ಆಗಸ್ಟ್ 23, ಡಾಲಿ ಧನಂಜಯ ಹುಟ್ಟುಹಬ್ಬ: ಅಭಿಮಾನಿಗಳ ಭರ್ಜರಿ ಸಿದ್ದತೆ
ನಟ ರಾಕ್ಷಸ ಡಾಲಿ ಧನಂಜಯ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮ ಸಡಗರದಿಂದ ಆಚರಿಸಲು ಸಜ್ಜಾಗಿದ್ದಾರೆ. ವಿಭಿನ್ನ ರೀತಿಯಲ್ಲಿ ತಮ್ಮ ನೆಚ್ಚಿನ ನಟನ ಸಿಡಿಪಿ ಬಿಡುಗಡೆ ಮಾಡುತ್ತಿದ್ದಾರೆ. ಇದು ಧನಂಜಯ ಅವರ ಜೀವನದಲ್ಲಿ ವಿಶೇಷಗಳಲ್ಲಿ ಒಂದು.
ಆಗಸ್ಟ್ 23 ರಂದು ಡಾಲಿ ಧನಂಜಯ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ನಂದಿ ಲಿಂಕ್ಸ್ ಗ್ರೌಂಡ್‍ನಲ್ಲಿ ಅಭಿಮಾನಿಗಳನ್ನ ಭೇಟಿ ಮಾಡಲಿರುವ ಧನಂಜಯ ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಸಿಡಿಪಿ ಅನು ವಿಶೇಷ ಅತಿಥಿಗಳು ಬಿಡುಗಡೆ ಮಾಡಲಿದ್ದು ಗಮನ ಸೆಳೆದಿದೆ. ಡಾಲಿ ಧನಂಜಯಜೀವನದಲ್ಲಿಯೇ ಸಖತ್ ಸ್ಪೆಷಲ್ ಆಗಿರೋ ಗೆಸ್ಟ್ ನಿಂದ ಸಿಡಿಪಿ ಬಿಡುಗಡೆಯಾಗಲಿದೆ.ಇದೇ ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಸಿಡಿಪಿ ಲಾಂಚ್ ಮಾಡಿಸುತ್ತಿರೋ ಅಭಿಮಾನಿಗಳು ವಿಭಿನ್ನವಾದ ಸಿಡಿಪಿ ಗೆ ಸಿದ್ದತೆ ಮಾಡಿಕೊಂಡಿದ್ದಾರೆ
ಆಗಸ್ಟ್ 22 ಮಧ್ಯರಾತ್ರಿಯಿಂದಲೇ ಹುಟ್ಟುಹಬ್ಬದ ಸಂಭ್ರಮಾಚರಣೆ ಆರಂಭವಾಗಲಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ಜನಸಾಗರವೇ ಹರಿದು ಬರಲಿದೆ, ಧನಂಜಯ ಹುಟ್ಟುಹಬ್ಬದ ಹಿನ್ನಲೆ ಧನಂಜಯ ಸಿಡಿಪಿ ಬಿಡುಗಡೆಆ ಅತಿಥಿ ಯಾರೆನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.