ನಟ ಯಶ್ ಶೆಟ್ಟಿ ಅಭಿನಯದ “ಜಂಗಲ್ ಮಂಗಲ್” ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ
ಭರವಸೆಯ ನಟ ಯಶ್ ಶೆಟ್ಟಿ, ಹರ್ಷಿತ ರಾಮಚಂದ್ರ, ಉಗ್ರಂ ಮಂಜು, ಬಲ ರಾಜವಾಡಿ, ದೀಪಕ್ ರೈ ಪಾಣಾಜೆ, ಚಂದ್ರಹಾಸ್ ಉಳ್ಳಾಲ್ ಮುಂತಾದವರು ಅಭಿನಯಿಸಿರುವ ” ಜಂಗಲ್ ಮಂಗಲ್” ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಇದೊಂದು ಕಾಡಿನಲ್ಲಿ ನಡೆಯುವ ಕಥೆಯಾಗಿದ್ದು, ಕಾಡಿನ ಕಥೆಗೆ ನಾಡಿನ ಜನರು ಫಿದಾ ಆಗಿದ್ದಾರೆ. ಸುನಿ ಸಿನಿಮಾಸ್ ಅರ್ಪಿಸುವ, ಸಹ್ಯಾದ್ರಿ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ರಕ್ಷಿತ್ ಕುಮಾರ್ ನಿರ್ದೇಶನವಿದೆ
ನಾಯಕ ಯಶ್ ಶೆಟ್ಟಿ ಮಾತನಾಡಿ ಚಿತ್ರವನ್ನು ಇಲ್ಲಿಯವರೆಗೂ ನೋಡಿರುವವರ ಮನ ಗೆದ್ದಿದೆ.ಚಿತ್ರ ಬಿಡುಗಡೆಯಾದಗಿನಿಂದ ಈವರೆಗೂ ನಮ್ಮ ಚಿತ್ರ ನೋಡಿದ ಯಾರೊಬ್ಬರೂ ಕೂಡ ಚಿತ್ರ ಚೆನ್ನಾಗಿಲ್ಲ ಎಂದು ಹೇಳಿಲ್ಲ. ಅದು ನಮಗೆ ಬಹಳ ಖುಷಿಯಾದ ವಿಚಾರ. ನಿರ್ದೇಶಕ ಗುರು ದೇಶಪಾಂಡೆ, ನಟರಾದ ಶರಣ್ ಹಾಗೂ ಧ್ರುವ ಸರ್ಜಾ ಅವರಿಗೆ ಕರೆ ಮಾಡಿ ಚಿತ್ರ ಚೆನ್ನಾಗಿದೆ. ತಾವು ಚಿತ್ರ ನೋಡಿ ಎಂದು ಹೇಳಿದರು. ಇದು ಬಹಳ ಅನುಕೂಲವಾಯಿತು. ಅವರಿಗೆ ಧನ್ಯವಾದ. ಇನ್ನೂ, ಚಿತ್ರ ನೋಡಿದ ಕೆಲವರು ತಮ್ಮ ಸ್ನೇಹಿತರಿಗೆ ನೋಡಿ ಅಂತ ಹೇಳುತ್ತಿರುವುದು. ಕೆಲವು ಕಡೆ ತಾವೇ ಶೋಗಳನ್ನು ಆಯೋಜಿಸುತ್ತಿರುವುದು. ಇದೆಲ್ಲಾ ನೋಡಿ ಮನ ತುಂಬಿ ಬಂದಿದೆ. ಕನ್ನಡದಲ್ಲಿ ಒಂದೊಳ್ಳೆ ಚಿತ್ರ ಬಂದಿದೆ ಎಂದು ನೋಡಿದವರು ಹೇಳುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ನಮ್ಮ ಚಿತ್ರವನ್ನು ವೀಕ್ಷಿಸಬೇಕೆಂದು ಮನವಿ ಮಾಡಿದರು.

ನಾಯಕಿ ಹರ್ಷಿಕ ರಾಮಚಂದ್ರ ಮಾತನಾಡಿ ಮೊದಲ ಚಿತ್ರಕ್ಕೆ ಜನರು ತೋರುತ್ತಿರುವ ಒಲವಿಗೆ ಧನ್ಯವಾದ ಹೇಳಿದರು.
ನಿರ್ದೇಶಕ ರಕ್ಷಿತ್ ಕುಮಾರ್ ಮಾತನಾಡಿ ಪ್ರೀಮಿಯರ್ ಶೋ ನಲ್ಲಿ ಭಾಗವಹಿಸಿದ್ದ ಎಲ್ಲರಿಂದಲೂ, ಅದರಲ್ಲೂ ವಿಶೇಷವಾಗಿ ಮಾಧ್ಯಮದವರಿಂದ ಚಿತ್ರಕ್ಕೆ ಸಿಕ್ಕ ಪ್ರಶಂಸೆಗೆ ಮನ ತುಂಬಿ ಬಂದಿದೆ. ಚಿತ್ರದ ಯಶಸ್ಸಿಗೆ ಕಾರಣರಾದ ನನ್ನ ತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಚಿತ್ರ ನೋಡಿದ ಕೆಲವರು. ತುಂಬಾ ಚೆನ್ನಾಗಿದೆ. ಮಲಯಾಳಂ ಚಿತ್ರ ಇದ್ದ ಹಾಗೆ ಇದೆ. ಎನ್ನುತ್ತಿದ್ದಾರೆ. ಇದರಿಂದ ಒಂದು ಕಡೆ ಖುಷಿ. ಮತ್ತೊಂದು ಕಡೆ ಬೇರೆ ಭಾಷೆಯವರು ಈ ಚಿತ್ರ ನೋಡಿ ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಬಂದಿದೆ ಎಂದು ಹೇಳಬೇಕು. ಮುಂದೊಂದು ದಿನ ಆ ದಿನ ಬರುತ್ತದೆ ಎಂಬ ವಿಶ್ವಾಸವಿದೆ. ಎರಡನೇ ವಾರಕ್ಕೆ ಅಡಿ ಇಡುತ್ತಿರುವ ಈ ಸಂದರ್ಭದಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಪ್ರದರ್ಶನ ಕಾಣುತ್ತಿದೆ. ಹೆಚ್ಚಿನ ಜನರು ನಮ್ಮ ಚಿತ್ರವನ್ನು ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದರು

ನಟ ಉಗ್ರಂ ಮಂಜು ಮಾತನಾಡಿ ನನ್ನ ಪಾತ್ರಕ್ಕೆ ಹಾಗೂ ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.

