ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಕ್ರೀಡಾ ಮಹೋತ್ಸವ”
ಮಹಿಳೆಯರ ಸಬಲೀಕರಣದ ಉದ್ದೇಶದಿಂದ ವಿಶೇಷವಾಗಿ ಮಹಿಳಾ ಕ್ರೀಡಾ ಮಹೋತ್ಸವ”ವನ್ನು ನಟ ಉಪೇಂದ್ರ ಅಧಿಕೃತವಾಗಿ ಚಾಲನೆ ನೀಡಿದ್ದಾರೆ

ಮಹೋತ್ಸವದಲ್ಲಿ ಕಲಾವಿದರು, ಮಾಧ್ಯಮ ವೃತ್ತಿಪರರು, ಮಾದರಿಗಳು, ಇನ್‍ಫ್ಲುಯೆನ್ಸರ್‍ಗಳು ಮತ್ತು ವಿವಿಧ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ತನ್ನ ಪ್ರತಿಭೆ ಸಾಬೀತುಪಡಿಸಿರುವ ಮಹಿಳೆಯರು ಮಾತ್ರ ಭಾಗವಹಿಸುವ ವಿಶಿಷ್ಟ ಅರ್ಹತೆ ಹೊಂದಿದೆ. ಮಹಿಳೆಯರ ಸಾಮಥ್ರ್ಯಕ್ಕೆ ಸಮಾನ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದೆ.
ಕ್ರೀಡಾ ಮಹೋತ್ಸವ ಮಹಿಳೆಯರಲ್ಲಿ ಕ್ರೀಡಾಸ್ಫೂರ್ತಿ, ಜವಾಬ್ದಾರಿತನ, ತಂಡಸಮನ್ವಯ, ಪರಸ್ಪರ ಸಹಕಾರ ಮತ್ತು ಸಾಮಾಜಿಕ ಬಾಂಧವ್ಯವನ್ನು ಉತ್ತೇಜಿಸುವ ದಿಟ್ಟ ಉದ್ದೇಶ ಹೊಂದಿದೆ. ಜೊತೆಗೆ, ಕ್ರೀಡೆ ಮೂಲಕ ಆತ್ಮವಿಶ್ವಾಸ, ನಾಯಕತ್ವ, ಸಾರ್ವಜನಿಕ ವೇದಿಕೆ ಎದುರಿಸುವ ಸಾಮಥ್ರ್ಯ ಮತ್ತು ವೈಯಕ್ತಿಕ ಬೆಳವಣಿಗೆಗೆ ವೇದಿಕೆ ಕಲ್ಪಿಸುತ್ತದೆ.

ಕಾರ್ಯಕ್ರಮದ ಮುಖ್ಯ ಸಂಘಟಕರಾಗಿ ದಿವ್ಯ ಊರುಡುಗ, ನಿಕಿತಾ ಸ್ವಾಮಿ ಮತ್ತು ಮಂಜುನಾಥ ರಾಧಾಕೃಷ್ಣ ಕಾರ್ಯನಿರ್ವಹಿಸುತ್ತಿದ್ದಾರೆ. ರಾಗಶ್ರೀ ಬಿ.ಜಿ., ಕಾವ್ಯಾ ಆರ್. ಹಾಗೂ ಗೌರವ್ ಉಪಸಂಘಟಕರಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವಿಂಕ್ ವಕ್ರ್ಸ್ ಮೀಡಿಯಾ ಮಹಿಳೆಯರ ಪ್ರತಿಭೆಗೆ ಅವಕಾಶ ಕಲ್ಪಿಸುವ ಹಾಗೂ ಅವರ ಸಾಮಾಜಿಕ ಮತ್ತು ಕ್ರೀಡಾ ಸಾಧನೆಗಳನ್ನು ಮೆರೆಯಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ.


