iḍugaḍe māḍida naṭa darśan Actor Darshan releases the trailer of the film "Vaman" online

” ವಾಮನ” ಚಿತ್ರದ ಟ್ರೈಲರ್ ಆನ್ ಲೈನ್ ಮೂಲಕ ಬಿಡುಗಡೆ ಮಾಡಿದ ನಟ ದರ್ಶನ್ - CineNewsKannada.com

” ವಾಮನ” ಚಿತ್ರದ ಟ್ರೈಲರ್ ಆನ್ ಲೈನ್ ಮೂಲಕ ಬಿಡುಗಡೆ ಮಾಡಿದ ನಟ ದರ್ಶನ್

ಚಿತ್ರರಂಗದಲ್ಲಿ ಶೋಕ್ದಾರ್ ಎಂದೇ ಜನಪ್ರಿಯತೆ ಪಡೆದಿರುವ ನಟ ಧನ್ವೀರ್ ಗೌಡ ಮತ್ತು ಯುವ ನಟಿ ರೀಷ್ಮಾ ನಾಣಯ್ಯ ಅಭಿನಯದ ಬಹುನಿರೀಕ್ಷಿತ ಚಿತ್ರ ” ವಾಮನ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ

ಚಿತ್ರ ಏಪ್ರಿಲ್ 10 ರಂದು ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಚಿತ್ತದ ಟ್ರೈಲರ್ ಅನ್ನು ಆನ್ ಲೈನ್ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸುತ್ತಿದ್ದ ಪ್ರಸನ್ನ ಚಿತ್ರಮಂದಿರದಲ್ಲಿ ನೆರೆದಿದ್ದ ಅಭಿಮಾನಿಗಳ ಸದ್ದು ಮುಗಿಲು ಮುಟ್ಟಿತ್ತು.

ವಾಮನ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ,ಪ್ರೀತಿ ಇದೆ. ಅದಕ್ಕಾಗಿ ಏನೆಲ್ಲಾ ಮಾಡುತ್ತಾನೆ ಎನ್ನುವುದು ಚಿತ್ರದಲ್ಲಿದೆ. ಚಿತ್ರದ ಮುದ್ದು ರಾಕ್ಷಸಿ ನನ್ನ ಫೇವರೇಟ್, ಮನೆಯಲ್ಲಿ ನನ್ನ ಹೆಂಡತಿಗೂ ಮುದ್ದು ರಾಕ್ಷಸಿ ಅನ್ನೋದು ಎಂದ ನಟ ದರ್ಶನ್ , ನಟ ಧನ್ವೀರ್ ಅವರ ನಾಲ್ಕು ಸಿನಿಮಾಗಳು ಒಂದಕ್ಕಿಂತ ಒಂದು ಚಿತ್ರಗಳು ಚೆನ್ನಾಗಿ ಮೂಡಿಬಂದಿದೆ. ಕನ್ನಡ ಸಿನಿಮಾ ನೋಡಿ, ಹರಸಿ ಹಾರೈಸಿ ಎಂದು ಕೇಳಿಕೊಂಡರು.

ಚೇತನ್ ಗೌಡ ನಿರ್ಮಾಣದ ಚಿತ್ರವನ್ಜು ಶಂಕರ್ ರಾಮನ್ ಆಕ್ಷನ್ ಕಟ್ ಹೇಳಿದ್ದಾರೆ. ನಟ ದರ್ಶನ್ ಅವರ ಕಷ್ಟದ ಸಮಯದಲ್ಲಿ ಕೊತೆ ನಿಂತ ಧನ್ವೀರ್ ಗೌಡ ಅವರ ಕನ್ನಡ ಬಾವುಟ ಚಿತ್ರಗಳು ಚಿತ್ರಮಂದಿರಲ್ಲಿ ರಾಜಾಜಿಸುತ್ತಿದ್ದವು.

ವಾಮನ ಚಿತ್ರದ ಆಕ್ಷನ್ ಟೀಸರ್ ಹಾಗು ಮುದ್ದು ರಾಕ್ಷಸಿ ಸೇರಿದಂತೆ ಚಿತ್ರದ ಮೂರು ಹಾಡುಗಳ ಪ್ರದರ್ನನ ಹಮ್ಮಿಕೊಳ್ಳಲಾಗಿತ್ತು.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾರ್ಯಕ್ರಮಕ್ಕೆ‌ ಬರುತ್ತಾರೆ ಎಂದು ಚಿತ್ರಮಂದಿರದ ಒಳಗೆ ಮತ್ತು ಒಳಗೆ ಸೇರಿದ್ದ ಅಸಂಖ್ಯಾತ ಅಭಿಮಾನಿಗಳ ಕೇಕೆ, ಶಿಳ್ಳೆ, ಆರ್ಭಟ, ದರ್ಶನ್ ಬರುವುದಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಅಸಹನೆಯ ಕಟ್ಟೆ ಹೊಡೆದಿತ್ತು ಕೀರಾಟ ಅರಚಾಟವೇ ಕೇಳುತ್ತಿತ್ತು. ವಿಡಿಯೋ‌ ಮೂಲಕ ದರ್ಶನ್ ಕಾಣಿಸಿಕೊಳ್ಳುತ್ತಿದ್ದಂತೆ ಕೂಗಾಟ ಇನ್ನು ಹೆಚ್ಚಾಗಿತ್ತು..

ನಿರ್ದೇಶಕ ಶಂಕರ್ ರಾಮನ್ ಮಾತನಾಡಿ ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್ ಸರ್ ಅವರಿಗೆ ಧನ್ಯವಾದ. ನಿರ್ಮಾಪಕ ಚೇತನ್‌ ಅವರು ಅದ್ದೂರಿಯಾಗಿ ಚಿತ್ರ ಮೂಡಿ ಬರಲು ಸಹಕಾರ ನೀಡಿದ್ದಾರೆ. ವಾಮನ ಅಪ್ಪಟ‌ ಕನ್ನಡ ಸಿನಿಮಾ.ಸಿನಿಮಾ ಗೆಲ್ಲಿಸಿ ಚಿತ್ರಕ್ಕೆ ಅಮ್ಮನ ಪಾತ್ರಕ್ಕೆ ಹಿರಿಯ ನಟಿ ತಾರಾ ಅವರೇ ಬೇಕು ಎಂದಾಗ ಅದನ್ನು ಒದಗಿಸಿದ್ದಾರೆ. ಜೊತೆಗೆ ನಟರಿಗೆಲ್ಲಾ‌ ಖಳ‌ನಟ ಸಂಪತ್ , ಅವರು ತೆರೆಯ ಮೇಲೆ ಬಂದರೆ ಅವರ ಖದರ್ ಬೇರೆ ರೀತಿ ಇದೆ. ತಾಯಿಯ ವ್ಯಥೆ, ವಾಮನ ಕಥೆ. ಗುಣ ಒಳ್ಳಯನಾ ಕೆಟ್ಟವನಾ ಏಪ್ರಿಲ್ 10 ರಂದು ಗೊತ್ತಾಗಲಿದೆ ಎಂದರು.

ನಿರ್ಮಾಪಕ ಚೇತನ್ ಗೌಡ ಮಾತನಾಡಿ, ತಾಯಿ ಹಾಡು ಬಿಡುಗಡೆ ಮಾಡಿದ ವಿಜಯ ಲಕ್ಷ್ಮಿ ಮೇಡಂ, ಹಾಗು ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್ ಸಾರ್ ಅವರಿಗೆ ಧನ್ಯವಾದ, ಸಿನಿಮಾ ಆರಂಭವಾದದ್ದೆ ಆತ್ಮೀಯ ಸ್ನೇಹಿತ ಮಾರುತಿಗಾಗಿ, ನಿರ್ದೇಶಕ ಶಂಕರ್ ಬರೆದಿರುವ ಒಂದೊಂದು ಡೈಲಾಗ್ ಗಳು ಕಿವಿ ತೂತು ಬೀಳುವ ಹಾಗೆ ಮೂಡಿ ಬಂದಿದೆ. ಸಿನಿಮಾ ಬಗ್ಗೆ ಯಾವುದೇ ಗಂಧಗಾಳಿ ಇರಲಿಲ್ಲ. ಸಿನಿಮಾ ಇಷ್ಟವಾಗಲು ಇಡೀ ತಂಡ ಕಾರಣ ಎಂದು ಹೇಳಿದರು.

ನಾಯಕ ಧನ್ವೀರ್ ಮಾತನಾಡಿ, ದರ್ಶನ್ ಅಣ್ಣ ಇವತ್ತು‌ ಬರುವ ಉದ್ದೇಶ ಇತ್ತು.‌ರಾಜಸ್ತಾನದಲ್ಲಿ ಚಿತ್ರೀಕರಣದಲ್ಲಿದ್ದಾರೆ .‌ ನಿರ್ಮಾಪಕರಿಗೆ ತೊಂದರೆ ಆಗಬಾರದು ಎರಡು ದಿನ ಮುಂಚೆ ಕರೆಸಿ ಹಾರೈಸಿ ಚಿತ್ರಮಂದಿರದಲ್ಲಿ ಚಿತ್ರ ನೋಡುವುದಾಗಿ ಭರವಸೆ ನೀಡಿದ್ದಾರೆ. ಹಾಡು‌ ಬಿಡುಗಡೆ ಮಾಡಿದ ವಿಜಯಲಕ್ಷ್ಮಿ ಅಕ್ಕನಿಗೆ ಧನ್ಯವಾದ.ಇದು ನಾಲ್ಕನೇ ಸಿನಿಮಾ, ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ಪಾತ್ರ ಮಾಡಿದ್ದೇನೆ. ಏಪ್ರಿಲ್ 10 ರಂದು ಚಿತ್ರ ನೋಡಿ ಹರಸಿದರು ಎಂದರು.
ನಾಯಕಿ ರೀಷ್ಮಾ ನಾಣಯ್ಯ ಮಾತನಾಡಿ ಡಿ ಬಾಸ್ ಅವರ ಸೆಲೆಬ್ರಿಟಿಗಳಿಗೆ ಧನ್ಯವಾದ, ಚಿತ್ರದ ಟ್ರೈಲರ್ ಎಲ್ಲರಿಗೂ ಇಷ್ಟವಾಗಲಿದೆ. ನಿರ್ದೇಶಕ ಶಂಕರ್ ರಾಮನ್ ಚಿತ್ರವನ್ನು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ.ಎಲ್ಲರೂ ಚಿತ್ರ ನೋಡಿ ಹರಸಿ ಎಂದು ಕೇಳಿಕೊಂಡರು.

ಮುದ್ದು ರಾಕ್ಷಸಿ ಹಾಡು ಬರೆದಿರುವ ಡಾ. ನಾಗೇಂದ್ರ ಪ್ರಸಾದ್ ಮಾತನಾಡಿ ವಾಮನ ಅಂದ್ರೆ ತ್ರಿವಿಕ್ರಮ. ಆ ಮೂರು ಹೆಜ್ಜೆಯನ್ನು ನೀವು ಇಲ್ಲೇ ಇಟ್ಟಿದ್ದೀರಿ ಅನ್ನಿಸಿದೆ. ಮುದ್ದು ರಾಕ್ಷಿಸಿ ಸೂಪರ್ ಡೂಪರ್ ಹಿಟ್ ಆಗಿದೆ. ಸಿನಿಮಾ ವನ್ನು ಹಿಟ್ ಮಾಡಿ ಎಂದು ಶುಭ ಹಾರೈಸಿದರು.ಬಡವ ಹೀರೋ ಆಗಿದ್ದರೂ, ಶ್ರೀಮಂತ ಹೀರೋ ಆಗಿದ್ದರೂ ಭಾವನಾತ್ಮಕವಾಗಿ ನಟಿಸಿವ ಕಲಾವಿದೆ ಹಿರಿಯ ನಟಿ ತಾರಾ ಎಂದು ಗುಣಗಾನ ಮಾಡಿದರು.

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ,ಮುದ್ದು ರಾಕ್ಷಸಿ ಹಾಡಿರುವ ಹಿರಿಯ ಗಾಯಕಿ, ಸಿ. ಆರ್ ಬಾಬ್ಬಿ ಅವರ ಪುತ್ರಿ ಗಾಯಕಿ ಹರ್ಷಿಕಾ ದೇವನಾಥ್, ಕಲಾವಿದರಾದ ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ, ಕಾಕ್ರೋಚ್ ಸುಧೀ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin