ನಿರ್ದೇಶಕರ ಸಂಘದ ಮಹಾಸಭೆ: ಹೊಸ ಯೋಜನೆಗಳ ಬಗ್ಗೆ ಸಮಾಲೋಚನೆ

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸರ್ವ ಸದಸ್ಯರ ಸಭೆ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು.ಹಿರಿಯ ನಿರ್ದೇಶಕರಾದ ಸಾಯಿ ಪ್ರಕಾಶ್, ಜೋಸೈಮನ್, ಟಿ ಎಸ್ ನಾಗಭರಣ, ಬಿ ಎಲ್ ನಾಗಣ್ಣ, ಜೆ ಜಿ ಕೃಷ್ಣ, ಜಯಸಿಂಹ ಮುಸುರಿ, ಟೇಶಿ ವೆಂಕಟೇಶ್, ಪಿ ವಿ ಎಸ್ ಗುರುಪ್ರಸಾದ್ ಮುಂತಾದ ಹಿರಿಯ ನಿರ್ದೇಶಕರೊಂದಿಗೆ ಕಿರಿಯ ನಿರ್ದೇಶಕರುಗಳು ಆಗಮಿಸಿ ಸರ್ವ ಸದಸ್ಯರ ಸಭೆ ಯಶಸ್ವಿಗೊಳಿಸಿದರು.
ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಂಘದ ಹೆಚ್ಚಿನ ಸದಸ್ಯರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಎಲ್ಲಾ ಹಿರಿಯ ನಿರ್ದೇಶಕರುಗಳು ಅಧ್ಯಕ್ಷರ ಕಾರ್ಯವೈಖರಿಯನ್ನು ಶ್ಲಾಘಿಸಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಮತ್ತೆ ಪುನಶ್ಚೇತನ ಗೊಂಡಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿ ಹೊಸ ಯೋಜನೆ ಬಗ್ಗೆ ಸಮಾಲೋಚನೆ ನಡೆಸಿದರು
ಆರು ವರ್ಷಗಳಿಂದ ಸಂಘದ ನವೀಕರಣವೂ ಬಾಕಿ ಉಳಿದಿದ್ದು ಎನ್ನಾರ್ ಕೆ ವಿಶ್ವನಾಥ್‍ಅದಕ್ಕೆ ಬೇಕಾದ ಸಂಪೂರ್ಣ ದಾಖಲೆಯನ್ನು ಉಪ ನಿಬಂಧಕರ ಕಛೇರಿಗೆ ಒದಗಿಸಿ ಸಂಘದ ನವೀಕರಣ ಕಾರ್ಯವನ್ನು ಸಂಪೂರ್ಣ ಗೊಳಿಸಿದ್ದಾರೆ.ಇದರಿಂದ ಮತ್ತೆ ಧೀಮಂತ ನಿರ್ದೇಶಕ ಪುಟ್ಟಣ್ಣ ಕಣಗಾಲರು ಮತ್ತು ಅವರ ತಂಡ ಕಟ್ಟಿರುವ ನಿರ್ದೇಶಕರ ಸಂಘಕ್ಕೆ ಜೀವ ಬಂದಿದೆ.
ಅಧ್ಯಕ್ಷರಾಗಿ ಎನ್ನಾರ್ ಕೆ ವಿಶ್ವನಾಥ್, ಉಪಾಧ್ಯಕ್ಷರಾಗಿ ಎಸ್ ಕೆ ನಾಗೇಂದ್ರ ಅರಸ್, ಜಗದೀಶ್ ಕೊಪ್ಪ, ಕಾರ್ಯದರ್ಶಿಯಾಗಿ ಪಾರ್ಥಸಾರಥಿ ಕೆ, ಜಂಟಿ ಕಾರ್ಯದರ್ಶಿಯಾಗಿ ಎಂ ಡಿ ರಾಮ್ ಪ್ರಸಾದ್, ಖಜಾಂಚಿಯಾಗಿ ಮಂಜುನಾಥ್ ದೈವಜ್ಞ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೋಸೈಮನ್, ಉಮೇಶ್ ನಾಯಕ್, ಆದಿತ್ಯ ಚಿಕ್ಕಣ್ಣ, ಸೆಬಾಸ್ಟಿನ್ ಡೇವಿಡ್, ಮಳವಳ್ಳಿ ಸಾಯಿಕೃಷ್ಣ, ವಿಶಾಲ್ ಧೀರಜ್, ಬಿ ಶಂಕರ್, ಮರಡಿಹಳ್ಳಿ ನಾಗಚಂದ್ರ ಕಾರ್ಯ ನಿರ್ವಹಿಸಲಿದ್ದಾರೆ.