ಗಜರಾಮ’ ಅಖಾಡಕ್ಕೆ ಇಳಿಯಲು ರೆಡಿ ರಾಜವರ್ಧನ್ ರೆಡಿ: ಫೆಬ್ರವರಿ 7ಕ್ಕೆ ಸಿನಿಮಾ ಬಿಡುಗಡೆ
ಟ್ರೇಲರ್ ಹಾಗೂ ಹಾಡಿನ ಮೂಲಕ ಸದ್ದು ಮಾಡುತ್ತಿರುವ ಗಜರಾಮ ಸಿನಿಮಾ ಫೆಬ್ರವರಿ 7ಕ್ಕೆ ತೆರೆಗೆ ಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ನಟನೆ ಮೂಲಕ ಗುರುತಿಸಿಕೊಂಡಿರುವ ಡಿಂಗ್ರಿ ನಾಗರಾಜ್ ಮಗ ರಾಜವರ್ಧನ್ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರ ಇದು

ಗಜರಾಮ ಸಿನಿಮಾದಲ್ಲಿ ರಾಜವರ್ಧನ್ ಕುಸ್ತಿ ಅಖಾಡದಲ್ಲಿ ಪೈಲ್ವಾನ್ ಆಗಿ ತೊಡೆ ತಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಟ ಕಬೀರ್ ಸಿಂಗ್ ‘ಗಜರಾಮ’ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ದೀಪಕ್ ಪೊಲೀಸ್ ಪಾತ್ರದಲ್ಲಿ ಖದರ್ ತೋರಿಸಿದ್ದಾರೆ. ಸಿನಿಮಾದಲ್ಲಿ ನಟಿ ತಪಸ್ವಿನಿ ನಾಯಕಿಯಾಗಿ ಅಭಿನಯಿಸಿದ್ದಾರೆ
ನಟ ರಾಜವರ್ಧನ್ ಮಾತನಾಡಿ, ನಿರ್ಮಾಪಕ ನರಸಿಂಹ ಸರ್ ಸಿನಿಮಾ ಮೇಲಿರುವ ಫ್ಯಾಷನ್. ಸುನಿಲ್ ಬಹಳ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಅವರಿಗೆ ಏನು ಮಾಡ್ಬೇಕು ಎಂಬ ಕ್ಲಾರಿಟಿ ಇದೆ. ಗಜರಾಮ ಜೀವನದ ಒಳ್ಳೆ ಸಿನಿಮಾ. ಪೈಲ್ವಾನ್ ಪಾತ್ರವನ್ನು ಬಹಳ ಇಸಿಯಾಗಿ ಮಾಡಲು ಆಗುವುದಿಲ್ಲ. ಪೈಲ್ವಾನರ ಕಷ್ಟವನ್ನು ನೋಡಿದ್ದೇನೆ. ಸಿನಿಮಾ ಚೆನ್ನಾಗಿ ಆದರೆ ರಿಯಲ್ ಪೈಲ್ವಾನ್ ನರನ್ನು ಇಡೀ ಸಿನಿಮಾ ತಂಡ ಭೇಟಿ ಮಾಡುತ್ತೇವೆ ಎಂದರು.

ನಿರ್ದೇಶಕರಾದ ಸುನಿಲ್ ಮಾತನಾಡಿ, ನಿರ್ದೇಶನದ ಮೊದಲ ಸಿನಿಮಾ. ನಿಮ್ಮೆಲ್ಲರ ಪ್ರೋತ್ಸಾಹ ಸಿನಿಮಾ ಮೇಲೆ ಇರಲಿ. ಮನೋಮೂರ್ತಿ ಸರ್ ದೊಡ್ಡ ಬಲ. ಧನಂಜಯ್ ಕೊರಿಯೋಗ್ರಾಫಿ,. ಜ್ಞಾನೇಶ್ ಸಂಕಲನವಿದೆ. ಇಡೀ ತಾರಾಬಳಗದ ತುಂಬಾ ಚೆನ್ನಾಗಿ ಕಥೆಗೆ ನ್ಯಾಯ ಒದಗಿಸಿದ್ದಾರೆ,. ನಿರ್ಮಾಪಕರು ಕಥೆಗೆ ನಂಬಿ ಬಂಡವಾಳ ಹೂಡಿದ್ದಾರೆ. ಇದೇ ಫೆಬ್ರವರಿ 7ರಂದು ಗಜರಾಮ ತೆರೆಗೆ ಬರುತ್ತಿದೆ ನೋಡಿ ಹರಸಿ ಎಂದು ಕೇಳಿಕೊಂಡರು.

ಮನೋಮೂರ್ತಿ ಸಂಗೀತ ಸಿನಿಮಾಗಿದೆ. ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅವರು ಕಾಣಿಸಿಕೊಂಡಿರುವ ‘ಸಾರಾಯಿ ಶಾಂತಮ್ಮ..’ ಹಾಡು ಈಗಾಗಲೇ ಹಿಟ್ ಆಗಿದೆ. ಈ ಸಿನಿಮಾಗೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ ಮಾಡಿದ್ದಾರೆ. ಜ್ಞಾನೇಶ್ ಬಿ. ಮಠದ್ ಸಂಕಲನ ಮಾಡಿದ್ದಾರೆ. ಧನಂಜಯ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಚಿನ್ಮಯ್ ಭಾವಿಕೆರೆ ಸಾಹಿತ್ಯ ಬರೆದಿದ್ದಾರೆ.

ಕೆಲವು ನಿರ್ದೇಶಕರ ಜತೆ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವ ಹೊಂದಿರುವ ಸುನಿಲ್ ಕುಮಾರ್ ಗಜರಾಮ’ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ.
‘ಬಾಂಡ್ ರವಿ’ ಚಿತ್ರವನ್ನು ನಿರ್ಮಿಸಿದ್ದ ನರಸಿಂಹಮೂರ್ತಿ ‘ಲೈಫ್ ಲೈನ್ ಫಿಲ್ಸ್ ’ ಮೂಲಕ ‘ಗಜರಾಮ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರಾಗಿದ್ದಾರೆ

