ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆಯ ಸಂಗೀತ ನಿರ್ದೇಶಕಿ ಮಾನಸ ಹೊಳ್ಳ
ಕನ್ನಡ ಚಿತ್ರರಂಗದಲ್ಲಿ ಮಹಿಳಾ ಸಂಗೀತ ನಿರ್ದೇಶಕಿಯರ ಸಂಖ್ಯೆ ಕಡಿಮೆ. ವಾಣಿ ಹರಿಕೃಷ್ಣ, ಚೈತ್ರಾ, ಡಾ.ಶಮಿತಾ ಮಲ್ನಾಡ್. ಸಿ.ಆರ್ ಬಾಬಿ, ಇಂದೂ ವಿಶ್ವನಾಥ್ ಸೇರಿದಂತೆ ಹಲವು ತಮಗೆ ಸಿಕ್ಕ ಅವಕಾಶಗಳಲ್ಲಿ ತಮ್ಮ ಸಾಮಥ್ರ್ಯ ನಿರೂಪಿಸುತ್ತಿದ್ದಾರೆ. ಇದೀಗ ಅವರ ಸಾಲಿಗೆ ಮತ್ತೊಬ್ಬರು ಸದ್ದಿಲ್ಲದೆ ಸೇರ್ಪಡೆಯಾಗಿ ಗಮನ ಸೆಳೆಯುತ್ತಿದ್ದಾರೆ. ಅವರೇ ಮಾನಸ ಹೊಳ್ಳ.
ಕನ್ನಡ ಚಿತ್ರರಂಗಕ್ಕೆ ಸಿಕ್ಕ ಭರವಸೆಯ ಮಹಿಳಾ ಸಂಗೀತ ನಿರ್ದೇಶಕಿಯರಲ್ಲಿ ಮುಂಚೂಣಿಯಲ್ಲಿ ನಿಲ್ಲುವರು. ಮೂಲತಃ ಗಾಯಕಿಯೂ ಮಾನಸ ಹೊಳ್ಳ ಅವರಿಗೆ ಸಂಗೀತ ನಿರ್ದೇಶನ ಮತ್ತೊಂದು ಫ್ಲಸ್ ಪಾಯಿಂಟ್.
ಹಿರಿಯ ಕಲಾವಿದ ಶಂಖನಾದ ಅರವಿಂದ್ ಅವರ ಪುತ್ರಿ ಮಾನಸ ಹೊಳ್ಳ ಗಾಯನ, ಸಂಗೀತ ಎರಡೂ ವಿಭಾಗದಲ್ಲೂ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ವಾರವಷ್ಟೇ ತೆರೆಕಂಡ ಬಯಲು ಸೀಮೆ ಚಿತ್ರಕ್ಕೆ ಅವರು ಏಳು ಸುಂದರ ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತ ನಿರ್ವಹಿಸಿದ್ದಾರೆ. ಅಪ್ಪಟ ಉತ್ತರ ಕರ್ನಾಟಕದ ಘಮಲನ್ನು ಹೊಂದಿದ ಈ ಚಿತ್ರ ಸಂಗೀತದಿಂದಲೇ ಹೆಚ್ಚು ಗಮನ ಸೆಳೆಯುತ್ತಿದೆ.
ಸಂಗೀತ ನಿರ್ದೇಶಕಿಯಾಗಿ 6 ಟು 6, ಕನಸು ಮಾರಾಟಕ್ಕಿದೆ, ಮನಸಾಗಿದೆ, ಮಸಣದ ಹೂ ಸೇರಿ 6 ಚಿತ್ರಗಳಿಗೆ ಕೆಲಸ ಮಾಡಿದ್ದಾರೆ ಕನಸು ಮಾರಾಟಕ್ಕಿದೆ ಚಿತ್ರದ ಸಂಗೀತ ನಿರ್ದೇಶನಕ್ಕೆ ಗೋವಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕಿ ಎನ್ನುವ ಗೌರವಕ್ಕೂ ಪಾತ್ರರಾಗಿದ್ಧಾರೆ.
ಮಾನಸ ಹೊಳ್ಳ ಅವರು ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿ ಈವರೆಗೆ ಸುಮಾರು 400ಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದಾರೆ. ಅಧ್ಯಕ್ಷ ಚಿತ್ರದ ಕಣ್ಣಿಗೂ ಕಣ್ಣಿಗೂ, 99, ಧಮಾಕಾ ಸೇರಿದಂತೆ ಸಾಕಷ್ಟು ಹಿಟ್ ಹಾಡುಗಳನ್ನವರು ಹಾಡಿದ್ದಾರೆ.
ಮನೆಯಲ್ಲಿ ತಾಯಿಯೂ ಹಾಡುಗಾರ್ತಿಯಾಗಿದ್ದು, ಮಾನಸ ಅವರಿಗೆ ಚಿಕ್ಕ ವಯಸಿನಿಂದಲೇ ಸಂಗೀತದ ಮೇಲೆ ಹೆಚ್ಚಿನ ಆಸಕ್ತಿ ಮೂಡಲು ಕಾರಣವಾಗಿದೆ. ಬಿ.ಎ ಇನ್ ಮ್ಯೂಸಿಕ್. ನಂತರ ಹಿಂದೂಸ್ತಾನಿ, ವೆಸ್ಟರ್ನ್ ಮ್ಯೂಸಿಕ್ ನಲ್ಲೂ ತರಬೇತಿ ಪಡೆದು ಇದೀಗ ಸಂಗೀತ ನಿರ್ದೇಶಕಿಯಾಗಿದ್ದಾರೆ.
ಒಂದಷ್ಟು ಆಲ್ಬಂಗಳು ಅಲ್ಲದೆ ಹಲವಾರು ಟಿವಿ ಸೀರಿಯಲ್ ಗಳಿಗೂ ಸಹ ಮಾನಸ ಹೊಳ್ಳ ಅವರು ಸಂಗೀತ ಸಂಯೋಜನೆ ಮಾಡಿ ಗುರುತಿಸಿಕೊಂಡಿದ್ದಾರೆ. ಯುಕೆ, ದುಬೈ ಸೇರಿದಂತೆ ವಿದೇಶಗಳಲ್ಲಿ ಮ್ಯೂಸಿಕ್ ಪೆÇ್ರೀಗ್ರಾಮ್ ನೀಡಿ ಸೈ ಎನಿಸಿಕೊಂಡಿದ್ದಾರೆ. ಅಪ್ಪಟ ಕನ್ನಡದ ಪ್ರತಿಭೆಯಾದ ಮಾನಸ ಹೊಳ್ಳ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಸಂಗೀತದ ಅವಕಾಶಗಳು ಸಿಗಬೇಕಿದೆ.
ಇದುವರೆಗೆ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು ಮುಂದೆಯೂ ಕೂಡ ಸಿಕ್ಕ ಅವಕಾಶ ಸಮರ್ಥವಾಗಿ ಬಳಸಿಕೊಳ್ಳುವ ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಇರಾದೆ ಮಾನಸ ಹೊಳ್ಳ ಅವರದು.