ವಿಶಿಷ್ಠ ಕಥಾಹಂದರದ “ದೇವಸಸ್ಯ’ ಚಿತ್ರದ ಶೀರ್ಷಿಕೆ ಟೀಸರ್ ಬಿಡುಗಡೆ
“ದೇವಸಸ್ಯ” ವಿಶಿಷ್ಠ ಕಥಾಹಂದರ ಹೇಳುವ ಹಾಗೂ ಅಪರೂಪದ ಗಿಡದ ಸುತ್ತ ನಡೆಯುವ ಘಟನೆಗಳ ಗುಚ್ಛ. ಬಹುತೇಕ ಉತ್ತರ ಕನ್ನಡದವರೇ ಸೇರಿ ಮಾಡಿರುವ ಪ್ಯಾನ್ ಇಂಡಿಯಾ ಚಿತ್ರವಿದು. ಕನ್ನಡ, ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ದೇಶಾದ್ಯಂತ ತೆರೆಗೆ ಬರುತ್ತಿದೆ.

ಅನಂತಕುಮಾರ್ ಹೆಗ್ಡೆ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಕಾರ್ತೀಕ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ನಟ ನವೀನ್ ಕೃಷ್ಣ ಚಿತ್ರದ 5 ಭಾಷೆಯ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ನಿರ್ದೇಶಕ ಕಾರ್ತಿಕ್ ಭಟ್ ಮಾತನಾಡಿ ಸಿನಿಮಾ, ಸೀರಿಯಲ್ ಗಳಿಗೆ ಬರಹಗಾರನಾಗಿ ಕೆಲಸ ಮಾಡಿದೆ. ಸಿರ್ಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಕಥೆಯಿದು. ನಿರ್ಮಾಪಕರ ಪರಿಚಯ ಆದಮೇಲೆ ಅವರಿಗೆ ಕಥೆ ಹೇಳಿದೆ. ತುಂಬಾನೇ ಇಷ್ಟಪಟ್ಟು ನಿರ್ಮಾಣ ಮಾಡುತ್ತಿದ್ದಾರೆ. ಎರಡು ಊರುಗಳ ಮಧ್ಯೆ ನಡೆಯುವ ಕಥೆ. ಕಥೆಗಾಗೇ 2 ವರ್ಷ ಪೇಪರ್ ವರ್ಕ್ ರೆಡಿ ಮಾಡಿಕೊಂಡೆ. ಅಲ್ಲಿ ನಿರ್ಮಾಪಕರೂ ಜತೆಗಿದ್ದರು. ಸಿದ್ದಿ ಹುಡುಗನ ಪಾತ್ರವನ್ನು ಸೆಲ್ವಿನ್ ದೇಸಾಯಿ ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರವನ್ನು ಅಹನ ಮಾಡಿದ್ದಾರೆ ಎಂದರು.
1995ರಲ್ಲಿ ನಡೆವ ಕಥೆಯಾಗಿದ್ದರಿಂದ ಆಗಿನ ಕಾಲದ ಲೊಕೇಶನ್ ಎಲ್ಲೂ ಸಿಗಲಿಲ್ಲ, .ಹಾಗಾಗಿ ಸೆಟ್ ಹಾಕಿಸಿದ್ದೆವೆ. ಕೆಜಿಎಫ್ ಖ್ಯಾಥಿಯ ಕರಣ್ ಅದ್ಭುತವಾಗಿ ಸೆಟ್ ಹಾಕಿದ್ದಾರೆ. ಈಗಾಗಲೇ 45 ದಿನಗಳ ಶೂಟಿಂಗ್ ನಡೆಣ ದಿದೆ. ಹೊಸಬರ ತಂಡ, ತುಂಬಾ ಆತ್ಮವಿಶ್ವಾಸದಿಂದ ಈ ಸಿನಿಮಾ ಮಾಡಿದ್ದೇವೆ. ದೇವಸಸ್ಯ ಏನು ಎನ್ನುವುದೇ ಚಿತ್ರ ನೋಡಿದ ನಂತರವೇ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ

ನಟ ಸೆಲ್ವಿನ್ ಮಾತನಾಡಿ ಸಿನಿಮಾದಲ್ಲಿ ಆಕ್ಟ್ ಮಾಡಬೇಕೆಂದೇ ಬೆಂಗಳೂರಿಗೆ ಬಂದೆ. ಟ್ರ್ಯಾಕ್ಟರ್ ಓಡಿಸುತ್ತಿದ್ದೆ. ಆಗ ನಿರ್ದೇಶಕರು ಈ ಸಿನಿಮಾಗೆ ಕರೆದರು ನಂತರವೇ ಆಕ್ಷನ್ ಎಲ್ಲಾ ಕಲಿತೆ ಎಂದು ವಿವರಿಸಿದರು.ಮತ್ತೊಬ್ಬನಟ ಅಹನಾ ಮಾತನಾಡುತ್ತ ಇದರಲ್ಲಿ ಕುರ್ಮುಷ್ಠ ಎಂಬ ಪಾತ್ರ ಮಾಡಿದ್ದೇನೆ ಎಂದರು.ನಾಯಕಿ ಬಿಂಬಿಕಾ ಮಾತನಾಡಿ ಚಿತ್ರದಲ್ಲಿ ನಾನು ಮಾತಂಗಿ ಎಂಬ ಸಿದ್ದಿ ಜನಾಂಗದ ಹುಡುಗಿಯಾಗಿ ನಟಿಸಿದ್ದೇನೆ. ನಾರಾಯಣ ನಾರಾಯಣ ನಂತರ ಇದು ನನ್ನ 5ನೇ ಚಿತ್ರ ಎಂದರು.

ನಿರ್ಮಾಪಕ ಅನಂತಕುಮಾರ್ ಹೆಗ್ಡೆ ಮಾತನಾಡಿ ಮೊದಲಿಂದಲೂ ಸಿನಿಮಾ ಹೀರೋ ಆಗಬೇಕೆಂಬ ಆಸೆಯಿತ್ತು. ಈಗ ನಿರ್ಮಾಪಕನಾಗಿದ್ದೇನೆ.ಹಿಂದೆ ನಮ್ಮದು ಬಡತನದ ಕುಟುಂಬ. ಬೆಂಗಳೂರಿಗೆ ಬಂದು ಅರ್ಚಕನಾಗಿ ಕೆಲಸ ಮಾಢ್ತಿದ್ದೆ. ಜನರಿಗೆ ಓಂದೊಳ್ಳೆ ಸಿನಿಮಾ ನೀಡಬೇಕೆಂದು ಈ ಚಿತ್ರ ಪ್ರಾರಂಭಿಸಿದೆ. ಅದ್ಭುತವಾದ, ವಿಶೇಷವಾದ ಸಂಜೀವಿನಿ ಗಿಡವೇ ದೇವಸಸ್ಯ. ಅದರ ಸುತ್ತ ನಡೆವ ಕಥೆಯಿದು. 30 ವರ್ಷಗಳ ಹಿಂದಿದ್ದ ಊರನ್ನು ಮರುಸೃಷ್ಠಿ ಮಾಡಿದ್ದೇವೆ. ಒಂದು ಸಸ್ಯದ ಕುರಿತಂತೆ ಮಾಡಿರುವ ಕಥೆಯಾಗಿದ್ದರಿಂದ ಎಲ್ಲಾ ಭಾಷೆಗಳಿಗೂ ಅನ್ವಯವಾಗುತ್ತೆ ಅಂತ 5 ಭಾಷೆಗೂ ಡಬ್ ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಜು ಎನ್.ಎಂ ಛಾಯಾಗ್ರಹಣ, ಹರಿ ಅಜಯ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

