Dare Devil Mustafa gave a winning smile

ಗೆಲುವಿನ ನಗೆ ಬೀರಿದ `ಡೇರ್ ಡೆವಿಲ್ ಮುಸ್ತಾಫಾ - CineNewsKannada.com

ಗೆಲುವಿನ ನಗೆ ಬೀರಿದ `ಡೇರ್ ಡೆವಿಲ್ ಮುಸ್ತಾಫಾ

ಹೊಸ ಹುಡುಗರೊಂದಿಗೆ ಹೊಸತನದ ಕಥೆ ಆಧರಿಸಿದ ಚಿತ್ರ “ಡೇರ್ ಡೆವಿಲ್ ಮುಸ್ತಫಾ” ಚಿತ್ರ ಬಿಡುಗಡೆಯಾದ ಎಲ್ಲಾ ಕಡೆಗಳಿಂದ ಪ್ರಶಂಸೆ ವ್ಯಕ್ತವಾಗಿದ್ದು ನಟ ಡಾಲಿ ಧನಂಜಯ ಅವರ ಪ್ರಯತ್ನಕ್ಕೆ ಉಘೇ ಉಘೇ ಎನ್ನಲಾಗಿದೆ. ಇದು ಇನ್ನಷ್ಟು ಪ್ರಯತ್ನಗಳಿಗೆ ಇಂಬ ನೀಡಿದೆ.ಚಿತ್ರಮಂದಿರದ ಮುಂದೆ ನನ್ನ ಕಟೌಟ್ ಹಾಕಿದಾಗಲೂ ಕುಣಿದಿರಲಿಲ್ಲ. ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಟೌಟ್ ಹಾಕಿದಾಗ ಕುಣಿದು ಕುಪ್ಪಳಿದ್ದೇನೆ ಎಂದು ಹೇಳಿಕೊಂಡಿದ್ದಾರೆ ನಟ ಡಾಲಿ ಧನಂಜಯ .

ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಪ್ರೇಕ್ಷಕ ಕೈಬಿಡುವುದಿಲ್ಲ ಎನ್ನವುದು ಮತ್ತೊಮ್ಮೆ ಸಾಬೀತಾಗಿದೆ. ಇದರ ಪರಿಣಾಮ “ಡೇರ್ ಡೆವಿಲ್ ಮುಸ್ತಾಫಾ “ ಚಿತ್ರ ಯಶಸ್ವಿಯಾಗಿದೆ. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಕಥೆಯಾಧಾರಿತ ಸಿನಿಮಾವಾಗಿರುವ ಡೇರ್ ಡೆವಿಲ್ ಮುಸ್ತಾಫಾ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಸಿನಿಮಾ ಪ್ರೇಮಿಗಳಿಂದ ಹಾಗೂ ವಿಮರ್ಷಕರಿಂದಲೂ ಅಪ್ಪುಗೆ ಪಡೆದಿರುವ ಹೃದಯ ಬೆಸೆಯುವ ಕಥೆ ಯಶಸ್ವಿಯಾಗಿ ಮೂರನೇ ವಾರ ಪ್ರದರ್ಶನ ಕಂಡಿದೆ. ಚಿತ್ರತಂಡ ಕೇಕ್ ಕಟ್ ಮಾಡಿ ಯಶಸ್ಸಿನ ಖುಷಿ ಹಂಚಿಕೊಂಡಿದೆ.

ನಟ ಡಾಲಿ ಧನಂಜಯ್ ಮಾತನಾಡಿ, ಗೆಲುವಿನ ಸಂಭ್ರಮವನ್ನು ನೋಡಲು ಬಂದೆ ಮಾತನಾಡುವುದು ಏನು ಇಲ್ಲ. ಎಲ್ಲಾ ಸಿನಿಮಾಗಳಲ್ಲಿಯೂ ದುಡ್ಡು ಇರುವುದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ರಿಲೀಸ್‍ಗೆ ಪಾತ್ರ ಸಿನಿಮಾಗಳು ಖರ್ಚು ಮಾಡಲು ಆಗುವುದಿಲ್ಲ. ಮಾಧ್ಯಮದವರು ಸಿನಿಮಾ ಜೊತೆಗೆ ನಿಂತಿದ್ದೀರಾ. ಪೂರ್ಣಚಂದ್ರ ತೇಜಸ್ವಿ ಅವರನ್ನು ಸೆಲೆಬ್ರೆಟ್ ಮಾಡಲು ಸಿಕ್ಕ ಅವಕಾಶ. ನನ್ನ ಕಟೌಟ್ ಮುಂದೆ ಕುಣಿದಾಗಲು ಇಷ್ಟು ಖುಷಿ ಕೊಟ್ಟಿರಲಿಲ್ಲ. ಅಷ್ಟೊಂದು ಖುಷಿ ಪೂರ್ಣಚಂದ್ರ ತೇಜಸ್ವಿ ಕಟೌಟ್ ಮುಂದೆ ಕುಣಿದಾಗ ಸಿಕ್ಕಿದೆ ಎಂದು ತಿಳಿಸಿದರು.

Daali Dhananjaya

ನಿರ್ದೇಶಕ ಶಶಾಂಕ್ ಸೋಗಲ್ ಮಾತನಾಡಿ, ಒಳ್ಳೆ ಸಿನಿಮಾ ಮಾಡಬೇಕು ಅಂತಾ ಫೆÇೀಕಸ್ ಮಾಡಿದ್ದೆ. ಎಂಜನಿಯರ್ ಓದುವಾಗ ಕನ್ನಡ ಸಿನಿಮಾ ಹೋಗ್ತೀವೆ ಎಂದಾಗ ಬೇರೆ ರೀತಿ ನೋಡುವವರು. ಆಗ ತುಂಬಾ ಕೋಪ ಬರುವುದು. ಒಳ್ಳೆ ಸಿನಿಮಾ ಮಾಡಬೇಕು ಎಂಬ ಒಂದೆ ಉದ್ದೇಶವಿತ್ತು. ಮಾಡಿದ್ದೇನೋ ಇಲ್ವೋ ಗೊತ್ತಿಲ್ಲ. ಜನ ಸ್ವೀಕರಿಸಿದ್ದಾರೆ ಎಂದರೆ ಅದು ಒಳ್ಳೆ ಕೃತಿಯಾಗಿದೆ ಎಂದು ತಿಳಿದುಕೊಳ್ಳುತ್ತೇನೆ.É. ಸಿನಿಮಾಗೆ ಎಲ್ಲೆಡೆಯಿಂದ ರೆಸ್ಪಾನ್ಸ್ ಸಿಗುತ್ತಿದೆ. ಧನಂಜಯ್ ಸರ್ ನಮ್ಮ ಸಿನಿಮಾಗೆ ಬೆಂಬಕವಾಗಿ ನಿಂತಿದ್ಧಾರೆ ಖುಷಿಯಾಗಿದೆ ಜೊತೆಗೆ ಹೊರ ದೇಶದಲ್ಲಿಯೂ ಈ ಕಥೆಯನ್ನು ಮೆಚ್ಚಿಕೊಂಡಿದ್ದಾರೆ ಎಂದರು.

ರಾಮಾನುಜ ಅಯ್ಯಂಗಾರಿ ಪಾತ್ರಧಾರಿ ಆದಿತ್ಯ ಅಶ್ರೀ, ರಾಮಾನುಜ ಅಯ್ಯಂಗಾರಿ ಪಾತ್ರದ ಮೇಲೆ ಪ್ರೀತಿ ಸಿಟ್ಟು ಎಲ್ಲದನ್ನೂ ಮಾಡಿಕೊಂಡಿದ್ದಾರೆ. ಸಿನಿಮಾ ನೋಡಿದ ಮೇಲೆ ಎಲ್ಲರೂ ಎತ್ತಿ ಕೊಂಡಾಡುತ್ತಿದ್ದೀರಾ. 18 ವರ್ಷಕ್ಕೆ ಇಂಡಸ್ಟ್ರೀಗೆ ಬಂದೆ. ಎಷ್ಟೋ ಅವಮಾನ, ಕಾಯುವಿಕೆ ಬಳಿಕ ಒಂದೊಳ್ಳೆ ಪಾತ್ರ ಸಿಕ್ಕಿದೆ. ಜನ ಗುರುತಿಸುತ್ತಿದ್ದಾರೆ. ಈ ಸಿನಿಮಾದಿಂದ ಇನ್ನೊಂದು ಚಿತ್ರದಲ್ಲಿ ನಾಯಕ ನಟಿಸುವ ಅವಕಾಶ ಪಡೆದಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದರು.

ಮುಸ್ತಾಫಾ ಪಾತ್ರಧಾರಿ ಶಿಶಿರ್ ಬೈಕಾಡಿ ಮಾತನಾಡಿ, ಇಂತಹ ಒಳ್ಳೆ ತಂಡದ ಜೊತೆ ಸಿನಿಮಾ ಮಾಡಲು ಅದೃಷ್ಟ ಮಾಡಿದ್ದೇನೆ. ನನ್ನ ಮೊದಲ ಸಿನಿಮಾಗೆ ಇಷ್ಟು ಮಟ್ಟದ ರೆಸ್ಪಾನ್ಸ್ ಸಿಕ್ಕಿರುವುದು ಖುಷಿಕೊಟ್ಟಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಜನ ಸ್ವೀಕರಿಸುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಜನ ತುಂಬಾ ಪ್ರೀತಿ ಮಾಡ್ತಿದ್ದಾರೆ ಎಂದು ಸಂಸತ ಹಂಚಿಕೊಂಡರು

Aditya Ashri and Shishir Baikadi

ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ.


ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‍ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.

ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ರಾಜ್ಯ ಹಾಗೂ ಹೊರ ದೇಶದಲ್ಲಿ 80ಕ್ಕೂ ಹೆಚ್ಚು ಸೆಂಟರ್ ಗಳಲ್ಲಿ ಮೂರನೇ ವಾರವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದುಬೈ, ಅಮೆರಿಕಾ, ಯುರೋಪ್ ದೇಶದಲ್ಲಿ ರಿಲೀಸ್ ಆಗಿರುವ ಪೂರ್ಣಚಂದ್ರ ತೇಜಸ್ವಿ ಕಥೆಗೆ ಭರಪೂರ ಪ್ರತಿಕ್ರಿಯೆ ದೊರೆಯುತ್ತಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin