MBA' director Shivakumar is engaged to a doctor
ವೈದ್ಯೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ’ಎಂಬಿಎ’ ನಿರ್ದೇಶಕ ಶಿವಕುಮಾರ್
ಕಲಾ ಸಾಮ್ರಾಟ್ ಎಸ್.ನಾರಾಯಣ್ ಬಳಿ ಸಹಾಯಕರಾಗಿದ್ದ ಶಿವಕುಮಾರ್.ಹೆಚ್.ಪಿ, ಚಿತ್ರರಂಗದಲ್ಲಿ ‘ಹೆಚ್.ಪಿ’ ಅಂತ ಗುರುತಿಸಿಕೊಂಡಿದ್ದರು. ಇದೀಗ ಹೊಸ ಬಾಳಿಗೆ ಅಡಿ ಇಡಲು ಸಜ್ಜಾಗಿದ್ದಾರೆ.
ಕಾಲೇಜಿನಲ್ಲಿ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಪ್ರಸಕ್ತ ಯುವಜನಾಂಗಕ್ಕೆ ಅಂತಲೇ ಇರುವ ‘ಎಂಬಿಎ’ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದರು. ಸಿನಿಮಾವು ಕಳೆದ ವರ್ಷ ಬಿಡುಗಡೆಗೊಂಡು ಯಶಸ್ವಿಯಾಗಿತ್ತು.
ಇದೀಗ ಶಿವಕುಮಾರ್ ಸಿನಿಮಾದ ಕಡೆ ಬ್ಯುಸಿ ಇದ್ದರೂ, ಹೊಸ ಬಾಳಿಗೆ ಹೆಜ್ಜೆ ಇಡುತ್ತಿದ್ದಾರೆ. ಹೊಸದುರ್ಗದ ಫಿಸಿಯೋ ಥೆರಪಿಸ್ಟ್ ಆಗಿರುವ ವೈದ್ಯೆ ಅನುಷಾ ಅವರನ್ನು ಮದುವೆಯಾಗಲಿದ್ದಾರೆ. ಮೊನ್ನೆಯಷ್ಟೇ ಅದ್ದೂರಿಯಾಗಿ ನಿಶ್ಚಿತಾರ್ಥ ಸಂಭ್ರಮ ನಡೆದಿದ್ದು, ನವಂಬರ್‍ದಲ್ಲಿ ಮದುವೆ ಆಗಲಿದ್ದಾರೆ.