ಬಾಬುಲಾಲ್ ಚಿತ್ರದ “ಫಸ್ಟ್ ಲುಕ್ ” ಬಿಡುಗಡೆ

ಅಗ್ರಸೇನಾ ಚಿತ್ರ ನಿರ್ದೇಶಿಸಿದ್ದ ಮುರುಗೇಶ್ ಕಣ್ಣಪ್ಪ ಈಗ ಸದ್ದಿಲ್ಲದೆ ಮತ್ತೊಂದು ಸಿನಿಮಾಗೆ ಸಿದ್ದತೆ ನಡೆಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಹೆಸರು ಬಾಬುಲಾಲ್. ತುಂಬಾ ಎಮೋಷನ್ಸ್ ಒಳಗೊಂಡಿರುವ ಸಸ್ಪೆನ್ಸ್ ಕಥಾನಕ ಇದಾಗಿದೆ.

ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಬಿಡುಗಡೆ ಮಾಡಲಾಗಿದೆ. ಗಾನಶಿವ ಮೂವೀಸ್ ಲಾಂಛನದಲ್ಲಿ ಬಲರಾಮ್ ಮತ್ತು ಶರತ್ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುರುಗೇಶ್ ಕಣ್ಣಪ್ಪ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ವಾಮಿ ಮೈಸೂರು ಛಾಯಾಗ್ರಹಣ, ಆಕಾಶ್ ಪರ್ವ ಸಂಗೀತ ನಿರ್ದೇಶನ, ಎಂ.ಎನ್. ವಿಶ್ವ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋನೆ, ಕಿನ್ನಾಳ್ ರಾಜ್ , ಪ್ರಮೋದ್ ಮರುವಂತೆ ಸಾಹಿತ್ಯವಿದೆ.
ನಟ ಆರವ್ ಲೋಹಿತ್ ಅವರು ಈ ಚಿತ್ರದ ನಾಯಕ ಬಾಬುಲಾಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಡೈಲಾಗ್ ಕಿಂಗ್ ಸಾಯಿಕುಮಾರ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ಸಕಲೇಶಪುರ, ಬೆಂಗಳೂರು ಅಲ್ಲದೆ ಕೇರಳದ ಸುಂದರ ಹೊರಾಂಗಣದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ