ಪುತ್ರಿ ಮೋನಿಶಾ ಹಾಗು ವಿನಯ್ ಜೋಡಿಗೆ ಆಕ್ಷನ್‍ಕಟ್ ಹೇಳಲಿರುವ ನಿರ್ದೇಶಕ ವಿಜಯ್ ಕುಮಾರ್
‘ಸಲಗ’ದ “ಭೀಮ” ಬಲದೊಂದಿಗೆ ಸ್ಯಾಂಡಲ್‍ವುಡ್‍ನ ಸ್ಟಾರ್ ನಟ, ನಿರ್ದೇಶಕ ವಿಜಯ್ ಕುಮಾರ್ ಇದೀಗ ಮೂರನೇ ಚಿತ್ರದ ನಿರ್ದೇಶನಕ್ಕೆ ಕೈಹಾಕಿದ್ದಾರೆ.ಅದುವೇ “ಸಿಟಿ ಲೈಟ್ಸ್” ಚಿತ್ರದ ಮೂಲಕ.
ಈ ಚಿತ್ರದಿಂದ ತಮ್ಮ ಪುತ್ರಿ ಮೊನಿಶಾ ಅವರನ್ನು ಬೆಳ್ಳಿತೆರೆಗೆ ಪರಿಚಯ ಮಾಡುತ್ತಿರುವ ವಿಜಯ್ ಕುಮಾರ್, ಇದೀಗ ಮತ್ತೊಂದು ಸುದ್ದಿ ನೀಡಿದ್ದಾರೆ. ಅದುವೇ ದೊಡ್ಮನೆಯ ಕುಡಿ ವಿನಯ್ ರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ
ಪುತ್ರಿ ಮೊನಿಶಾ ನಾಯಕಿಯಾಗಿ ನಟಿಸುತ್ತಿರುವ ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಸಿಟಿ ಲೈಟ್ಸ್” ಚಿತ್ರದ ವಿಭಿನ್ನ ಪೋಸ್ಟರ್‍ನೊಂದಿಗೆ ನಟ ವಿನಯ್ ರಾಜ್ ಕುಮಾರ್ ಅವರನ್ನು ಚಿತ್ರತಂಡದಕ್ಕೆ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ
“ಭೀಮ” ಚಿತ್ರದ ಅತಿದೊಡ್ಡ ಯಶಸ್ಸಿನ ನಂತರ “ಸಿಟಿ ಲೈಟ್ಸ್” ಚಿತ್ರದ ಮೂಲಕ ಮತ್ತಷ್ಟು ನಿರೀಕ್ಷೆ ಹುಟ್ಟುಹಾಕಿದ್ದಾರೆ. ಈ ಚಿತ್ರದ ಮೂಲಕ ವಿಜಯ್ ಕುಮಾರ್ ಯಾವ ವಿಷಯಗಳನ್ನು ಸಮಾಜದ ಮುಂದೆ ಅನಾವರಣ ಮಾಡಲಿದ್ದಾರೆ ಎನ್ನುವ ಅತಿದೊಡ್ಡ ಕುತೂಹಲ ಅವರ ಅಭಿಮಾನಿಗಳಲ್ಲಿ ಅಷ್ಟೇ ಅಲ್ಲ ಕನ್ನಡದ ಸಿನಿ ಪ್ರೇಕ್ಷಕರಲ್ಲಿ ಮನೆ ಮಾಡಿದೆ
ಇತ್ತೀಚೆಗೆ ವಿನಯ್ ರಾಜ್‍ಕುಮಾರ್ ಅವರ “ಪೆಪೆ” ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿ ವಿನಯ್ ರಾಜ್ ಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದ ವಿಜಯ್ ಕುಮಾರ್ ಇದೀಗ ಈ ಜೋಡಿ ಸೇರಿ ಹೊಸ ಸಿನಿಮಾ ಮಾಡಲು ಮುಂದಾಗಿದೆ. ಜೊತೆಗೆ ಪುತ್ರಿ ಮೊನಿಶಾ ನಾಯಕಿಯನ್ನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಹಿನ್ನೆಲೆಯಲ್ಲಿ ಬೆಟ್ಟದಷ್ಟು ನಿರೀಕ್ಷೆ ಹೆಚ್ಚಾಗಿರುವುದಂತೂ ಸುಳ್ಳಲ್ಲ.
“ಸಿಟಿ ಲೈಟ್ಸ್” ಚಿತ್ರದ ವಿಜಯ್ ಕುಮಾರ್ ಅವರು ನಗರ ಜೀವನದ ಏನೆಲ್ಲಾ ಬೆರಗು ಬಹಿರಂಗ ಪಡಿಸಲಿದ್ದಾರೆ ಎನ್ನುವುದು ಸದ್ಯದ ಕುತೂಹಲವೇ ಸರಿ.