"Athi I Love You" Releases on December 7: Goa Tour for 7 Lucky Audiences

“ಅಥಿ ಐ ಲವ್ ಯು” ಚಿತ್ರ ಡಿಸೆಂಬರ್ 7 ರಂದು ತೆರೆಗೆ: 7 ಲಕ್ಕಿ ಪ್ರೇಕ್ಷಕರಿಗೆ ಗೋವಾ ಪ್ರವಾಸ - CineNewsKannada.com

“ಅಥಿ ಐ ಲವ್ ಯು” ಚಿತ್ರ ಡಿಸೆಂಬರ್ 7 ರಂದು ತೆರೆಗೆ: 7 ಲಕ್ಕಿ ಪ್ರೇಕ್ಷಕರಿಗೆ ಗೋವಾ ಪ್ರವಾಸ

ಒಂದೇ ಮನೆ, ಗಂಡ-ಹೆಂಡತಿಯ ಎರಡೇ ಪಾತ್ರಗಳು,ಒಂದು ಸನ್ನಿವೇಶ ಮುಂದಿಟ್ಟುಕೊಂಡು ನಿರ್ದೇಶಕ, ನಟ ಲೋಕೋಂದ್ರ ಸೂರ್ಯ ಅವರು ಆಕ್ಷನ್ ಕಟ್ ಹೇಳಿ ನಟಿಸಿರುವ “”ಅಥಿ ಐ ಲವ್ ಯು” ಡಿಸೆಂಬರ್ 7 ರಂದು ತೆರೆಗೆ ಬರಲು ಸಜ್ಜಾಗಿದೆ. ಗಂಡ ಹೆಂಡತಿಯ ಕುರಿತಾದ ಚಿತ್ರವಾದ ಹಿನ್ನೆಲೆಯಲ್ಲಿ ಅವರಲ್ಲಿ ಉತ್ತಮ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಚಿತ್ರತಂಡ 7 ಮಂದಿಗೆ ಗೋವಾ ಪ್ರವಾಸ ಪ್ರಾಕೇಜ್ ಪ್ರಕಟಿಸಿದೆ.

ರೆಡ್ ಅಂಡ್ ವೈಟ್ ನಿರ್ಮಾಪಕ ಸವೆನ್ ರಾಜ್ ನಿರ್ಮಾಣದಲ್ಲಿ ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸಿದ್ದು ನಾಯಕಿಯಾಗಿ ಶ್ರಾವ್ಯ ರಾವ್ ನಟಿಸಿದ್ದಾರೆ. ಚಿತ್ರ ಡಿಸೆಂಬರ್ 7ರಂದು ತೆರೆಗೆ ಬರಲಿದ್ದು ವಿಭಿನ್ನ ಕಥೆಯ ಚಿತ್ರವನ್ನು ಜನರ ಮುಂದಿಡಲು ತಂಡ ಮುಂದಾಗಿದೆ.

ಚಿತ್ರಮಂದಿರಕ್ಕೆ ಗಂಡ ಹೆಂಡತಿಯರನ್ನು ಆಕರ್ಷಿಸುವ ಸಲುವಾಗಿ ಗಂಡ ಹೆಂಡತಿ ಟಿಕೆಟ್ ಪಡೆದರೆ ಬಿಡುಗಡೆಯಾದ ದಿನದಿಂದ 7 ದಿನಗಳ ಕಾಲ ಎಲ್ಲಾ ಚಿತ್ರಮಂದಿರ ಮತ್ತು ಮಾಲ್‍ನಲ್ಲಿ ದಿನಕ್ಕೆ ಒಂದು ದಂಪತಿಯನ್ನು ಸಂಜೆ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಅವರಿಗೆ ಗೋವಾಕ್ಕೆ ಉಚಿತ ಪ್ರವಾಸ ಕರೆದುಕೊಂಡು ಹೋಗಲು ತಂಡ ಮುಂದಾಗಿದೆ. ಲಕ್ಕಿ ಅಭಿಮಾನಿ ಪ್ರೇಕ್ಷಕರೊಂದಿಗೆ ನಿರ್ಮಾಪಕ ರೆಡ್ ಅಂಡ್ ವೈಟ್ ನಿರ್ಮಾಪಕ ಸವೆನ್ ರಾಜ್ ಕುಟುಂಬ ಹಾಗು ನಿರ್ದೇಶಕ ಲೋಕೇಂದ್ರ ಸೂರ್ಯ ಕುಟುಂಬ ಜೊತೆಯಾಗಲಿದ್ದಾರೆ.

ನಟ ನಿರ್ಮಾಪಕ ಲೋಕೇಂದ್ರ ಸೂರ್ಯ ಮಾಹಿತಿ ನೀಡಿ, ಪ್ರತಿ ದಿನ ಒಂದ ದಂಪತಿ ಜೋಡಿಯನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು, 7 ದಂಪತಿ ಆಯ್ಕೆಯಾದ ನಂತರ ಡಿಸೆಂಬರ್ 18,19 ಮತ್ತು 20 ರಂದು ಮೂರು ಹಗಲು ಎರಡು ರಾತ್ರಿ ಉಚಿತವಾಗಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು. ಮದ್ಯಾಹ್ನದ ಊಟ ಅವರಿಗೆ ಬಿಟ್ಟಿದ್ದು ಇನ್ನುಳಿದಂತೆ ಬೆಳಗಿನ ಉಪಹಾರ ಮತ್ತು ರಾತ್ರಿ ಊಟ ತಂಡದ್ದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

“”ಅಥಿ ಐ ಲವ್ ಯು” ಚಿತ್ರ ಗಂಡ ಹೆಂಡತಿ ಕುರಿತಾದ ಹಿನ್ನೆಲೆಯಾಗಿರುವುದರಿಂದ ಗಂಡ ಹೆಂಡತಿಗಾಗಿಯೇ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಚಿತ್ರವನ್ನು ನೋಡಿ ದಂಪತಿಗಳು ಗೋವಾ ಪ್ರವಾಸದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇದಲ್ಲದೆ ನಿರ್ಮಾಪಕ ರೆಡ್ ಅಂಡ್ ವೈಟ್ ನಿರ್ಮಾಪಕ ಸವೆನ್ ರಾಜ್ ಅವರು ಗಂಡ ಅಥವಾ ಹೆಂಡತಿ ಇಬ್ಬರರಲ್ಲಿ ಯಾರಾದರೂ ಒಂದು ಟಿಕೆಟ್ ಅನ್ನು ಬುಕ್ ಮೈ ಶೋ ಮೂಲಕ ಖರೀದಿ ಮಾಡಿ ಅದರ ಫೋಟೋವನ್ನು ನಮಗೆ ವಾಟ್ಸ್ ಅಪ್ ಮಾಡಿದರೆ ಮೊಬೈಲ್ ಮೂಲಕವೇ ಮತ್ತೊಂದು ಟಿಕೆಟ್ ಕೊಡುವ ವ್ಯವಸ್ಥೆ ಮಾಡಿದ್ದೇವೆ ಎನ್ನುವ ಮಾಹಿತಿ ನೀಡಿದ್ದಾರೆ

ಚಿತ್ರ ಬಿಡುಗಡೆಯಾದ ದಿನದಿಂದ 7 ದಿನಗಳ ಕಾಲ ದಿನಕ್ಕೊಂದು ದಂಪತಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಈ ಮೂಲಕ ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿಯ ನಡುವೆ ಸಾಮರಸ್ಯ ಹೆಚ್ಚು ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಇದರ ಸದುಪಯೋ ಪಡೆದುಕೊಳ್ಳಿ ಎಂದು ನಿರ್ದೇಶಕರು ಮನವಿ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin