Director Mansore's New Movie “Doora Teera Yaana”: First Phase Completed

ನಿರ್ದೇಶಕ ಮಂಸೋರೆ ಹೊಸ ಚಿತ್ರ “ ದೂರ ತೀರ ಯಾನ” : ಮೊದಲ ಹಂತ ಪೂರ್ಣ - CineNewsKannada.com

ನಿರ್ದೇಶಕ ಮಂಸೋರೆ ಹೊಸ ಚಿತ್ರ “ ದೂರ ತೀರ ಯಾನ” : ಮೊದಲ ಹಂತ ಪೂರ್ಣ

ಡಿ ಕ್ರಿಯೇಷನ್ಸ್ ಬ್ಯಾನರಿನ ಅಡಿಯಲ್ಲಿ ದೇವರಾಜ್ ಆರ್ ನಿರ್ಮಾಣದ ದೂರ ತೀರ ಯಾನ ಸಿನೆಮಾದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ದ್ವಿತೀಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.

ರಾಷ್ಟ್ರಪ್ರಶಸ್ತಿ ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸತಲೆಮಾರಿನ ಸಂಗೀತಮಯ ಪ್ರೇಮಕಥೆಯ ಈ ಸಿನೆಮಾದ ಮುಖ್ಯಪಾತ್ರದಲ್ಲಿ ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ನಟಿಸುತ್ತಿದ್ದಾರೆ.

ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ, ಬಕ್ಕೇಶ್ ಮತ್ತು ಕಾರ್ತಿಕ್ ಸಂಗೀತ, ಜಯಂತ್ ಕಾಯ್ಕಿಣಿ, ಕವಿರಾಜ್, ಪ್ರಮೋದ್ ಮರವಂತೆ ಗೀತ ಸಾಹಿತ್ಯ, ನಾಗೇಂದ್ರ ಕೆ ಉಜ್ಜನಿ ಸಂಕಲನ, ಸರವಣ ಕಲಾ ನಿರ್ದೇಶನ ಹಾಗೂ ವಿವಿಡ್ ಐ ನಿರ್ಮಾಣ ವಿನ್ಯಾಸದ ಹೊಣೆ ಈ ಸಿನೆಮಾಕ್ಕಿದೆ. ಸಿನಿಮಾದಲ್ಲಿ ಮುಖ್ಯವಾದ ವಿಶೇಷ ಪಾತ್ರಗಳಲ್ಲಿ ಹಲವರು ಪ್ರಮುಖ ನಟಿ-ನಟರು ನಟಿಸಿದ್ದು ವಿವರಗಳನ್ನು ಸದ್ಯದಲ್ಲೆ ತಿಳಿಸುವುದಾಗಿ ಚಿತ್ರತಂಡ ಹೇಳಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin