ಕ್ವೀನ್ ಪ್ರೀಮಿಯರ್ ಲೀಗ್ : ಕೋಲಾರ ಕ್ವೀನ್ ತಂಡಕ್ಕೆ ಪ್ರಶಸ್ತಿ
ಕ್ರಿಯೇಟಿವ್ ಫ್ರೆಂಡ್ಸ್ ಸಂಸ್ಥೆ ಮೊದಲ ಬಾರಿಗೆ ಆಯೋಜಿಸಿದ್ದ ಕ್ವೀನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ತೆರೆಬಿದ್ದಿದೆ. ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಧನ್ಯರಾಮ್ ನಾಯಕತ್ವದ ಕೋಲಾರ ಕ್ವೀನ್ಸ್ ಟೀಮ್ ಕ್ಯೂಪಿಎಲ್ ಕಪ್ ನ್ನು ಮುಡಿಗೇರಿಸಿಕೊಂಡಿತು. ‘ಕ್ವೀನ್ಸ್ ಪ್ರೀಮಿಯರ್ ಲೀಗ್’ ನಲ್ಲಿ ಇಡೀ ತಂಡ ಕುಣಿದು ಕುಪ್ಪಳಿಸಿದೆ.
ಕೋಲಾರ ತಂಡ 5 ಓವರ್‍ಗಳಲ್ಲಿ ಒಂದು ವಿಕೆಟ್‍ಗೆ 88 ರನ್ ಗಳಿಸಿದರು. ಈ ಮೊತ್ತಕ್ಕೆ ಉತ್ತರವಾಗಿ ಬೆಂಗಳೂರು ತಂಡ ಐದು ಓವರ್‍ಗಳಲ್ಲಿ ಮೂರು ವಿಕೆಟ್‍ಗಳಿಗೆ 53 ರನ್ ಗಳಿಸಿ ಹೋರಾಟ ಮುಗಿಸಿತು. ಕೋಲಾರ ಕ್ಲೀನ್ಸ್ ತಂಡ ಅಕರ್ಷಕ ಟ್ರೋಫಿಯೊಂದಿಗೆ 6 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಬೆಂಗಳೂರು ಕ್ಲೀನ್ಸ್ ತಂಡ 3 ಲಕ್ಷ ಬಹುಮಾನ ಪಡೆಯಿತು.
ಹೇಮಾ ಸರಣಿ ಶ್ರೇಷ್ಠ:
ಕೋಲಾರ ಕ್ವೀನ್ಸ್ ತಂಡದ ಆಟಗಾರ್ತಿ ಹೇಮಾ ಟೂರ್ನಿಯ ಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದರೆ, ಬೆಂಗಳೂರು ಕ್ವೀನ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಬೆಳಗಾವಿ ಕ್ವೀನ್ಸ್ ನ ಕವಿತಾ ಗೌಡ ಅತ್ಯುತ್ತಮ ಬ್ಯಾಟ್ಸ್ ಮೆನ್ ಸ್ಥಾನ ಪಡೆದರೆ ಬೆಂಗಳೂರು ಕ್ವೀನ್ಸ್ ನ ಅನುಪಮಾ ಗೌಡ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಸರಣಿ ಆಟಗಾರ ಪ್ರಶಸ್ತಿಯನ್ನು ಕೋಲಾರ ಟೀಂನ ಹೇಮಾ ತಿಮ್ಮಯ್ಯ ಪಡೆದುಕೊಂಡರೆ, ಗ್ರೀಷ್ಮಾ ಗೌಡ ಪಂದ್ಯದ ಅಂತಿಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಈ ಟೂರ್ನಿಯನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮಾಡಲು ಬೇರೆ ಬೇರೆ ರಾಜ್ಯಗಳ ತಂಡಗಳನ್ನೂ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಐಪಿಎಲ್ ಮಟ್ಟಕ್ಕೆ ಬೆಳೆಸುವುದು ನಮ್ಮ ಗುರಿ ಎಂದು ಸಂಘಟಕ ಮಹೇಶ್ ಗೌಡ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮೋದ್ ಶೆಟ್ಟಿ, ಭವ್ಯಾ ಗೌಡ, ಪ್ರೇಮ್ ಮಾಲೂರ್, ಸ್ವಸ್ತಿಕ್ ಆರ್ಯಾ, ಚೇತನ್ ಪಾರೀಕ್, ಸಂತೋಷ್ ಬಿಲ್ಲವ, ಸಚಿನ್ ಮಹಾದೇವ,ರೂಪಿಕಾ ಉಪಸ್ಥಿತರಿದ್ದರು. ಟೂರ್ನಿಯಲ್ಲಿ ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರ ಜೊತೆಯಲ್ಲಿ ನಿರೂಪಕಿಯರು, ರೂಪದರ್ಶಿಯರು ಭಾಗವಹಿಸಿದ್ದರು. ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಸೆಣಸಾಡಿದವು. ಕ್ವೀನ್ ಪ್ರೀಮಿಯರ್ ಲೀಗ್ ನಿಂದ ಸಂಗ್ರವಾದ ಹಣವನ್ನು ರಂಗಸೌರಭ ನೀಡಲಾಗುತ್ತದೆ.