಮಾಪಕ ಶರಣಪ್ಪ ಅವರದು.