Corona era crime thriller movie “Night Curfew

ಕೊರೋನಾ ಕಾಲದ ಕ್ರೈಮ್ ಥ್ರಿಲ್ಲರ್ ಚಿತ್ರ “ ನೈಟ್ ಕರ್ಫ್ಯೂ - CineNewsKannada.com

ಕೊರೋನಾ ಕಾಲದ ಕ್ರೈಮ್ ಥ್ರಿಲ್ಲರ್ ಚಿತ್ರ “ ನೈಟ್ ಕರ್ಫ್ಯೂ

ಚಿತ್ರ: ನೈಟ್ ಕಪ್ರ್ಯೂ
ನಿರ್ದೇಶನ: ರವೀಂದ್ರ ವೆಂಶಿ
ತಾರಾಗಣ: ಮಾಲಾಶ್ರೀ, ರಂಜನಿ ರಾಘವನ್, ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಸಾಧುಕೋಕಿಲಾ, ಪಾವಗಡ ಮಂಜು, ವರ್ಧನ್ ತೀರ್ಥಹಳ್ಳಿ, ಅಶ್ವಿನ್ ಹಾಸನ್ ಮತ್ತಿತರರು
ರೇಟಿಂಗ್ : 3/5

ಕೊರೋನಾ ಸೋಂಕುಎಂಬ ಮಹಾಮಾರಿ ಜಗತ್ತನ್ನು ವರ್ಷಗಳ ಕಾಲ ತಲ್ಲಣಗೊಳಿಸಿತ್ತು. ಕೊರೋನಾ ಹಿನ್ನೆಲೆ, ಲಾಕ್ ಡೌನ್, ಆಗಿನ ಸಮಸ್ಯೆ, ಸಂಕಷ್ಟ ಎದುರಿಸಿದ ಘಟನೆಗಳನ್ನು ಆಧರಿಸಿ ಚಿತ್ರಗಳು , ವೆಬ್ ಸರಣಿಗಳು ಬಂದಿವೆ. ಇನ್ನೂ ಬರುತ್ತಿವೆಯೂ ಕೂಡ.

ಕೊರೊನಾ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಪರದಾಟ ಒಂದೆಡೆಯಾದರೆ ಆಮ್ಲಜನಕದ ಅಲಭ್ಯತೆ ತಂದ ಸಂಕಷ್ಠ ಸರಮಾಲೆ, ಊಹೆ ಮಾಡಿಕೊಳ್ಳಲು ಮತ್ತು ನಿರೀಕ್ಷಿಸಲಾಗದ ಸಾವು ನೋವು ಮತ್ತಷ್ಟು ಸಂಕಷ್ಠಗಳಿಗೆ ಆಹ್ವಾನ ನೀಡಿತ್ತು ಎನ್ನುವ ವಿಷಯ ಮತ್ತಷ್ಟು ಭಯಭೀತ.

ಕರೋನಾ ಸಮಯದಲ್ಲಿ ಎದುರಿಸಿದ ಅಪರೂಪದ ಘಟನೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ, ನೈಟ್‍ಕಪ್ರ್ಯೂ ಚಿತ್ರವನ್ನು ತೆರೆಗೆ ತಂದಿದ್ಧಾರೆ. ಈ ಮೂಲಕ ವಿಭಿನ್ನ ಬಗೆಯ ಕಥಾಹಂದರ ತಿರುಳನ್ನು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಇಟ್ಟು ಗಮನ ಸೆಳೆದಿದ್ದಾರೆ.

ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹಿರಿಯ ವೈದ್ಯೆ ಡಾ.ದುರ್ಗಾ- ಮಾಲಾಶ್ರೀ ಹಾಗು ಡಾ.ವೇದಾ- ರಂಜನಿರಾಘವನ್ ಸೋಂಕಿಗೆ ಬಾಧೀತರಾದ ಕೊರೋನಾ ಪೀಡಿತರ ಆರೈಕೆ ಮತ್ತು ಅವರನ್ನ ಗುಣಮುಖರಾಗಿಸಲು ಇನ್ನಿಲ್ಲದ ಶ್ರಮ ಮತ್ತು ಪ್ರಯತ್ನ ಪಟ್ಟವರು. ಇಂತಹ ಸಮಯದಲ್ಲಿ ಕೊರೊನಾ ಸೋಂಕು ವಿಷಯವನ್ನು ದುರಪಯೋಗ ಪಡಿಸಿಕೊಂಡ ಅಪರೂಪದ ಕಥೆ ಇದು.

ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗುತ್ತಿಲ್ಲ, ಚಿಕಿತ್ಸೆ ಲಭ್ಯವಿಲ್ಲ ಎಂದಾದ ಎಂತಹ ಕಲ್ಲು ಹೃದಯದ ಮಂದಿಯೂ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುತ್ತಾರೆ. ಅದೇ ಕೆಲಸವನ್ನು ಡಾ. ವೇದಾ ಮಾಡುತ್ತಾರೆ. ಚಿಕಿತ್ಸೆಗೆ ಆರಂಭಿಸುವ ಮುನ್ನವೇ ಆಕೆ ಮೃತಪಟ್ಟಿರುವ ಸಂಗತಿ ಬಯಲಾಗುತ್ತದೆ.

ಮತ್ತೊಂದೆಡೆ ಸ್ನೇಹಿತರಿಬ್ಬರೂ ಎಣ್ಣೆ ಬಾಟಲಿ ಕದಿಯಲು ಬಾರ್‍ವೊಂದಕ್ಕೆ ಹೋದಾಗ ಅಲ್ಲೊಂದು ಶವ ಕಂಡು ಕಕ್ಕಾಬಿಕ್ಕಿಯಾಗುತ್ತಾರೆ. ಹೀಗೆ ಎರಡು ಪ್ರತ್ಯೇಕ ಟ್ರಾಕ್‍ಗಳು ಚಿತ್ರದ ರೋಚಕತೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಹಾಗಾದರೆ ಯುವತಿ ನಿಜಕ್ಕೂ ಕೊರೋನಾದಿಂದಲೇ ಸತ್ತಳಾ ಇಲ್ಲ ಬೇರೇನಾದರೂ ಕೈಚಳಕವಿದೆಯಾ, ಬಾರ್‍ನಲ್ಲಿ ಸತ್ತ ವ್ಯಕ್ತಿಯಾರು ಎನ್ನುವುದು ಚಿತ್ರದ ಕೌತುಕದ ಸಂಗತಿ

ನಿರ್ದೇಶಕ ರವೀಂದ್ರ ವೆಂಶಿ, ಕೊರೋನಾ ಸಮಯದಲ್ಲಿ ಯಾರೂ ಊಹೆ ಮಾಡದ ಅಪರೂಪದ ಮತ್ತು ವಿಭಿನ್ನ ಕಥೆಯನ್ನು ಚಿತ್ರದ ಮೂಲಕ ಕಟ್ಟಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.ವಿಭಿನ್ನ ಚಿತ್ರ ನೀಡಿದ್ದಾರೆ

ಹಿರಿಯ ನಟಿ ಮಾಲಾಶ್ರಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ರಂಜನಿ ರಾಘವನ್ ಕೂಡ, ಉಳಿದಂತೆ ಸಾಧುಕೋಕಿಲ, ಪಾವಗಡ ಮಂಜು, ವರ್ಧನ್, ಪ್ರಮೋದ್ ಶೆಟ್ಟಿ, ರಂಗಾಯಣ ರಘು ಸೇರಿದಂತೆ ಕೆಲ ಪಾತ್ರಗಳಲ್ಲಿ ಗಂಭೀರತೆಯಲ್ಲಿಯೂ ನಗಿಸುವ ಪ್ರಯತ್ನ ಮಾಡಿವೆ. ನೈಜ ಘಟನೆ ಆಧಾರಿತ ಕ್ರೈಮ್ ಥ್ರಿಲ್ಲರ್ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin