Land Lord's song "Ningavva... Ningavva" released: How beautiful the duo of Duniya Vijay and Rachchu looks

ಲಾಂಡ್ ಲಾರ್ಡ್ ಚಿತ್ರದ “ನಿಂಗವ್ವ… ನಿಂಗವ್ವ” ಹಾಡು ಬಿಡುಗಡೆ : ಏನ್ ಚೆಂದ ಕಾಣ್ತಾರೆ ದುನಿಯಾ ವಿಜಯ್- ರಚ್ಚು ಜೋಡಿ - CineNewsKannada.com

ಲಾಂಡ್ ಲಾರ್ಡ್ ಚಿತ್ರದ “ನಿಂಗವ್ವ… ನಿಂಗವ್ವ” ಹಾಡು ಬಿಡುಗಡೆ : ಏನ್ ಚೆಂದ ಕಾಣ್ತಾರೆ ದುನಿಯಾ ವಿಜಯ್- ರಚ್ಚು ಜೋಡಿ

ನಿಂಗವ್ವ- ರಾಚಯ್ಯ ನಡುವಿನ ಪ್ರೀತಿಯನ್ನು ಬಿಂಬಿಸುವ ಲಾಂಡ್ ಲಾರ್ಡ್ ಚಿತ್ರದ “ನಿಂಗವ್ವ… ನಿಂಗವ್ವ” ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಒಂದು ಮಗುವಿದ್ದು ಆ ನಂತರ ಎರಡನೇ ಮಗುವಿಗೆ ಹಾತೊರೆಯುವ ಮಧ್ಯವಯಸ್ಕ ಗಂಡ ಹೆಂಡತಿಯ ನಡುವಿನ ಪ್ರೀತಿ, ಪ್ರೇಮ, ತೊಂದರೆ ತೊಡಕುಗಳನ್ನು ಹಾಡಿನ ಮೂಲಕ ಅನಾವರಣ ಮಾಡಲಾಗಿದೆ.

ಯೊಗರಾಜ್ ಭಟ್ ಸಾಹಿತ್ಯ ಬರೆದಿರುವ ನಿಂಗವ್ವ ಗೀತೆಗೆ ವಿಜಯ್ ಪ್ರಕಾಶ್ – ಅನನ್ಯ ಭಟ್ ಹಾಡಿದ್ದು. ಹಾಡಿನಲ್ಲಿ ಸಾಂಡಲ್ ವುಡ್ ಸಲಗ ವಿಜಯ್ ಕುಮಾರ್, ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡು ಹೊರಬಂದಿದೆ. ಜಡೇಶ್ ಹಂಪಿ ನಿರ್ದೇಶನ ಮಾಡಿರುವ ಚಿತ್ರಕ್ಕೆ ಕೆವಿ ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ಬಂಡವಾಳ ಹೂಡಿದ್ದಾರೆ

ನಿಂಗವ್ವನಿಗೆ ಹರಸಲು ಚಂದನವನ ತಾರಾ ಜೋಡಿಗಳಾದ ತರುಣ್ ಸುಧೀರ್- ಸೋನಲ್ ಮಾಂಟೇರಿಯೋ, ನೆನಪಿರಲಿ ಪ್ರೇಮ್- ಜ್ಯೋತಿ, ಡಾರ್ಲಿಂಗ್ ಕೃಷ್ಣ- ಮಿಲನ ನಾಗರಾಜ್ ದಂಪತಿ ಹಾಗು ನಟ ನೀನಸಾಂ ಸತೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಜೊತೆಗೆ ಯೋಗರಾಜ್ ಭಟ್, ವಿಜಯ್ ಪ್ರಕಾಶ್ ಕೂಡ ಸಾಥ್ ನೀಡಿ, ದಂಪತಿಗಳನ್ನು ವೇದಿಕೆ ಮೇಲೆ ಕಾಲೆಳೆದರು.

ದುನಿಯಾ ವಿಜಯ್, ರಚಿತರಾಮ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸ್ವಾಮಿ ಛಾಯಾಗ್ರಹಣ ಪೈಟಿಂಗ್ ಇದ್ದ ಹಾಗೆ ಇದೆ ಎಂದು ಬಣ್ಣಿಸಿದರು. ದಂಪತಿಗಳಿಗೆ ದುನಿಯಾ ವಿಜಯ್ ಹಾಗೂ ರಚಿತರಾಮ್ ಬಾಗಿನ ನೀಡಿ ಸನ್ಮಾನಿಸಿದರು.

ನಾಯಕ ವಿಜಯ್ ಕುಮಾರ್ ಮಾತನಾಡಿ ಹಾಡು ಬಿಡುಗಡೆ ಮಾಡಿ ಕೊಟ್ಟ ದಂಪತಿಗಳಿಗೆ ಧನ್ಯವಾದ. ಹಿಟ್ ಸಾಂಗ್ ಗಳ ಲಿಸ್ಟ್ ನಲ್ಲಿ ಅಧಿಕ ಹಾಡುಗಳನ್ನು ಬರೆದಿರುವುದು ಯೋಗರಾಜ್ ಭಟ್ ಈ ಹಾಡನ್ನು ಅದ್ಭುತವಾಗಿ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ,ಭೂಷಣ್ ನೃತ್ಯ ನಿರ್ದೇಶನ ಉತ್ತಮವಾಗಿದೆ. ಸಾಮಾನ್ಯವಾಗಿ ನಾಯಕಿಯರು ವಯಸ್ಸಿನ ಪಾತ್ರ ಒಪ್ಪಿಕೊಳ್ಳುವುದು ಕಡಿಮೆ. ರಚಿತರಾಮ್ ಒಪ್ಪಿಕೊಂಡು ಪಾತ್ರ ಮಾಡಿದ್ದಾರೆ. ನನಗೂ ಕೂಡ ಹಾಡು ಬಿಡುಗಡೆ ಆಗುವವರೆಗೂ ನನ್ನ ಪಾತ್ರದ ಬಗ್ಗೆ ಎಲ್ಲರೂ ಏನು ಹೇಳಬಹುದು ಎಂಬ ಕುತೂಹಲವಿತ್ತು. ಈಗ ಎಲ್ಲರೂ ಪ್ರಶಂಸೆ ನೀಡುತ್ತಿದ್ದಾರೆ. ಒಳ್ಳೆಯ ಕಥೆ ಮಾಡಿಕೊಂಡಿರುವ ನಿರ್ದೇಶಕ ಜಡೇಶ್ ಕೆ ಹಂಪಿ ಹಾಗೂ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ ಜನವರಿ 23 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಪೆÇ್ರೀತ್ಸಾಹ ನೀಡಿ ಎಂದರು.

ನಾಯಕಿ ರಚಿತರಾಮ್ ಮಾತನಾಡಿ ಹಾಡಿನ ಚಿತ್ರೀಕರಣ ಸಮಯದಿಂದಲೂ ಯಾವಾಗ ಬಿಡುಗಡೆಯಾಗಬಹುದೆಂದು ಕಾಯುತ್ತಿದೆ. ಸ್ವಾಮಿ ಛಾಯಾಗ್ರಹಣ, ಯೋಗರಾಜ್ ಭಟ್ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ ಹಾಗು ವಿಜಯ್ ಪ್ರಕಾಶ್ ಗಾಯನ ಎಲ್ಲವೂ ಚೆನ್ನಾಗಿದೆ. ಇನ್ನೂ, ವಿಜಯ್ ಸರ್ ರಾಚಯ್ಯ ಪಾತ್ರದಲ್ಲಿ, ನಾನು ನಿಂಗವ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ. ಈ ಹಾಡಲ್ಲಿ ನಮ್ಮಿಬ್ಬರ ಅಭಿನಯಕ್ಕೆ ಎಲ್ಲರೂ ನೀಡುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ ಎಂದು ತಿಳಿಸಿದರು.

ನಿರ್ಮಾಪಕ ಕೆ ವಿ ಸತ್ಯ ಪ್ರಕಾಶ್ ಮಾತನಾಡಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಲೇಟ್ ಕೊಟ್ರು ಅಜನೀಶ್ ಲೇಟೆಸ್ಟ್ ಆಗಿ ಸಾಂಗ್ ಕೊಡ್ತಾರೆ. ಆನಂದ್ ಆಡಿಯೋ ಜೊತೆ 14 ವರ್ಷದ ಸಂಬಂದ. 50 ಲಕ್ಷ ಹೆಚ್ಚು ಕೊಡುತ್ತೇವೆ ಎಂದರೂ ಅವರಿಗೆ ಕೊಡದೆ ಆನಂದ್ ಆಡಿಯೋ ನೀಡಲಾಗಿದೆ.90 ದಿನಗಳಲ್ಲಿ 60 ದಿನ ಹಗಲು ರಾತ್ರಿ ಚಿತ್ರೀಕರಣ ಮಾಡಲಾಗಿದೆ .ಚಿತ್ರದ ನಾಯಕ, ನಾಯಕಿ ರಾಜ್ಯನ ಪ್ರಶಸ್ತಿ ಭರಲಿದೆ ಎಂದರು

ನಿರ್ದೇಶಕ ಜಡೇಶ್ ಕೆ ಹಂಪಿ ಮಾತನಾಡಿ “ನಿಂಗವ್ವ” ಎಂಬ ಅದ್ಭುತ ಹಾಡನ್ನು ಯೋಗರಾಜ್ ಭಟ್ ಬರೆದುಕೊಟ್ಟಿದ್ದಾರೆ. ವಿಜಿ ಸರ್ ಹಾಗು ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಬಂದಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದೆ. ಆ ಸಾಲಿಗೆ “ನಿಂಗವ್ವ” ಕೂಡ ಸೇರಲಿದೆ. ಹಿಂದಿನ ಎರಡು ಚಿತ್ರಗಳಿಗೂ ಸಂಗೀತ ಸಂಯೋಜಿಸಿದ್ದ ಅಜನೀಶ್ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಅನನ್ಯ ಭಟ್ ಸೊಗಸಾಗಿ ಹಾಡಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಚಿತ್ರದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ಹಾಡು ಹುಟ್ಟಿದ ಸಮಯವನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸಿದ ಗೀತರಚನೆಕಾರ ಯೋಗರಾಜ್ ಭಟ್, ಚಿತ್ರಕ್ಕೆ ಶುಭ ಕೋರಿದರು. ಗಾಯಕ ವಿಜಯ್ ಪ್ರಕಾಶ್ ಅವರು ಸಹ “ನಿಂಗವ್ವ” ಹಾಡಿನ ಬಗ್ಗೆ ಮಾತನಾಡಿ, ಎರಡು ಸಾಲುಗಳನ್ನು ಹಾಡಿದರು.

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ ಜಡೇಶ್ ಕೆ ಹಂಪಿ ಕಾಂಬಿನೇಶನ್ ನ ಮೂರನೇ ಚಿತ್ರ. ಈ ಹಿಂದೆ ದುನಿಯಾ ವಿಜಯ್ ಹಾಗೂ ರಚಿತರಾಮ್ ಅವರ “ಜಾನಿ ಜಾನಿ ಎಸ್ ಪಪ್ಪ” ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಿದ್ದೆ. ಬಹಳ ವರ್ಷಗಳ ನಂತರ ಚಿತ್ರಕ್ಕೆ ಸಂಗೀತ ನೀಡಿದ್ದೇನೆ. ಯೋಗರಾಜ್ ಭಟ್ ಸಾಹಿತ್ಯ, ವಿಜಯ್ ಪ್ರಕಾಶ್ – ಅನನ್ಯ ಭಟ್ ಅವರ ಗಾಯನದಲ್ಲಿ “ನಿಂಗವ್ವ” ಹಾಡು ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದೆ. ಸದ್ಯದಲ್ಲೇ ಉಳಿದ ಹಾಡುಗಳು ಬಿಡುಗಡೆಯಾಗಲಿದೆ ಎಂದು ಹೇಳಿದರು.

ಸಂಭಾಷಣೆ ಬರೆದಿರುವ ಮಾಸ್ತಿ, ಶ್ರೀಕಾಂತ್, ಛಾಯಾಗ್ರಾಹಕ ಸ್ವಾಮಿ ಜೆ ಗೌಡ, ಸಿ.ಆರ್ ಬಾಬಿ ಹಾಗೂ ಆನಂದ್ ಆಡಿಯೋ ಶ್ಯಾಮ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin