The first look of the film 'The Dark Web' was released by Vasishtha Simha

‘ದಿ ಡಾರ್ಕ್ ವೆಬ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ನಾಯಕ ವಸಿಷ್ಠ ಸಿಂಹ - CineNewsKannada.com

‘ದಿ ಡಾರ್ಕ್ ವೆಬ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ನಾಯಕ ವಸಿಷ್ಠ ಸಿಂಹ

ಸ್ಯಾಂಡಲ್‍ವುಡ್ ನಲ್ಲಿ ಹೊಸ ರೀತಿಯ ಸಿನಿಮಾಗಳು, ಹೊಸ ಕಾನ್ಸೆಪ್ಟ್ ಚಿತ್ರಗಳು ಆಗಾಗ ಬರ್ತಾನೆ ಇರುತ್ತವೆ. ಅದೇ ರೀತಿ ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ಎಂಎನ್ ತಮ್ಮ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸೈಬರ್ ಕ್ರೈಂ ಆಧಾರಿತ ‘ದಿ ಡಾರ್ಕ್ ವೆಬ್’ ಎನ್ನುವ ಚಿತ್ರ ಮಾಡಿದ್ದು ಬಿಡುಗಡೆಗೆ ಸಜ್ಜಾಗಿದೆ..

ಸೈಬರ್ ಕ್ರೈಂ ಕಥಾ ಹಂದರ ಆಧಾರಿತ ‘ದಿ ಡಾರ್ಕ್ ವೆಬ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಕುತೂಹಲ ಹೆಚ್ಚಿಸಿದೆ. ‘ದಿ ಡಾರ್ಕ್ ವೆಬ್’ ಚಿತ್ರದ ಫಸ್ಟ್ ಲುಕ್ ಅನ್ನು ನಟ ವಸಿಷ್ಠ ಸಿಂಹ ರಿವೀಲ್ ಮಾಡುವ ಮೂಲಕ ತಮ್ಮದೇ ಊರಿನ ಪತ್ರಕರ್ತರು ಸೇರಿ ಮಾಡಿರೋ ಸಿನಿಮಾ ಬಗ್ಗೆ ನಟ ವಸಿಷ್ಠ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಫಸ್ಟ್ ಲುಕ್ ರಿಲೀಸ್ ಮಾಡಿದ ಮಾತಾಡಿದ ವಸಿಷ್ಠ ಸಿಂಹ, ‘ಜನನಿ ಜನ್ಮಭೂಮಿಶ್ಚ್ ಸ್ವರ್ಗಾದಪಿ ಗರಿಯಸಿ’ ಎಂಬ ಮಾತಿನಂತೆ ನಮ್ಮೂರು ಎಂದರೆ ಬರುವ ಭಾವನೆಯೇ ಬೇರೆ. ನನ್ನೂರು ಹಾಸನ ಎನ್ನುವುದು ಹೆಮ್ಮೆ. ಈಗ ಇಲ್ಲಿಯೂ ಸಾಕಷ್ಟು ಜನರು ಚಿತ್ರೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಆ ಸಂಖ್ಯೆ ಇನ್ನೂ ಹೆಚ್ಚಬೇಕು’ ಎಂದು ಹೇಳಿದ್ಧಾರೆ.

‘ದಿ ಡಾರ್ಕ್ ವೆಬ್’ ಸಿನಿಮಾದಲ್ಲಿ ನಾಯಕನಾಗಿ ಯುವ ಪ್ರತಿಭೆ ಚೇತನ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬಹುತೇಕ ಪತ್ರಕರ್ತರೇ ಅಭಿನಯ ಮಾಡಿರೋದು ಸಿನಿಮಾದ ವಿಶೇಷ. ಮಂಜು ಬನವಾಸೆ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕಂಡಿದ್ದಾರೆ.

ಚಿತ್ರಕ್ಕೆ ಕಿರಣ್ ಸ್ವಾಮಿ ನಿರ್ದೇಶನ ಮಾಡಿದ್ದಾರೆ. ಚಂದ್ರಮೌಳಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದು ವಿಶಾಕ್ ನಾಗಲಾಪುರ ಸಂಗೀತ ನೀಡಿದ್ದಾರೆ. ಸದ್ಯ ಫಸ್ಟ್ ಲುಕ್ ಮೂಲಕವೇ ಗಮನ ಸೆಳೆಯುತ್ತಿರುವ ಈ ಸಿನಿಮಾದ ಟೀಸರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin