Siddegowda-Nandini pair made a comeback; Ashwini Puneeth Rajkumar wishes good luck for Aayogya-2

ಮತ್ತೆ ಬಂದ ಸಿದ್ದೇಗೌಡ- ನಂದಿನಿ ಜೋಡಿ ; ಆಯೋಗ್ಯ-2ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಶುಭ ಹಾರೈಕೆ - CineNewsKannada.com

ಮತ್ತೆ ಬಂದ ಸಿದ್ದೇಗೌಡ- ನಂದಿನಿ ಜೋಡಿ ; ಆಯೋಗ್ಯ-2ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಶುಭ ಹಾರೈಕೆ

ನಟ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಅಭಿನಯದ ” ಆಯೋಗ್ಯ” ಚಿತ್ರ 6 ವರ್ಷದ ಹಿಂದೆ ತೆರೆಗೆ ಬಂದು ಯಶಸ್ಸು ಕಂಡಿತ್ತು. ಚಿತ್ರಮಂದಿರಕ್ಕಿಂತ ಹೆಚ್ಚಾಗಿ ಟಿವಿಯಲ್ಲಿ ಪ್ರಸಾರ ಕಂಡು ದಾಖಲೆ ಬರೆದಿತ್ತು. ಇದೀಗ ಈ ಜೋಡಿ “ಆಯೋಗ್ಯ -2 ” ಮೂಲಕ ಮತ್ತೆ ಒಂದಾಗಿದೆ.

ಸಿದ್ದೇಗೌಡ ಹಾಗೂ ನಂದಿನಿ ಲವ್ ಸ್ಟೋರಿಗೆ ಕನ್ನಡ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದರು. ಈಗ ಮತ್ತದೇ ತಂಡ ‘ಅಯೋಗ್ಯ 2’ ಸಿನಿಮಾ ಮೂಲಕ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಆಯೋಗ್ಯ ಮಹೇಶ್ ಸಾರಥ್ಯದಲ್ಲಿ ಅಯೋಗ್ಯ-2 ಮೂಡಿ ಬರುತ್ತಿದ್ದು ಮುನೇಗೌಡ ಎಸ್ ವಿ ಸಿ ಪ್ರೊಡಕ್ಷನ್ಸ್ ನಲ್ಲಿ ಬಂಡವಾಳ ಹೂಡಿದ್ದಾರೆ.

ಮುಹೂರ್ತ ಸಮಾರಂಭದಲ್ಲಿ ಸಿನಿಮಾತಂಡದ ಜೊತೆಗೆ ನೆನಪಿರಲಿ ಪ್ರೇಮ್, ನಟ ಶ್ರೇಯಸ್ ಮಂಜು, ಪ್ರಮೋದ್ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದು ಸಿನಿಮಾ ತಂಡಕ್ಕೆ ಶುಭಹಾರೈಸಿದರು.

ಫ್ಯಾನ್ ಇಂಡಿಯಾ ಸಿನಿಮಾ

ನಿರ್ದೇಶಕ ಮಹೇಶ್ ಮಾತನಾಡಿ ಅಯೋಗ್ಯ – 2 ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲೂ ಮಾಡುತ್ತಿದ್ದೇವೆ. ರಚಿತಾ ಮತ್ತು ನೀನಾಸಂ ಸತೀಶ್ ಅವರನ್ನು ತೆರೆಮೇಲೆ ನೋಡೋಕೆ ತುಂಬಾ ಖುಷಿ ಆಗುತ್ತೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಫ್ಯಾನ್ ಇಂಡಿಯಾ ಸಿನಿಮಾ. ಮೊದಲ ಭಾಗ ಹಿಟ್ ಆದಮೇಲೆ ಬೇರೆ ಭಾಷೆಗೆ ಡಬ್ ಮಾಡಿದ್ವಿ. ಆದರೀಗ ತಮಿಳು ಹಾಗೂ ತೆಲುಗಿನಲ್ಲಿ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು

ನಟ ನೀನಾಸಂ ಸತೀಶ್ ಮಾತನಾಡಿ, ಅಯೋಗ್ಯ -2 ಸಿನಿಮಾಗೆ ನಿರ್ಮಾಪಕರ ದೊಡ್ಡ ಲಿಸ್ಟ್ ಇತ್ತು. ಅದರೆ ಕೊನೆಯದಾಗಿ ಮುನೇಗೌಡ ಫೈನಲ್ ಆಗಿದ್ದಾರೆ . ಅಯೋಗ್ಯ -2 ಸಿನಿಮಾ ಕನ್ನಡ ಸಿನಿಮಾರಂಗಕ್ಕೆ ದೊಡ್ಡ ಸಿನಿಮಾವಾಗಲಿದೆ’ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಲೇಡಿ ಸೂಪರ್ ಸ್ಟಾರ್ ಆದ ರಚಿತಾ ರಾಮ್

ಆಯೋಗ್ಯ – 2 ಚಿತ್ರದ ಮೂಲಕ ನಟಿ ರಚಿತಾ ರಾಮ್ ಅವರಿಗೆ ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದನ್ನು ನೀಡಲಾಗಿದೆ. ನಾನು ಯಾವಾಗಲು ಅಭಿಮಾನಿಗಳ ಪ್ರೀತಿಯ ಬುಲ್ ಬುಲ್ ಆಗಿಯೇ ಇರುತ್ತೇನೆ’ ಎಂದಿದ್ದಾರೆ

ನಟಿ ರಚಿತಾ ರಾಮ್ ಮಾತನಾಡಿ,`ಕಳೆದ 6 ವರ್ಷದ ಹಿಂದೆ ಅಯೋಗ್ಯ ಸಿನಿಮಾ ಇದೇ ಜಾಗದಲ್ಲಿ ಮುಹೂರ್ತ ಆಗಿತ್ತು. ತುಂಬಾ ಖುಷಿ ಆಗುತ್ತಿದೆ. ಅಶ್ವಿನಿ ಮೇಡಮ್ ಆಶೀರ್ವಾದವಿದೆ. ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಯೋಗ್ಯ-2 ಮಾಡಬೇಕು ಅಂದಾಗ ಮೊದಲು ತಲೆಗೆ ಬಂದಿದ್ದು ಏನಮ್ಮಿ ಏನಮ್ಮಿ.. ಹಾಡಿಗೆ ರಿಪ್ಲೇಸ್ ಯಾವುದು ಅಂತ ಆದರೆ ಆ ಹಾಡಿಗೆ ಯಾವುದೇ ರಿಪ್ಲೇಸ್ ಇಲ್ಲ. ಸತೀಶ್ ಟಾಮ್ ಅಂಡ್ ಜೆರ್ರಿ ಹಾಗೆ. ಕಿತ್ತಾಡುತ್ತಿರುತ್ತೇವೆ’ ಎಂದರು.

ನಿರ್ಮಾಪಕ ಎಂ.ಮುನೇಗೌಡ ಮಾತನಾಡಿ, ‘ಕನ್ನಡ ಸಿನಿಮಾರಂಗಕ್ಕೆ ಉತ್ತಮ ಸಿನಿಮಾವಾಗಲಿದೆ. ಮಹೇಶ್ ಬಂದು ಅಯೋಗ್ಯ-2 ಮಾಡಬೇಕು ಅಂದಾಗೆ ಹಿಂದೆ ಮುಂದೆ ನೋಡದೇ ಒಪ್ಪಿಕೊಂಡೆ. ಅಯೋಗ್ಯ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ರಚಿತಾ ಕೂಡ ಸಿನಿಮಾ ಮಾಡಿ ಎಂದರು. ಎಲ್ಲಾ ಉತ್ತಮ ಕಲಾವಿದರಿದ್ದಾರೆ’ ಎಂದು ಹೇಳಿದರು.

ಅಯೋಗ್ಯ-2ನಲ್ಲಿ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಮೊದಲ ಭಾಗದಲ್ಲಿ ಇದ್ದವರೇ ಮುಂದುವರೆಯುತ್ತಿರುವುದು ವಿಶೇಷ. ಹಿರಿಯ ನಟ ಸುಂದರ್ ರಾಜ್, ತಬಲ ನಾಣಿ, ಅರುಣಾ ಬಾಲರಾಜ್, ಶಿವರಾಜ್ ಕೆ ಆರ್ ಪೇಟೆ ಪಾರ್ಟ್-2ನಲ್ಲೂ ಇದ್ದಾರೆ.

ಹೊಸದಾಗಿ ಮಂಜು ಪಾವಗಡ ಸಿನಿಮಾತಂಡ ಸೇರಿಕೊಂಡಿದ್ದಾರೆ. ಮಾಸ್ತಿ ಮಂಜು ಸಂಭಾಷಣೆ, ವಿಶ್ವಜಿತ್ ರಾವ್ ಕ್ಯಾಮರಾ, ಅರ್ಜುನ್ ಜನ್ಯ ಸಂಗೀತವಿದೆ.ಮಂಡ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin