ಸಿದ್ದು ಪೂರ್ಣಚಂದ್ರ ಹೊಸ ಚಿತ್ರ “ಈ ಪಾದ ಪುಣ್ಯ ಪಾದ” ಶೀರ್ಷಿಕೆ ಬಿಡುಗಡೆ
ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಚಿತ್ರ “ಈ ಪಾದ ಪುಣ್ಯ ಪಾದ”. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆಯನ್ನು ಖ್ಯಾತ ನಿರ್ದೇಶಕರಾದ ಶಶಾಂಕ್ ಅನಾವರಣ ಮಾಡಿ ಶುಭ ಕೋರಿದರು.
“ದಾರಿ ಯಾವುದಯ್ಯಾ ವೈಕುಂಠಕೆ”, “ಬ್ರಹ್ಮ ಕಮಲ”, “ತಾರಿಣಿ” ಮುಂತಾದ ಸದಭಿರುಚಿ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ “ಸಿದ್ದು ಪೂರ್ಣಚಂದ್ರ” ರವರು ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಈ ಕಥೆಯ ವಿಶೇಷವೇನೆಂದರೆ ಕಾಲುಗಳ ಮೇಲೆ ಕಥೆ ಬರೆಯಲಾಗಿದೆ.ಎಲ್ಲಾ ಪಾತ್ರಗಳ ಕಾಲುಗಳು ಕಥೆ ಹೇಳುತ್ತವೆ. ಮಗುವಿನ ಪಾದ, ದೊಡ್ಡವರ ಪಾದ, ವಯಸ್ಸಾದ ಪಾದ, ದಣಿದ ಪಾದ, ಖುಷಿಯ ಪಾದ, ಪಾಪದ ಪಾದ, ಆನೆಕಾಲು ರೋಗಿಯ ಪಾದ ಹೀಗೆ ನಾನಾ ಪಾದಗಳಿಂದ ಕೂಡಿದ ವಿನೂತನ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ.
ಮುಖ್ಯಪಾತ್ರದಲ್ಲಿ ಆಟೋ ನಾಗರಾಜ್, ಮಮತಾ ರಾಹುತ್, ಪ್ರಭಾಕರ್ ಬೋರೇಗೌಡ, ಪ್ರಮಿಳಾ ಸುಬ್ರಹ್ಮಣ್ಯಂ, ಹರೀಶ್ ಕುಂದೂರ್, ಸನ್ನಿ, ಇನ್ನೂ ಮುಂತಾದವರ ತಾರಾಗಣವಿದೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಸಂಗೀತ ಅನಂತ್ ಆರ್ಯನ್ ಸಂಗೀತ ನಿರ್ದೇಶನ, ದೀಪಕ್ ಸಂಕಲನ, ನಾಗರತ್ನ ಕೆ ಹೆಚ್ವಸ್ತ್ರ ವಿನ್ಯಾಸ, ದಿಲೀಪ್ ಹೆಚ್ ಆರ್ ಪ್ರೊಡಕ್ಷನ್ಸ್ ಡಿಸೈನ್ ಹಾಗೂ ಬಸವರಾಜ್ ಆಚಾರ್ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಪುಟ್ಟರಾಜು ಎ ಕೆ ಆಲಗೌಡನ ಹಳ್ಳಿ. ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ. ಬೆಂಗಳೂರು ರಾಮನಗರ, ಚನ್ನಪಟ್ಟಣ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಯಲಿದೆ.