“ಸೆಪ್ಟೆಂಬರ್ 10” ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ
ಜೀವನದಲ್ಲಿ ಎದುರಾಗುವಂಥ ಹಲವಾರುಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ ಎಂಬ ಉತ್ತಮ ಸಂದೇಶ ಇಟ್ಟುಕೊಂಡು ಶತ ಸಿನಿಮಾಗಳ ಸರದಾರ ಓಂ ಸಾಯಿ ಪ್ರಕಾಶ್ ‘ಸೆಪ್ಟೆಂಬರ್ 10’ ಎಂಬ ಚಿತ್ರ ನಿರ್ದೇಶನ ಮಾಡಿದ್ದಾರೆ.

ರಾಜಮ್ಮ ಸಾಯಿಪ್ರಕಾಶ್ ನಿರ್ಮಾಣ ಮಾಡಿರುವ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ, ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಿದ ಡಾ.ಎಸ್. ರಾಜು ಈ ಚಿತ್ರದ ಕಂಟೆಂಟ್ ಆಧರಿಸಿ ಮಾಡಿರುವ ತುಣುಕುಗಳು ಹಾಗೂ ಮೇಕಿಂಗ್ ವಿಡಿಯೋ ಟೀಸರ್ಗೆ ಚಾಲನೆ ನೀಡಿದರು. ಬಿಬಿಎಂಪಿ ಮಾಜಿ ಸದಸ್ಯರೂ ಆದ ಡಾ.ಎಸ್. ರಾಜು ಮತ್ತಿತರು ಆಗಮಿಸಿ ಶುಭ ಹಾರೈಸಿದರು
ನಿರ್ದೇಶಕ ಸಾಯಿಪ್ರಕಾಶ್ ಮಾತನಾಡಿ ಈಗಿನ ಕಾಲದಲ್ಲಿ ಒಂದು ಸಿನಿಮಾ ಮಾಡುವುದೇ ಕಷ್ಟ, ಮಾಡಿದರೂ ಅದನ್ನು ಜನರಿಗೆ ತಲುಪಿಸುವುದು ಇನ್ನೂ ಕಷ್ಟ. 2020ರಲ್ಲಿ ಸೆಪ್ಟೆಂಬರ್ 10 ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ ಸ್ಟಾರ್ಟ್ ಮಾಡಿದೆ. ಅಷ್ಟರಲ್ಲಿ ಕೊರೋನಾ ಬಂತು. ಜನ ಬರ್ತಾರೆ ಇಲ್ವೋ ಎಂಬ ಭಯದಿಂದ ಅದನ್ನು ರಿಲೀಸ್ ಮಾಡಲೇ ಇಲ್ಲ. ಈಗಲೂ ಆ ಭಯ ಇತ್ತು. ದೊಂಬರ ಕೃಷ್ಣ ಸುರೇಶ್ ಡಾ.ರಾಜು ಬಗ್ಗೆ ಹೇಳಿದರು. ರಾಜು ವಿಜಯನಗರದಲ್ಲಿ ಮನೆ ಮಾಡಿದಾಗಿನಿಂದಲೂ ಪರಿಚಯ. ನಂತರ ಹೋಗಿ ರಾಜು ಅವರಿಗೆ ಕಥೆ ಹೇಳಿದಾಗ ತುಂಬಾ ಇಷ್ಟಪಟ್ಟರು. ಈಗಿನ ಕಾಲದಲ್ಲಿ ಇಂಥ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು. ಸಿನಿಮಾ ನೋಡಿದ ಕೆಲವರಾದರೂ ತಮ್ಮಮನಸು ಬದಲಾಯಿಸಿಕೊಂಡರೆ ನಮಗದೇ ಖುಷಿಯ ವಿಚಾರ ಎಂದರು

ಸೆಂಟಿಮೆಂಟ್, ಕಾಮಿಡಿ ಹೀಗೆ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದೆ. ಏನಾದರಾಗಲಿ ಜತೆ ಇರುತ್ತೇನೆ ಎಂದು ನಮ್ಮ ಜತೆ ನಿಂತರು. ಅವರು ಕೊಟ್ಟ ದೈರ್ಯದಿಂದ ರಿಲೀಸ್ ಮಾಡುತ್ತಿದ್ದೇನೆ. ಅಲ್ಲದೆ ಕರವೇ ನಾರಾಯಣಗೌಡರೂ ನಮ್ಮ ಜತೆ ನಿಂತಿದ್ದಾರೆ. ನಮ್ಮ ಎಲ್ಲ ಸದಸ್ಯರಿಗೂ ಈ ಸಿನಿಮಾ ನೋಡಿ ಎಂದು ಹೇಳುತ್ತೇನೆ ಎಂದಿದ್ದಾರೆ. ಜತೆಗೆ ಆ ಶಿರಡಿ ಸಾಯಿಬಾಬಾ ಕೂಡ ನಮ್ಮಜತೆ ಇದ್ದಾರೆ ಎಂದು ಹೇಳಿದರು.
ಹಿರಿಯನಟ ರಮೇಶ್ ಭಟ್ ಮಾತನಾಡಿ ಸಿನಿಮಾ ಬಗ್ಗೆ ನಾನೇನೂ ಹೇಳುವಂತಿಲ್ಲ. ಆಗಲೇ ಚಿತ್ರದಲ್ಲಿರುವ ಎಲ್ಲ ವಿಚಾರಗಳನ್ನು ಬಗ್ಗೆ ಮಾತಾಡಿದ್ದಾರೆ. ನಾನು ಇದರಲ್ಲಿ ಒಬ್ಬ ಲಾಯರ್ ಪಾತ್ರ ಮಾಡಿದ್ದೇನೆ. ಸಾಯಿಪ್ರಕಾಶ್ ಎಲ್ಲ ಚಿತ್ರಗಳಲ್ಲಿ ನಾನಿರಬೇಕು ಎನ್ನುವುದು ಅವರಿಚ್ಚೆ. ಹಾಗಾಗಿಯೇ ನಾನಿಲ್ಲಿದ್ದೇನೆ. ನಮ್ಮಂಥ ಕಲಾವಿದರಿಗೆ ಯಾರೂ ಕರೆಯಲ್ಲ. ಈ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಕೊಡಿ ಎಂದು ಮಾಧ್ಯಮದವರಿಗೆ ಕೇಳಿಕೊಂಡರು.
ನಟ ಗಣೇಶ ರಾವ್ ಕೇಸರಕರ್ ಮಾತನಾಡಿ ಕರೊನಾ ಕಾಲದಲ್ಲು ನಾನು ಹಾಗೂ ಡಾ.ರಾಜು ಸೇರಿ ಅನೇಕ ಮೆಡಿಕಲ್ ಕ್ಯಾಂಪ್ ಮಾಡಿದ್ದೇವೆ. ಆನಂತರವೂ ರಾಜು ಅವರು ನಮ್ಮ ಜತೆಗಿದ್ದಾರೆ. ಅಷ್ಟೊಂದು ಸಿನಿಮಾ ಮಾಡಿದರೂ ಸಾಯಿಪ್ರಕಾಶ್ ಅವರು ನಮ್ಮ ಸಿನಿಮಾ ನೋಡಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುವುದು ನಿಜಕ್ಕೂ ಬೇಸರದ ಸಂಗತಿ ಎಂದರು.

ನಟಿ ಶ್ರೀರಕ್ಷಾ ಮಾತನಾಡಿ ಸಾಯಿಪ್ರಕಾಶ್ ಅವರ 2-3 ಸಿನಿಮಾಗಳಲ್ಲಿ ನಟಿಸಿದ್ದೇನೆ. ಇದರಲ್ಲೂ ಒಂದೊಳ್ಳೆ ಪಾತ್ರ ನೀಡಿದ್ದಾರೆ ಎಂದು ಹೇಳಿದರು.
ಹಿರಿಯ ನಟ ಶಿವಕುಮಾರ್ ಸೇರಿದಂತೆ ಹಲವಾರು ಕಲಾವಿದರು ತಂತಮ್ಮ ಅನುಭವಗಳನ್ನು ಹಂಚಿಕೊಂಡರು.
ಛಾಯಾಗ್ರಾಹಕ ಜೆ.ಜಿ.ಕೃಷ್ಣ, ಕಮಲ್ ಮೂವಿ ಡಿಸ್ಟ್ರಿಬ್ಯೂಟರ್ಸ್ ರಮೇಶ್ ಭಟ್, ಸಂಧ್ಯಾರಾಣಿ ವೇದಿಕೆಯಲ್ಲಿದ್ದರು. ಮ್ಯೂಸಿಕ್ ಬಜಾರ್ ಚಿತ್ರದ ಹಾಡುಗಳನ್ನ ಹೊರತಂದಿದೆ.

