ಚಿತ್ರಮಂದಿರದಲ್ಲಿ 25 ದಿನ ಪೂರೈಸಿದ “ಡಾನ್ ಕುಮಾರ”

ಜನ ಮೆಚ್ಚುಗೆ ಪಡೆಯುತ್ತಿರುವ ‘ಡಾನ್ ಕುಮಾರ’ ಚಿತ್ರ ಕಳೆದ ತಿಂಗಳು ಬಿಡುಗಡೆಗೊಂಡು, ಈಗ ಯಶಸ್ವಿ 25 ದಿನಗಳನ್ನು ಪೂರೈಸಿದೆ. ಸದ್ಯ ಆರನೇ ವಾರದಲ್ಲಿ ಮುನ್ನುಗುತ್ತಿದ್ದು ರಾಜ್ಯಾದ್ಯಂತ 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಚೊಚ್ಚಲ ಬಾರಿಗೆ ಎನ್.ನಾಗೇಶ್‍ಕುಮಾರ್ ರಚನೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಡಿ.ಎಂ.ನರಸೇಗೌಡರು ಬಂಡವಾಳ ಹೂಡಿದ್ದಾರೆ.
ಈ ಸಿನಿಮಾ ಭೂಗತಲೋಕದ ಕಥೆ ಒಳಗೊಂಡಿದ್ದು, ರೆಗ್ಯುಲರ್ ಪ್ಯಾಟ್ರನ್‍ದಲ್ಲಿ ಇರದೆ ನಿರೂಪಣೆ ವಿಶೇಷವಾಗಿದೆ. 15 ಸಾಹಸ ದೃಶ್ಯಗಳನ್ನು ಡ್ಯಾಪ್ ಬಳಸದೆ ಶೂಟ್ ಮಾಡಲಾಗಿದೆ. ‘ರಿಯಲ್ ಸ್ಟೋರಿ, ರಿಯಲ್ ಡಾನ್’ ಅಡಿಬರಹವಿದ್ದರೂ ಪ್ರೀತಿ, ರೋಮಾನ್ಸ್, ತಂದೆ ತಾಯಿ ಸೆಂಟಿಮೆಂಟ್ ಎಲ್ಲವು ಇರಲಿದೆ.
6ನೇ ವಾರ ಯಶಸ್ವಿ ಪ್ರರ್ದಶನ :
ನಿರ್ದೇಶಕ ನಾಗೇಶ್ ಕುಮಾರ್ ಮಾಹಿತಿ ನೀಡಿ,ಡಾನ್ ಕುಮಾರ 6 ನೇ ವಾರದಲ್ಲಿ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರರ್ದಶನ ಕಾಣುತ್ತಿದೆ. ಸದ್ಯದಲ್ಲಿಯೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗುವುದು. ಬಜೆಟ್ ಜಾಸ್ತಿ ಆಗಿದ್ದು ನಿರ್ಮಾಪಕರು ಒಪ್ಪಿದರೆ ಚಿತ್ರ ಸೆಟ್ಟೇರಲಿದೆ. ಸದ್ಯದಲ್ಲಿಯೇ ಹೊಸ ಚಿತ್ರ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ

ಚಂದ್ರಶೇಖರ್ ನಾಯಕ. ಸಹನಾ ಮತ್ತು ಪ್ರಕೃತಿ ನಾಯಕಿಯರು. ಆರವ್‍ರುಶಿಕ್ ಸಂಗೀತದಲ್ಲಿ ಐದು ಸೊಗಸಾದ ಹಾಡುಗಳಿಗೆ ಅನಿರುದ್‍ಶಾಸ್ತ್ರೀ, ಅನುರಾಧಭಟ್, ಅವಿನಾಶ್‍ಛಬ್ಬಿ ಧ್ವನಿಯಾಗಿದ್ದಾರೆ.
ಆನಂದ್‍ದಿಂಡವಾರ್ ಛಾಯಾಗ್ರಹಣ, ಧನುಕುಮಾರ್ ನೃತ್ಯ, ಶ್ರೀನಿವಾಸ.ಪಿ.ಬಾಬು ಸಂಕಲನವಿದೆ. ಬೆಂಗಳೂರು,ಮೈಸೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಹಾಗೂ ಸಿಂಗಪುರ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೊದಲ ಚಿತ್ರದಿಂದ ಯಶಸ್ಸು ಪಡೆದಿರುವ ತಂಡವು, ಹೊಸ ಚಿತ್ರಕ್ಕೆ ಸ್ಕ್ರಿಪ್ಟ್ ಸಿದ್ದಪಡಿಸಿಕೊಳ್ಳುತ್ತಿದ್ದು, ಸದ್ಯದಲ್ಲೆ ಅದರ ಮಾಹಿತಿಯನ್ನು ನೀಡುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.