‘ಪ್ರೇಮದ ಊರಲ್ಲಿ’ ಚಿತ್ರದ ಅಪ್ಪನಿಗಾಗಿ ಹೊಸ ಹಾಡು ಬಿಡುಗಡೆ

ಅಪ್ಪನ ಕುರಿತು ಚೆಂದದ ಹಾಡು ಬಿಡುಗಡೆ ಮಾಡಿದ ಪ್ರೇಮದ ಊರಲ್ಲಿ ಸಿನಿಮಾ ತಂಡ ಅವ್ವನಂತ ಅಪ್ಪನಿವನು..ಇದು ಪ್ರೇಮದ ಊರಲ್ಲಿ ಸಿನಿಮಾ ಹಾಡು ಬಿಡುಗಡೆ ಮಾಡಿದೆ

ಕನ್ನಡ ಚಿತ್ರರಂಗದಲ್ಲಿ ಅಮ್ಮನ ಕುರಿತು ಸಾಕಷ್ಟು ಹಾಡುಗಳು ಬಂದಿವೆ. ಆದ್ರೆ ಅಪ್ಪನ ಪ್ರೀತಿಯನ್ನು ಸಂಭ್ರಮಿಸುವ ಹೊಸ ಹಾಡು ಸಿನಿಮಾಪ್ರೇಮಿಗಳನ್ನು ಸೆಳೆಯುತ್ತಿದೆ. ಅದುವೇ ಅವ್ವನಂತ ಅಪ್ಪನಿವನು. ಮ್ಯೂಸಿಕಲ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಪ್ರೇಮದ ಊರಲ್ಲಿ ಸಿನಿಮಾತಂಡವೀಗ ಅಪ್ಪನ ಕುರಿತಾದದ ಚೆಂದದ ಹಾಡನ್ನು ಬಿಡುಗಡೆ ಮಾಡಿದೆ.

ನಿರ್ದೇಶಕ ಮನೋಜ್ ಕುಮಾರ್ ಕ್ಯಾಚಿ ಮ್ಯಾಚಿ ಪದ ಪೆÇಣಿಸಿ ಅಪ್ಪನ ಶ್ರಮವನ್ನು ವರ್ಣಿಸಿದ್ದಾರೆ. ಸಿದ್ದಾರ್ಥ್ ಸುಂದರ್ ಹಾಡಿಗೆ ಧ್ವನಿಯಾಗಿದ್ದು, ಸುನಾದ್ ಗೌತಮ್ ಸಂಗೀತ ಒದಗಿಸಿದ್ದಾರೆ.

ಅವ್ವನಂತ ಅಪ್ಪನಿವನು ಗೀತೆಯಲ್ಲಿ ಅಪ್ಪನಾಗಿ ರಂಗಾಯಣ ರಘು ಹಾಗೂ ಮಗನಾಗಿ ಶ್ರೀರಾಮ್ ನಟಿಸಿದ್ದಾರೆ. ರಂಗಾಯಣ ರಘು ಕೂಡ ಹಾಡಿಗೆ ಹೆಜ್ಜೆ ಹಾಕಿರುವುದು ಸ್ಪೆಷಲ್.

ಪ್ರೇಮದ ಊರಲ್ಲಿ ಸಿನಿಮಾದಲ್ಲಿ ಶ್ರೀರಾಮ್ ನಾಯಕನಾಗಿ ನಟಿಸಿದ್ದು, ನಟಿಯರಾದ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಜೊತೆಯಾಗಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

‘ಅಕ್ಷಿ’ ಸಿನಿಮಾ ನಿರ್ದೇಶಿಸಿದ್ದ ಮನೋಜ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ನಿರ್ಮಾಣ ಮಾಡಿದ್ದಾರೆ. ಸುನಾದ ಗೌತಮ್ ಸಂಗೀತ ನಿರ್ದೇಶನ, ರಾಜ್ಕಾಂತ್ ಎಸ್.ಕೆ. ಛಾಯಾಚಿತ್ರಗ್ರಹಣ, ಹರ್ಷಿತ್ ಪ್ರಭು ಸಂಕಲನ ಚಿತ್ರಕ್ಕಿದೆ

Related Posts

Shankarabharana Movie Review : ಖಾಸಗೀ ಬಸ್ ಮತ್ತು ಅದರ ಸುತ್ತ ಸಾಗುವ ಕುತೂಹಲಕಾರಿ ಕಥನ ‘ಶಂಕರಾಭರಣ’

ಚಿತ್ರ : ಶಂಕರಾಭರಣನಿರ್ದೇಶನ : ಸುಮಂತ್ ಭಟ್ಅವಧಿ : 152 ನಿಮಿಷತಾರಾಗಣ: ಶೈನ್ ಶೆಟ್ಟಿ, ತನ್ವಿ ರಾಮ್, ಕೃತಿ ಶೆಟ್ಟಿ, ತನ್ವಿ ರಾವ್, ಸಂಪತ್ ರಾಜ್, ಅನೀಲ್ ಕುಮಾರ್ ಚೌಹ್ಹಾಣ್, ಅರ್ಜುನ್ ಕಜೆ, ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್ ಮತ್ತಿತರರುರೇಟಿಂಗ್…

ಕಲಾಸಾಮ್ರಾಟ್ ಡಾ. ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಆರಂಭ

ಸದಭಿರುಚಿಯ ಹಾಗೂ ಮನಮುಟ್ಟುವ ಚಿತ್ರಗಳ ನಿರ್ದೇಶಕರೆಂದೇ ಖ್ಯಾತರಾಗಿರುವ ಕಲಾಸಾಮ್ರಾಟ್ ಡಾ.ಎಸ್. ನಾರಾಯಣ್ ನಿರ್ದೇಶನದ ನೂತನ ಚಿತ್ರದ ಮುಹೂರ್ತ ಸಮಾರಂಭ ಇ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಲತಾ ಜಯಪ್ರಕಾಶ್ ಆರಂಭ ಫಲಕ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581