Rajesh Ramaswamy action cut for the short film "Ant" after directing the advertisement

ಜಾಹೀರಾತು ನಿರ್ದೇಶನದ ಬಳಿಕ ” ಇರುವೆ” ಕಿರುಚಿತ್ರಕ್ಕೆ ರಾಜೇಶ್ ರಾಮಸ್ವಾಮಿ ಆಕ್ಷನ್ ಕಟ್ - CineNewsKannada.com

ಜಾಹೀರಾತು ನಿರ್ದೇಶನದ ಬಳಿಕ ” ಇರುವೆ” ಕಿರುಚಿತ್ರಕ್ಕೆ ರಾಜೇಶ್ ರಾಮಸ್ವಾಮಿ ಆಕ್ಷನ್ ಕಟ್

ಎರಡು ದಶಕಗಳ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಕಾಣಿಸಿಕೊಂಡಿದ್ದ ಎಲ್ಲಾ ಓಕೆ ಕೂಲ್ ಡ್ರಿಂಕ್ ಯಾಕೆ ಎಂಬ ಜಾಹೀರಾತು ಹಿಂದಿನ ಮಾಸ್ಟರ್ ಮೈಂಡ್ ರಾಜೇಶ್ ರಾಮಸ್ವಾಮಿ, ಈಗ ಕಿರುಚಿತ್ರ ನಿರ್ದೇಶನ ಮಾಡುವ ಮೂಲಕ ನಿರ್ದೇಶನ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.‌

ಜಾಹೀರಾತು ನಿರ್ದೇಶಕ ರಾಜೇಶ್ ರಾಮಸ್ವಾಮಿ ಕಿರುಚಿತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 17 ನಿಮಿಷಗಳ ಅವಧಿಯ ‘ಇರುವೆ’ ಕನ್ನಡ ಕಿರುಚಿತ್ರವನ್ನು ಅವರು ಬರೆದು ನಿರ್ದೇಶಿಸಿದ್ದಾರೆ.

ಇರುವೆ 70 ವರ್ಷ ವಯಸ್ಸಿನ ಗೋವಿಂದಯ್ಯನ ಬಗ್ಗೆ. ಅವರ ಮನೆಯಲ್ಲಿನ ಕೆಂಪು ಇರುವೆಗಳು ಸುತ್ತ ಸಾಗುವ ಕಥೆ. ಇದು ದಿ ಸ್ಕ್ರಿಪ್ಟ್ ರೂಮ್‌ನ ಚೊಚ್ಚಲ ನಿರ್ಮಾಣವಾಗಿದೆ

ಬೆಂಗಳೂರು ಮೂಲದ ಬರಹಗಾರರ ಕೇಂದ್ರವಾದ ‘ದಿ ಸ್ಕ್ರಿಪ್ಟ್ ರೂಮ್‌’ನ ಸಂಸ್ಥಾಪಕರಾಗಿರುವ ರಾಜೇಶ್ ರಾಮಸ್ವಾಮಿ ಊರೂಫ್ ರಾಮ್‌ಸಂ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಅವರ ನಿರ್ದೇಶನದ ಇರುವೆ ಕಿರುಚಿತ್ರದಲ್ಲಿ ದತ್ತಣ್ಣ ಮತ್ತು ಮಹಾಂತೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರಕಾಶ್ ತುಮಿನಾಡ್, ರೋಹಿತ್ ಶ್ರೀನಾಥ್, ಸೋನು ವೇಣುಗೋಪಾಲ್ ಮತ್ತು ಅನಿರುದ್ಧ್ ಆಚಾರ್ಯ ಒಳಗೊಂಡ ತಾರಾಬಳಗವಿದೆ.

ಕಿರುಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ರಾಜೇಶ್ ರಾಮಸ್ವಾಮಿ , ಮಾಲ್ಗುಡಿ ಡೇಸ್‌ನ ದೊಡ್ಡ ಅಭಿಮಾನಿ ಮತ್ತು ಆರ್‌ಕೆ ನಾರಾಯಣ್ ಅವರ ಕಥೆ ಇಷ್ಟಪಟ್ಟಿದ್ದೇನೆ. ಈ ಕಥೆಗಳನ್ನು ಶಂಕರ್ ನಾಗ್ ಅವರು ತೆರೆಗೆ ಅಳವಡಿಸಿದ ರೀತಿ ನನಗೂ ಮೆಚ್ಚುಗೆಯಾಯಿತು. ಈ ಸಾಮಾನ್ಯ ಜನರ ಸರಳ ನಿರೂಪಣಾ ಶೈಲಿ, ಸೂಕ್ಷ್ಮವಾದ ಅವಲೋಕನಗಳು ನಾನು ವೀಕ್ಷಕ ಅಥವಾ ಓದುಗನಾಗಿ ನಿಜವಾಗಿಯೂ ಆನಂದಿಸುವ ಸಂಗತಿಯಾಗಿದೆ. ಎಂದಿದ್ದಾರೆ.

ಅಂದಿನಿಂದ, ನನಗೆ ಪ್ರತಿದಿನ ಭೇಟಿಯಾಗುವ ಈ ಸಾಮಾನ್ಯ ಜನರ ಬಗ್ಗೆ ಕುತೂಹಲವಿದೆ. ಆ ಕಥೆಗಳನ್ನು ಇಟ್ಟುಕೊಂಡು ಇರುವೆ ಕಿರುಚಿತ್ರ ತಯಾರಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಸಾಮಾನ್ಯ ಜನರ ಅಸಾಮಾನ್ಯ ಕಥೆಗಳು. ಇರುವೆ ಚಿತ್ರವು ಜಯನಗರದಲ್ಲಿ ನಡೆಯುವ ಇಂತಹ ಕಥೆಗಳಲ್ಲಿ ಒಂದಾಗಿದೆ ಎಂದು ಮಾಹಿತಿ ಹಂಚಿಕೊಂಡರು

ಮೊದಲ ಬಾರಿಗೆ ಕಥೆಯೊಂದಿಗೆ ದತ್ತಣ್ಣ ಅವರನ್ನು ಸಂಪರ್ಕಿಸಿದಾಗ, ಅವರು “ಹ ಹ್ಹ. ಸರಿ…ನನಗೆ ಕಥೆ ಇಷ್ಟವಾಯಿತು. ಆದರೆ ಈ ಸಿನಿಮಾ ಮಾಡಲು ನಿಮ್ಮ ಮುಖ್ಯ ‘ಉದ್ದೇಶ’ ಯಾವುದು ಆ ಪ್ರಶ್ನೆ ನನ್ನನ್ನೂ ಕಾಡಲು ಪ್ರಾರಂಭವಾಯ್ತು. ಆದರೆ ಪ್ರಾಮಾಣಿಕವಾದ ಉತ್ತರ ಮಾತ್ರ, “ಸರ್, ತಮಾಷೆಗಾಗಿ.” ಮತ್ತು ಹೌದು, ಅದನ್ನು ಶೂಟ್ ಮಾಡುವಾಗ ಬಹಳಷ್ಟು ಆನಂದಿಸಿದ್ದೇವೆ. ಮತ್ತು ಅದನ್ನು ನೋಡುವಾಗ ಪ್ರತಿಯೊಬ್ಬರೂ ಒಂದೇ ರೀತಿಯ ಮಜಾವನ್ನು ಹೊಂದಿರುತ್ತಾರೆ ಎಂದು ನಾವು ಭಾವಿಸುತ್ತೇವೆ. ಅದಕ್ಕಾಗಿಯೇ ನಾವು ಅದನ್ನು ಉಚಿತವಾಗಿ ವೀಕ್ಷಿಸಲು ಯೂ ಟೂಬ್ ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin