Ranga Samudra will hit screens across the state from this Friday

ರಂಗ ಸಮುದ್ರ ಇದೇ ಶುಕ್ರವಾರದಿಂದ ರಾಜ್ಯಾದ್ಯಂತ ತೆರೆಗೆ - CineNewsKannada.com

ರಂಗ ಸಮುದ್ರ ಇದೇ ಶುಕ್ರವಾರದಿಂದ ರಾಜ್ಯಾದ್ಯಂತ ತೆರೆಗೆ

ಸಿನಿಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದ್ದ ಬಹು ನಿರೀಕ್ಷಿತ ರೆಟ್ರೋ ಮೂವಿ “ರಂಗಸಮುದ್ರ” ಭರ್ಜರಿ ತಯಾರಿಯೊಂದಿಗೆ ಕರ್ನಾಟಕದಾದ್ಯಂತ ಬೆಳ್ಳಿ ತೆರೆಯ ಮೇಲೆ ಸಮುದ್ರದ ಅಲೆಯಂತೆ ಭೋರ್ಗರೆದು ಅಪ್ಪಳಿಸಲು ಸಜ್ಜಾಗಿದೆ. ಜನವರಿ 19 ರಂದು ತೆರೆಕಾಣುತ್ತಿದೆ.

“ಒಬ್ಬ ನಿರ್ದೇಶಕ ತಲೆಕೆಡಿಸ್ಕೊಂಡು ನಿಂತ್ರೆ…ಎಂಥಹ ಅದ್ಭುತವನ್ನೇ ಮಾಡಬಹುದು ಅನ್ನೋದಿಕ್ಕೆ ಈ ಚಿತ್ರವೇ ಸಾಕ್ಷಿ”.” ಹೀರೋ ಇಲ್ಲದೆ ಕಥೇಯೆ ಹೀರೋ ಆಗಿರುವ ಈ ಚಿತ್ರದಲ್ಲಿ..ಪ್ರತಿ ಕಲಾವಿದರು ಕೂಡಾ ಈ ಚಿತ್ರಕ್ಕೆ ತುಂಬಾ ನಿಷ್ಠೆಯಿಂದ ತಮ್ಮನ್ನು ತೊಡಗಿಸಿಕೊಂಡಿರುವುದು ಟ್ರೈಲರ್ ನಲ್ಲೆ ಎದ್ದು ಕಾಣುತ್ತೆ”

“ಆ ಮೇಕಿಂಗ್ ಆ ಸಂಭಾಷಣೆ ಆ ನಟನೆಗಳು…..ಅಬ್ಬಬ್ಬಬ್ಬಾ ನೀವು ಹಿಂದೆ ಇನ್ಯಾವ ಸಿನಿಮಾದಲ್ಲೂ ನೋಡಿರೋಕೆ ಸಾಧ್ಯನೆ ಇಲ್ಲ” “ಇಂತಹ ಒಂದು ಕಥೆಯೆ ಹೀರೋ ಆಗಿರುವ ಚಿತ್ರ…ಅದ್ರಲ್ಲೂ ನಮ್ಮ ಕನ್ನಡದ ಚಿತ್ರ ಸೋಲೋದು ಸೈಡಿಗಿರಲಿ ತಲೆ ಕೂಡಾ ತಗ್ಗಿಸಬಾರದು” ಈ ರೀತಿ ರಂಗಸಮುದ್ರದ ಬಗ್ಗೆ ವಿಶ್ಲೇಶಿಸಿದ್ದು ಪ್ರೀಮಿಯರ್ ಶೋ ನೋಡಿದ ಹಿರಿಯ ಪತ್ರಕರ್ತರು ಹಾಗೂ ಸ್ಯಾಂಡಲ್ವುಡ್ ನ ಸೆಲೆಬ್ರೆಟಿಗಳು ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ

ಸ್ಯಾಂಡಲ್‍ವುಡ್‍ನಲ್ಲಿ ಬಹಳ ದಿನಗಳ ನಂತರ ಬಹುನಿರೀಕ್ಷಿತ ರೆಟ್ರೋ ಸಿನಿಮಾವೊಂದು ತಯಾರಾಗಿದೆ ಅದುವೆ ರಂಗಸಮುದ್ರ ಇದೇ ತಿಂಗಳು ತೆರೆಮೇಲೆ ಬರುವುದಕ್ಕೆ ರೆಡಿಯಾಗಿದೆ. ಇದೊಂದು ಉತ್ತರ ಕರ್ನಾಟಕ ಸೊಗಡಿನ ಸಿನಿಮಾವಾಗುವುದರ ಜೊತೆಗೆ ದಕ್ಷಿಣ ಕನ್ನಡ ಭಾಷೆಯ ಜುಗಲ್ ಬಂದಿ ಹೊಂದಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿದ್ದಂತಹ ಕಥೆಯನ್ನೆ ಆದರಸಿ ಸಿನಿಮಾ ಮಾಡಲಾಗಿದೆ. ಶಿಕ್ಷಣ ವಂಚಿತರಾಗಿ ಬಹಳ ಹಿಂದುಳಿದಿರುವ ಪ್ರದೇಶಗಳ ಸ್ಥಿತಿ-ಗತಿಯನ್ನು ಇಲ್ಲಿ ಅನಾವರಣ ಮಾಡಿ ತಿಳಿ ಹೇಳುವ ಕಾರ್ಯವನ್ನು ಈ ಸಿನಿಮಾದಿಂದ ಮಾಡಲಾಗುತ್ತಿದೆ.

ಈ ಚಿತ್ರ ಮೂಹೂರ್ತವಾಗಿ ನಾಲ್ಕು ವರ್ಷಗಳೇ ಆಗಿದೆ ಸತತ ಎರಡು ವರ್ಷ ಇಡೀ ವಿಶ್ವವೇ ಒಳಗಾದ ಕೋವಿಡ್ ಇಂದಾಗಿ ಸಿನಿಮಾ ಚಿತ್ರಿಕರಣ ತಡವಾಯಿತು…ತಡವಾದರು ಕೂಡ ಒಳ್ಳೆಯದೆ ಆಯಿತು ಸಿನಿಮಾಗೆ ಇನ್ನಷ್ಟು ಮಹತ್ವ ಸೇರಿಸಲು ಸಮಯ ಸಿಕ್ಕಿತು ಹಾಗಾಗಿ ಇನ್ನಷ್ಟು ಕ್ವಾಲಿಟಿ ಕೂಡ ಸಿಕ್ಕಿತು ಎನ್ನುತ್ತಾರೆ ನಿರ್ಧೇಶಕರು.

ಇನ್ನು ಮುಂದುವರಿದು ನೋಡುವುದಾದರೆ ದಕ್ಷಿಣ ಭಾರತದ ಮಹಾ ದಿಗ್ಗಜರೇ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ, ರಾಘವೇಂದ್ರ ರಾಜ್ ಕುಮಾರ್, ರಂಗಾಯಣ ರಘು, ಸಂಪತ್ ರಾಜ್, ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜು, ಕಾರ್ತಿಕ್ ರಾವ್, ದಿವ್ಯ ಗೌಡ, ಮಹೇಂದ್ರ, ಸ್ಕಂದ ಇನ್ನು ಹಲವಾರು ಮಂದಿ ಚಿತ್ರಕ್ಕೆ ಜೀವ ತುಂಬಿದ್ದಾರೆ.

ಈ ಚಿತ್ರದ ಹಾಡುಗಳಿಗೆ ಮುಖ್ಯವಾಗಿ ಎಂ.ಎಂ ಕೀರವಾಣಿ, ಕೈಲಾಶ್ ಕೇರ್. ವಿಜಯ್ ಪ್ರಕಾಶ್ ಸಂಚಿತ್ ಹೆಗ್ಡೆ ನವೀನ್ ಸಜ್ಜು ಚಿತ್ರದ ಸಂಗೀತ ನಿರ್ದೇಶಕ ದೇಸಿ ಮೋಹನ್ ಅಂತ ಘಟಾನುಘಟಿ ಹಾಡುಗಾರರೆ ಧನಿಯಾಗಿದ್ದರೆ.ಹಾಗೂ ಹಿನ್ನಲೆ ಸಂಗೀತದ ನಿರ್ವಹಣೆಯನ್ನು ಡೇನಿಯಲ್ ಕಿರಣ್ ಅವರು ಹೊತ್ತಿದ್ದು ಬಹಳ ಅಧ್ಬುತವಾಗಿ ನೀಡಿದ್ದಾರೆ..ಚಿತ್ರದ ಸಂಕಲವನ್ನು ಕೆ.ಜಿ.ಎಫ್ ಶ್ರೀಕಾಂತ್ ತಮ್ಮದೆ ಆದ ವಿಶಿಷ್ಟ ವಾದ ಬ್ರಾಂಡ್ ರೀತಿ ಮಾಡಿದ್ದಾರೆ. ಆರ್.ಗಿರಿ ಛಾಯಾಗ್ರಹಣವಿದೆ..

ರಾಜ್‍ಕುಮಾರ್ ಅಸ್ಕಿ ಸಿನಿಮಾದ ಕಥೆ ಬರೆದು ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ಈ ಕಥೆ ಹುಟ್ಟಿಕೊಂಡಿದ್ದೆ ಒಂದು ಕ್ರೇಜಿ ಮೂಮೆಂಟ್ ಎಂದು ಹೇಳುವ ನಿರ್ದೇಶಕರು ಈ ಸಿನಿಮಾ ಮಾಡುವಾಗ ಸಾಕಷ್ಟು ರಿಸರ್ಚ್ ಮಾಡಿದ್ದೀವಿ. ಹತ್ತು ಸಿನಿಮಾ ಮಾಡುವ ಬದಲು ಒಂದು ಸಿನಿಮಾ ಮಾಡಿದರು ಪ್ರೇಕ್ಷಕರ ಮನಸ್ಸಲ್ಲಿ ಅದು ಉಳಿಯಬೇಕು. ಕೆಲವೊಂದು ವಿಚಾರಕ್ಕೆ ಕೆಲವೊಮ್ಮೆ ಕಾಂಪ್ರಮೈಸ್ ಆಗಬೇಕಾಗುತ್ತದೆ ಆದರೆ ನಮ್ಮ ನಿರ್ಮಾಪಕರಾದ ಹೊಯ್ಸಳ ಕೊಣನೂರು ಅವರು ಯಾವುದಕ್ಕೂ ಕಾಂಪ್ರಮೈಸ್ ಆಗುವುದು ಬೇಡಾ ಹಾಗೊಮ್ಮೆ ಆಗುವುದಾದರೆ ಮತ್ತು ಏನೆ ಕೇಳುವುದಿದ್ದರು ಈಗಲೇ ಕೇಳಿ ಆಮೇಲೆ ಈ ಪಾತ್ರ ಅವರು ಮಾಡಬೇಕಿತ್ತು, ಆ ಹಾಡು ಅವರು ಹಾಡಬೇಕಿತ್ತು ಎಂಬಾ ನಿರಾಸೆ ನಿಮಗೆ ಬೇಡಾ ಯಾರು ಬೇಕೋ ಅವರನ್ನೆ ಕರೆತರುತ್ತೇನೆ ಎಂದು ಭರವಸೆ ನೀಡಿದರು. ನಮ್ಮಮನವಿಗೆ ಭರವಸೆ ನೀಡಿದ ನಿರ್ಮಾಪಕರು ನುಡಿದಂತಯೆ ಬೇಕಾಗಿರುವ ಅಮೂಲ್ಯ ತಾರೆಗಳನ್ನೆ ನೀಡಿದ್ದಾರೆ ಎಂದು ನಿರ್ಮಾಪಕರ ಬಗೆಗಿನ ಮಾತುಗಳನ್ನು ಹೇಳಿದ್ದಾರೆ.

ಈ ಸಿನಿಮಾದಲ್ಲಿ ನಿರ್ದೇಶಕ, ನಿರ್ಮಾಪಕರಿಗೆ ಬೇಸರ ಆಗಿದ್ದು ಅಪ್ಪು ನಿಧನ. ಎಲ್ಲವೂ ಫೈನಲ್ ಆಗಿತ್ತು. ಆದರೆ ಅದೇ ಸಮಯಕ್ಕೆ ವಿಧಿ ಅಪ್ಪು ಜೀವನದ ಜೊತೆಗೆ ಆಟವಾಡಿ ಆಗಿತ್ತು. ಈ ಬಗ್ಗೆ ಬೇಸರ ಮಾಡಿಕೊಂಡ ನಿರ್ದೇಶಕ ರಾಜ್‍ಕುಮಾರ್ ಆಸ್ಕಿ. ‘ಈ ಸಿನಿಮಾದಲ್ಲಿ ಅಪ್ಪು ಸರ್‍ಗಾಗಿಯೇ ಬರೆದ ಒಂದು ಪಾತ್ರ ಇದೆ. ಐ.ಎ.ಎಸ್ ಆಫೀಸರ್ ಆಗಿ, ಇಡೀ ಸಿನಿಮಾದ ಜರ್ನಿಯಲ್ಲಿ ಅವರು ಇದ್ದರು. ಅವರನ್ನ ಭೇಟಿ ಮಾಡಿ ಕಥೆಯನ್ನು ಹೇಳಿದ್ದೆವು. ಆ ದುರ್ಘಟನೆ ನಡೆಯುವುದಕ್ಕೂ ಹಿಂದಿನ ದಿನ ಫೈನಲ್ ಕೂಡ ಮಾಡಿದ್ದರು. ಜೇಮ್ಸ್ ಸಿನಿಮಾ ಮುಗಿಯುತ್ತೆ. ನವೆಂಬರ್ 5-6ಕ್ಕೆ ಫಿಕ್ಸ್ ಮಾಡಿಕೊಳ್ಳಿ ಎಂದು ಫೈನಲ್ ಕೂಡ ಆಗಿತ್ತು. ಕಥೆಯೆಲ್ಲಾ ಪತ್ನಿ ಅಶ್ವಿನಿ ಅವರ ಸಮೇತವಾಗಿ ಒಕೆ ಎಂದಿದ್ದರು. ಅಷ್ಟೇ ಅಲ್ಲಾ ಆ ಸಿನಿಮಾವನ್ನು ನಾವೇ ತೆಗೆದುಕೊಳ್ಳಬಹುದಾ ಎಂದು ವಿಶ್ವಾಸದಲ್ಲಿ ಕೇಳಿದ್ದರು ಎನ್ನುತ್ತಾರೆ ನಿರ್ಮಾಪಕ ಹೊಯ್ಸಳ ಕೊಣನೂರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin