ತೆರೆಯ ಮೇಲೆ ಸಾಧಕಿ ವಿ ಆಶಾ ಯಶೋಗಾಥೆ: ಸೆಬಾಸ್ಟಿನ್ ಡೇವಿಡ್ ಹೊಸ ಸಾಹಸ

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸತನಕ್ಕೆ ಒತ್ತು ನೀಡುವ ಮತ್ತು ವಿಭಿನ್ನ ಕಥೆಗಳ ಚಿತ್ರಗಳು ಸೆಟ್ಟೇರುತ್ತಿವೆ. ಅದರ ಸಾಲಿಗೆ ಹೊಸ ಸೇರ್ಪಡೆ ” ಬೇಲಿ ಹೂ”. ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಒಂದಷ್ಟು ಬಿಡುವಿನ ನಂತರ ನೈಜ ಘಟನೆಯ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ರಂಗಭೂಮಿಯ ಪ್ರತಿಭಾವಂತ ಕಲಾವಿದ ಸಂಪತ್ ಮೈತ್ರೇಯಾ, ಶ್ವೇತಾ ಶ್ರೀನಿವಾಸ್ ನಟಿಸುತ್ತಿದ್ದು ಬಿ. ರಾಮಮೂರ್ತಿ ಸೇರಿದಂತೆ ಬಹುತೇಕ ರಂಗಭೂಮಿಯ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ರಾಮನಗರದ ಚಾಮುಂಡಿಶ್ವರಿ ಅಮ್ಮನ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಿತು .ಈ ವೇಳೆ ಡಿವೈಎಸ್ ಪಿ ದಿನಕರ್ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ನರಸಿಂಹಮೂರ್ತಿ, ಹೆಚ್ಚುವರಿ ಸಬ್ ಇನ್ಸ್ ಪೆಕ್ಟರ್ ಸುರೇಶ್, ನಗರಸಭಾ ಆಯುಕ್ತ ನಾಗೇಶ್,, ನಗರ ಸಭೆ ಉಪಾಧ್ಯಕ್ಷ ಸೋಮಶೇಖರ್ ಮಣಿ ,ರಕ್ಷಣಾ ವೇದಿಕೆಯ ಎಂ ಆರ್ ರಾಜು , ಮಾದೇಗೌಡ ಸೇರಿದಂತೆ ಹಲವರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು.

” ಬೇಲಿ ಹೂ ” ಚಿತ್ರದ ಮೂಲಕ ಸಾಹಸಿ ಮಹಿಳೆಯ ಯಶೋಗಾಥೆಯನ್ನು ಚಿತ್ರದ ಮೂಲಕ ತೆರೆಗೆ ಕಟ್ಟಿಕೊಡುವ ಕೆಲಸವನ್ನು ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮಾಡುತ್ತಿದ್ದಾರೆ. ವಿ ಆಶಾ ಅವರ ಬದುಕಿನ ಕಥೆ ಚಿತ್ರರೂಪಕ್ಕೆ ಬರುತ್ತಿದ್ದು ತಿರುಮಲ ಸಿನಿ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಲಯನ್ ಎಸ್ .ವೆಂಕಟೇಶ್ ಬಂಡವಾಳ ಹಾಕುತ್ತಿದ್ದಾರೆ.
2016 ರಲ್ಲಿ ರೈಲ್ವೆ ಅಪಘಾತದಲ್ಲಿ ದೇಹ ತುಂಡು ತುಂಡಾಗಿದ್ದ ಸಂದರ್ಭದಲ್ಲಿ ಪೆÇಲೀಸರು ಸೇರಿದಂತೆ ಯಾರೂ ಕೂಡ ಅದರ ಅಂತ್ಯಸಂಸ್ಕಾರಕ್ಕೆ ಮುಂದಾಗದ ಸಂದರ್ಭದಲ್ಲಿ ವಿ ಆಶಾ ಅವರೇ ಮುಂದೆ ನಿಂತು ಮುಂದಿನ ಕೆಲಸ ಮಾಡಿದ್ದರು. ಇದಾದ ನಂತರ ಅದೇ ವರ್ಷ ಈ ಕೆಲಸವನ್ನೇ ತಮ್ಮ ಕಾಯಕ ಮಾಡಿಕೊಂಡ ಅವರು ಇದುವರೆಗೂ 5000ಕ್ಕೂ ಹೆಚ್ಚು ಅನಾಥ ಶವಗಳಿಗೆ ಮುಕ್ತಿ ನೀಡುವ ಮೂಲಕ ಮಾನವೀಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅದಕ್ಕೆ ಮೂಲ ಪ್ರೇರಣೆ ಅವರ ಮಾವ . ವೃತ್ತಿಯಲ್ಲಿ ಆಂಬುಲೆನ್ಸ್ ಚಾಲಕರಾಗಿರುವ ಅವರು ಕೆಲಸಕ್ಕೆ ಪ್ರೇರಣೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ ವಿ ಆಶಾ.
ಇದೇ ಕಥೆ ಇದೀಗ ಸಿನಿಮಾ ರೂಪಕ್ಕೆ ಬರುತ್ತಿದೆ. ವಿ ಆಶಾ ಅವರ ಸಮಾಜ ಸೇವಾ ಕಾರ್ಯವನ್ನು ಗಮನಿಸಿದ ನಿರ್ಮಾಪಕ ಲಯನ್ ಎಸ್ ವೆಂಕಟೇಶ್ ಅವರು ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಿತ್ರದಲ್ಲಿ ಬಹುತೇಕ ನೈಜ ಪಾತ್ರಗಳನ್ನ ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ಸೆಬಾಸ್ಟಿನ್ ಡೇವಿಡ್.

ವಿ.ಆಶಾ ಪಾತ್ರದಲ್ಲಿ ರಂಗಭೂಮಿ ಕಲಾವಿದೆ ಸಮಾಜವನ್ನು ಶುದ್ಧ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಜನರನ್ನು ಗುರುತಿಸಿ ಎನ್ನುವ ಸಂದೇಶವನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಕಾಣದ ದೇವರಿಗಿಂತ ಕಣ್ಣಮುಂದೆ ಇರುವ ಇಂತಹ ಸೇವಾ ಕಾರ್ಯದಲ್ಲಿ ತೊಡಗಿರುವ ಜನರನ್ನು ಗುರುತಿಸಿ ಗೌರವಿಸಿ ಎನ್ನುವ ಉದ್ದೇಶವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗುತ್ತಿದೆ.
ವಿ ಆಶಾ ಅವರು ಸಮಾಜ ಸೇವೆಯಲ್ಲಿ ತೊಡಗಿ ಕೊಂಡರೂ ಯಾವುದೇ ಪ್ರಚಾರ ಬಯಸದೆ ತಮ್ಮಿಷ್ಟಕ್ಕೆ ತಾವೇ ಇಂದಿಗೂ ಕೂಡ ಕೆಲಸ ಮುಂದುವರಿಸಿಕೊಂಡು ಬಂದಿದ್ದಾರೆ .ಆ ಕಥೆಗೆ ನಿರ್ದೇಶಕರು ಚಿತ್ರಕಥೆ ಬರೆದು ನಿರ್ದೇಶನ ಮಾಡಲು ಮುಂದಾಗಿದ್ದಾರೆ
ಚಿತ್ರಕ್ಕೆ ಸಂಭಾಷಣೆ ಮತ್ತು ಸಂಕಲನದ ಜವಾಬ್ದಾರಿಯನ್ನು ನಾಗೇಶ್ ಹೊತ್ತಿದ್ದಾರೆ. ವಿ ಆಶಾ ಅವರ ಕಥೆಯನ್ನ ಹಾಗೆ ಬಳಸಿಕೊಳ್ಳಲಾಗುತ್ತಿದೆ.. ಸಿಜು ಕ್ಯಾಮರಾ ಕೆಲಸ ನಿರ್ವಹಿಸುತ್ತಿದ್ದಾರೆ ಒಂದೇ ಹಂತದಲ್ಲಿ ರಾಮನಗರದ ಸುತ್ತಮುತ್ತ ಚಿತ್ರಿಕರಣ ಮಾಡುವ ಉದ್ದೇಶವನ್ನು ಹೊಂದಲಾಗಿದೆ