ನಿರ್ಮಾಪಕ ಆರ್.ಚಂದ್ರು ಕನಸಿನ ಚಿತ್ರ “ಫಾದರ್” ಮುಕ್ತಾಯದ ಹಂತದಲ್ಲಿ

ಕನ್ನಡ ಚಿತ್ರರಂಗದ ಪ್ರಮುಖ ಸ್ತಂಭಗಳಲ್ಲಿ ಒಬ್ಬರಾಗಿರುವ ಆರ್,ಚಂದ್ರು ಏನೇ ಮಾಡಿದರೂ ಅದರಲ್ಲಿ ವಿಶೇಷತೆ ವಿಭಿನ್ನತೆ ಇದ್ದೇ ಇರುತ್ತದೆ. ಇದೀಗ ತಮ್ಮ ಆರ್,ಸಿ ಮೂವೀಸ್ ಬ್ಯಾನರ್ ಅಡಿ ಏಕಕಾಲದಲ್ಲಿ ಕೈಗೆತ್ತಿಕೊಂಡ 5 ಚಿತ್ರಗಳಲ್ಲಿ ಒಂದಾದ” ಫಾದರ್” ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ 5 ಸಿನಿಮಾಗಳ ಟೈಟಲ್ ಲಾಂಚ್ ಮಾಡಿಸಿ ಸದ್ದು ಮಾಡಿದ್ದ ನಿರ್ಮಾಪಕ ಕಮ್ ನಿರ್ದೇಶಕ ಆರ್.ಚಂದ್ರು ನುಡಿದಂತೆ ಐದು ಸಿನಿಮಾಗಳಲ್ಲಿ ಮೊದಲನೆದಾಗಿ ಫಾದರ್ ಸಿನಿಮಾದ ಶೂಟಿಂಗ್ ಮುಕ್ತಾಯದ ಹಂತಕ್ಕೆ ತಂದು ನಿಲ್ಲಿಸಿದ್ದಾರೆ..
ರಾಜ್ ಮೋಹನ್ ನಿರ್ದೇಶನದಲ್ಲಿ ಫಾದರ್ ಸಿನಿಮಾ ಮೂಡಿ ಬರುತ್ತಿದ್ದು ಕೊನೆಯ ಹಂತದ ಶೂಟಿಂಗ್ ಆನೇಕಲ್ ತಾಲೂಕಿನ ಐತಿಹಾಸಿಕ ದೇವಾಲಯ ಶ್ರೀ ಚಂಪಕಧಾಮಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದೆ.ಚಂಪಕಧಾಮಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನೂರಾರು ಜನ ಜೂನಿಯರ್ ಆರ್ಟಿಸ್ಟ್ ಗಳ ಸಮೂಖದಲ್ಲಿ ಫಾದರ್ ಚಿತ್ರದ ಸಾಹಸದೃಶ್ಯಗಳು ಸೇರೆಯಾಗುತ್ತಿದೆ.

ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದ್ದು ಸುಜ್ಞಾನಮೂರ್ತಿ ಛಾಯಾಗ್ರಹಣದಲ್ಲಿ ಚಿತ್ರ ಮೂಡಿ ಬರುತ್ತಿದೆ. ಡಾರ್ಲಿಂಗ್ ಕೃಷ್ಟ , ಪ್ರಕಾಶ್ ರಾಜ್ ನಟನೆಯ ತಂದೆ-ಮಗನ ಬಾಂಧವ್ಯ ಸಾರುವ ಮನಮುಟ್ಟುವ ಸಿನಿಮಾ ಫಾದರ್ ಚಿತ್ರವಾಗಿದೆ.. ಸದ್ದಿಲ್ಲದೆ ಶೂಟಿಂಗ್ ಮಾಡುತ್ತಿದ್ದ ಫಾದರ್ ಟೀಮ್ ಈಗ ಕೊನೆ ಹಂತದ ಚಿತ್ರಕರಣದಲ್ಲಿದೆ.
ಕೆಲವೇ ದಿನಗಳಲ್ಲಿ ಆಕ್ಷನ್ ದೃಶ್ಯಗಳಿಗಾಗಿ ಫಾದರ್ ಚಿತ್ರತಂಡ ವಾರಣಾಸಿಗೆ ಪ್ರಯಾಣ ಬೆಳಸಲಿದೆ.ಶೀಘ್ರದಲ್ಲೇ ಆರ್.ಸಿ.ಸ್ಟುಡಿಯೋಸ್ ನಿರ್ಮಾಣದ ಫಾದರ್ ಚಿತ್ರತಂಡದಿಂದ ಮತ್ತಷ್ಟು ಅಪ್ ಡೇಟ್ ಗಳು ಹೊರಬಿಳಲಿದೆ, ಇದಾದ ಬಳಿಕ ಇನ್ನುಳಿದ ಚಿತ್ರಗಳ ಮಾಹಿತಿಯೂ ಹೊರಬೀಳಲಿದೆ.