Pan India film produced by Night Shift Studios

ನೈಟ್ ಶಿಫ್ಟ್ ಸ್ಟುಡಿಯೋಸ್ ನಿರ್ಮಾಣದಲ್ಲಿ ಪ್ಯಾನ್ ಇಂಡಿಯಾ ಚಿತ್ರ - CineNewsKannada.com

ನೈಟ್ ಶಿಫ್ಟ್ ಸ್ಟುಡಿಯೋಸ್ ನಿರ್ಮಾಣದಲ್ಲಿ ಪ್ಯಾನ್ ಇಂಡಿಯಾ ಚಿತ್ರ

ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ಮಾಪಕರುಗಳಾದ ಎಸ್.ಶಶಿಕಾಂತ್ ಮತ್ತು ಚಕ್ರವರ್ತಿರಾಮಚಂದ್ರ ಸೇರಿಕೊಂಡು ’ನೈಟ್ ಶಿಫ್ಟ್ ಸ್ಟುಡಿಯೋ’ ಹುಟ್ಟುಹಾಕಿದ್ದಾರೆ. ಇದರ ಮೂಲಕ ಪ್ರಥಮ ಪ್ರಯತ್ನ ಎನ್ನುವಂತೆ ಮಮ್ಮುಟಿ ಅಭಿನಯದ ’ಬ್ರಹ್ಮಯುಗಂ’ ಪೌರಾಣಿಕ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

’ದ ಏಜ್ ಆಫ್ ಮ್ಯಾಡ್‌ನೆಸ್’ ಎಂಬ ಅಡಿಬರಹ ಇರಲಿದೆ. ಮೊನ್ನೆ ನಡೆದ ಸಂಸ್ಥೆ ಉದ್ಗಾಟನೆ ಸಂದರ್ಭದಲ್ಲಿ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿತು. ರಾಹುಲ್‌ಸದಾಸಿವನ್ ರಚನೆ ಹಾಗೂ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಇದರ ಕುರಿತಂತೆ ಮಾತನಾಡಿರುವ ನಿರ್ದೇಶಕರು ಧೀಮಂತ ನಾಯಕನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಕನಸು ಇಂದು ನನಸಾಗಿದೆ. ಇದಕ್ಕೆ ಬೆನ್ನಲುಬಾಗಿ ನಿರ್ಮಾಪಕರುಗಳು ಇದ್ದಾರೆ. ಕೇರಳದ ಕರಾಳ ಯುಗದಲ್ಲಿ ಬೇರೂರಿರುವ ಕಥೆಯಾಗಿರುವುದು ವಿಶೇಷ. ಇದು ಖಂಡಿತವಾಗಿಯೂ ಮಮ್ಮುಟಿ ಅಭಿಮಾನಿಗಳು, ವಿಶ್ವದ ಫ್ಯಾನ್ಸ್‌ಗಳಿಗೆ ಇಷ್ಟವಾಗಬಹುದಂದು ನಂಬಿರುತ್ತೇನೆ ಎನ್ನುತ್ತಾರೆ.

ನಮ್ಮ ಸಂಸ್ಥೆಯ ಮೊದಲ ಚಿತ್ರದಲ್ಲಿ ಖ್ಯಾತ ನಟ ಅಭಿನಯಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅವರ ಅದ್ಬುತ ಅನುಭವಕ್ಕೆ ಇದು ಜೀವ ತುಂಬುವ ಚಿತ್ರವಾಗಲಿದೆ. ನಿರ್ದೇಶಕರು ಸೃಷ್ಟಿಸಿದ ತಾರಾಗಣ, ತಂತ್ರಜ್ಞರು ಇರುತ್ತಾರೆ. ಕೊಚ್ಚಿ, ಒಟ್ಟಪಲಂ ಸುಂದರ ತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಿಸಲಾಗುವುದು ಅಂತ ನಿರ್ಮಾಪಕರುಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಮಮ್ಮುಟಿ ಅವರೊಂದಿಗೆ ಅರ್ಜುನ್ ಅಶೋಕನ್, ಸಿದ್ದಾರ್ಥ್ ಭರತನ್, ಅಮಲ್‌ದ ಲಿಜ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಸಂಗೀತ ಕ್ರಿಸ್ಟೋ ಕ್ಸೇವಿಯರ್, ಛಾಯಾಗ್ರಹಣ ಶೆಹನಾದ್ ಜಲಾಲ್, ಸಂಕಲನ ಶಫಿಕ್ಯೂ ಮೊಹಮ್ಮದ್ ಅಲಿ, ಸಂಭಾಷಣೆ ಟಿ.ಡಿ.ರಾಮಕೃಷ್ಣ, ಮೇಕಪ್ ರೋನೆಕ್ಸ್ ಕ್ಸೇವಿಯರ್, ಕಾಸ್ಟ್ಯೂಮ್ ಮೆಲ್ವಿ.ಜೆ, ಕಾರ್ಯಕಾರಿ ನಿರ್ಮಾಪಕ ವಿಕ್ಟರ್ ಪ್ರಭಾಹರನ್.ಎಂ ಅವರದಾಗಿದೆ. ಚಿತ್ರವು ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ 2024ರ ಪ್ರಾರಂಭದಲ್ಲಿ ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin