” ಮಿಂಚುಹುಳು” ಅಕ್ಟೋಬರ್ 4 ರಂದು ಬಿಡುಗಡೆ : ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಗಣ್ಯರು

ಡಾ.ರಾಜ್ ಕುಮಾರ್ ಕುಟುಂಬದ ಕುಡಿ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ ಅಭಿನಯದ ಚೊಚ್ಚಲ ಚಿತ್ರ “ಮಿಂಚು ಹುಳ” ಅಕ್ಟೊಬರ್ 4 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಮಹೇಶ್ ಕುಮಾರ್ ನಿರ್ದೇಶನದ “ಮಿಂಚು ಹುಳು” ಚಿತ್ರಕ್ಕೆ ರಾಜಗೋಪಾಲ್ ದೊಡ್ಡಹುಲ್ಲೂರು ಚಿತ್ರಕ್ಕೆ ಬಂಡವಾಳ ಹಾಕಿದ್ದು, ವಿಜಯ್‍ಕುಮಾರ್ ಮತ್ತು ಅಬ್ದುಲ್ಲಾ ರಫೀಕ್ ಉಲ್ಲಾ ಸಾಥ್ ನೀಡಿದ್ದಾರೆ.
ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಪತ್ರಿಕಾ ಪ್ರದರ್ಶನವಿತ್ತು. ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಹಿರಿಯ ನಿರ್ದೇಶಕ ಪಿ. ಶೇಷಾದ್ರಿ, ಹಿರಿಯ ನಟಿ ಜಯಮಾಲ. ಪ್ರೊ.ರಾಜಪ್ಪ ದಳವಾಯಿ, ಲಹರಿ ಸಂಸ್ಥೆಯ ವೇಲು ,ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಚಿತ್ರತಂಡ ಈ ವೇಳೆ ಹಾಜರಿತ್ತು.
ಸಂಗೀತ ನಿರ್ದೇಶಕ ಹಂಸಲೇಖ, ಮನಮಿಡಿಯುವ ಚಿತ್ರ, ಕೆಲವು ಸನ್ನಿವೇಶಗಳು ಕರುಳು ಹಿಂಡಿದ ಅನುಭವವಾಗುತ್ತಿತ್ತು. ಇಂತಹ ಚಿತ್ರಗಳು ಚಿತ್ರಮಂದಿರದಲ್ಲಿ ಹೆಚ್ಚು ಪ್ರದರ್ಶನ ಕಾಣುವಂತೆ ಮಾಡಬೇಕು. ಚಿತ್ರಮಂದಿರಕ್ಕೆ ಬರುವ ಮುನ್ನ ಚಿತ್ರವನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ಚಿತ್ರವನ್ನು ತೋರಿಸುವ ಕೆಲಸ ಆಗಬೇಕು. ಮೊದಲು ನನ್ನ ಶಾಲೆಯಲ್ಲಿ ಚಿತ್ರ ಪ್ರದರ್ಶನ ಮಾಡಲು ವ್ಯವಸ್ಥೆ ಮಾಡುವೆ. ಚಿತ್ರರಂಗ ಬೇರುಗಳ ಕಡೆ ಹೋಗುತ್ತಿರುವುದು ಸಂತಸದ ಸಂಗತಿ., ಇತ್ತೀಚೆಗೆ ಬರೀ ತೇರು ಆಗಿದೆ. ಹೊಗಳಿಕೆಗೆ ಸೀಮಿತವಾಗಿದೆ ಎಂದರು
ಹಿರಿಯ ನಿರ್ದೇಶಕ ಪಿ. ಶೇಷಾದ್ರಿ, ಮಕ್ಕಳ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶನ ಮಾಡಲು ಸರ್ಕಾರ ಅನುಮತಿ ನಿಡುತ್ತಿಲ್ಲ,ಅದಕ್ಕೆ ಕಡಿವಾಣ ಹಾಕಿದೆ, ಮಕ್ಕಳ 4 ಚಿತ್ರಗಳಿಗೆ ಸರ್ಕಾರ ಸಹಾಯಧನ ನೀಡುತ್ತಿದೆ,ನಾಲ್ಕರಲ್ಲಿ ಈ ಚಿತ್ರವೂ ಒಂದಾಗಲಿ. ನಾನೂ ಕೂಡ ಸಂಬಂಧಪಟ್ಟರ ಗಮನಕ್ಕೆ ತರುತ್ತೇನೆ. ಇಂತಹ ಚಿತ್ರಗಳು ಹೆಚ್ಚು ಪ್ರದರ್ಶನ ಆಗಬೇಕಾಗಿದೆ ಎಂದು ಹೇಳಿದರು
ಹಿರಿಯ ನಟಿ ಜಯಮಾಲ ಮಾತನಾಡಿ,ಮಕ್ಕಳ ಚಿತ್ರಗಳು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಬೇಕು,ವಾಣಿಜ್ಯ ಮಂಡಳಿಯೂ ಇಂತಹ ಚಿತ್ರಕ್ಕೆ ಅವಕಾಶ ಮಾಡಿಕೊಡಬೇಕು. ಮೊಬೈಲ್ ನಿಂದ ಆವರಿಸಿಕೊಂಡಿರುವ ಮಕ್ಕಳನ್ನು ಅದರಿಂದ ಹೊರತರಲು ಮಕ್ಕಳ ಚಿತ್ರ ಅತ್ಯಗತ್ಯ. ಅಕಾಡಮಿ ಇದ್ದರೂ ಮಕ್ಕಳ ಚಿತ್ರ ಆಗುತ್ತಿಲ್ಲ.ಅಕಾಡಮಿಯೇ ಮಕ್ಕಳ ಚಿತ್ರೋತ್ಸವ ಮಾಡಬೇಕು ಎಂದರು
ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ ಮಾತನಾಡಿ, ಮುಖ್ಯಪಾತ್ರಕ್ಕೆ ಪೂರಕವಾಗಿ ನಿಲ್ಲುವ ಪಾತ್ರ. ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದೇನೆ.ಚಿತ್ರಕ್ಕೆ ಎಲ್ಲರ ಸಹಕಾರ ಬೆಂಬಲಬೇಕು ಎಂದು ಕೇಳಿಕೊಂಡರು
ಬಾಲ ನಟ ಪ್ರೀತಂ ಕೊಪ್ಪದ , ನಾಲ್ಕೈದು ವರ್ಷಗಳ ಹಿಂದಿನ ಚಿತ್ರ. ಚಿತ್ರ ಬಿಡುಗಡೆ ಯಾವಾಗ ಎಂದು ನಿರ್ದೇಶಕರ ಬೆನ್ನು ಬಿದ್ದಿದ್ದೆ. ಈಗ ಅಕ್ಟೋಬರ್ 4ರಂದು ಚಿತ್ರ ತೆರೆಗೆ ಬರುತ್ತಿದೆ ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಮನವಿ ಮಾಡಿಕೊಂಡರು
ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ , ಅಕ್ಟೋಬರ್ 4 ರಂದು ಬಿಡುಗಡೆಯಾಗಲಿದೆ.ಸಣ್ಣ ಬಜೆಟ್ ಚಿತ್ರಗಳು ಮತ್ತು ಕಂಟೆಟ್ ಓರಿಯೆಂಟ್ ಸಿನಿಮಾಗೆ ಬೆಂಬಲ ನೀಡಿ, ಚಿತ್ರ ಆಗಲು ಪುನೀತ್ ರಾಜ್ ಕುಮಾರ್ ಕಾರಣ. ಅವರ ಆಶೀರ್ವಾದ ಇರಲಿದೆ ಎಂದರು

ನಗರ ಪ್ರದೇಶದಲ್ಲಿ ಬಡೆಯುವ ಕಥೆ. ಬೇವಬ್ದಾರಿ ತಂದೆಮತ್ತು ಮಗನ ಬದುಕಿನ ಬದುಕಿನ ವೈರುದ್ಯ, ಅಪ್ಪ- ಮಕ್ಕಳು ಬಾಡಿಗೆ ಕಟ್ಟಲಾಗದೆ ಪಾಳು ಮನೆ ಸೇರ್ತಾರೆ. ಅಲ್ಲಿ ಮನೆಯಲ್ಲಿ ವಿದ್ಯುತ್ ಇರುವುದಿಲ್ಲ. ಏನಾದರೂ ಮಾಡಿ ಕರೆಂಟ್ ಹಾಕಿಸಲು ಪೇಪರ್ ಏಜೆಂಟ್ ಸಹಾಯದಿಂದ ಕೆರೆಂಟ್ ಹಾಕಿಸಲು ಹುಡುಗ ಮುಂದಾಗುತ್ತಾನೆ. ಕೂಡಿಟ್ಟ ಹಣವನ್ನು ಇಲಿ ಕಚ್ಚಿ ಹಾಕುತ್ತದೆ. ಮಿಂಚು ಹುಳು ನೋಡಿ ಆತನಲ್ಲಿ ಹೊಸ ಆಲೋಚನೆ ವಿದ್ಯಾರ್ಥಿ ಬದುಕಿನಲ್ಲಿ ಹೊಸ ದಾರಿಗೆ ಅವಕಾಶ ಮಾಡಿಕೊಡಲಿದೆ ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದು ಮಾಹಿತಿ ನೀಡಿದರು
ನಟ ಪೃಥ್ವಿರಾಜ್ ಮೊದಲ ಬಾರಿಗೆ ನಟಿಸಿದ್ದಾರೆ ಅನ್ನಿಸಲಿಲ್ಲ ರಾಜ್ ಕುಟುಂಬದ ಕುಡಿಯನ್ನು ಪರಿಚಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಡ್ರಾಗನ್ ,ಊಟಿ ಚಿತ್ರದ ಬಳಿಕ ಇದು ಮೂರನೇ ಚಿತ್ರ. ಎಲ್ಲರ ಬೆಂಬಲ ಚಿತ್ರಕ್ಕಿರಲಿ ಎಂದರು
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಕನ್ನಡ ಚಿತ್ರಗಳನ್ನು ಉಳಿಸದಿದ್ದರೆ ಪರಭಾಷೆಯ ಚಿತ್ರಗಳು ದಾಳಿ ಮಾಡುತ್ತವೆ.ಅದಕ್ಕೆ ಅವಕಾಶ ಮಾಡಿಕೊಡುವುದು ಬೇಡ ಎಂದರು
ನಿರ್ಮಾಪಕ ರಾಜ್ ಗೋಪಾಲ್ ಮಾತನಾಡಿ, ಎಲ್ಲರೂ ಸಿನಿಮಾ ನೋಡಿ ಆಶೀರ್ವಾದ ಮಾಡಿ ಎಂದು ಕೇಳಿಕೊಂಡರೆನಿವೃತ್ತ ಪ್ರಾಧ್ಯಾಪಕ ಪ್ರೊ ರಾಜಪ್ಪ ದಳವಾಯಿ ಶಾಸಕ ಶರತ್ ಬಚ್ಚೇಗೌಡ ಕಾರ್ಯಕಾರಿ ನಿರ್ಮಾಪಕ ವಿಜಯ್ ಕುಮಾರ್ , ಸಹ ನಿರ್ಮಾಪಕ ರಫೀಕ್ ಉಲ್ಲಾ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.