12 ಮಂದಿ ನಾಯಕಿಯರೊಂದಿಗೆ ಡ್ಯೂಡ್ ಎನ್ನುತ್ತಾ ಬಂದ ನಟ ತೇಜ್

ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್, ಆನಂತರ ಕನ್ನಡ ತಮಿಳು ಚಿತ್ರರಂಗದಲ್ಲಿ ಕೆಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ರಿವೈಂಡ್ ಸಿನಿಮಾ ನಿರ್ದೇಶಿಸಿ ತಾವೇ ನಟಿಸಿ ಗಮನ ಸೆಳೆದಿದ್ದರು. ಬಳಿಕ ರಾಮಾಚಾರಿ 2.0 ನಟಿಸಿ,ನಿರ್ದೇಶಿಸಿದ್ದರು.ಇದೀಗ 12 ಮಂದಿ ನಾಯಕಿಯರೊಂದಿಗೆ ಡ್ಯೂಡ್ ಎನ್ನುತ್ತಾ ಮತ್ತೆ ಬಂದಿದ್ಧಾರೆ

ಡ್ಯೂಡ್ ಚಿತ್ರದ ಮುಹೂರ್ತ ನಡೆದಿದ್ದು ಇದರ ಜೊತೆಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಖಳನಾಯಕರ ನಡುವೆ ನಟ ತೇಜ್ ಮಾಸ್ ಲುಕ್ ನಲ್ಲಿ ಎಂಟ್ರಿ ಕೊಡುವ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆದಿದೆ. ಮುಹೂರ್ತಕ್ಕೆ ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಆಗಮಿಸಿ ಶುಭ ಹಾರೈಸಿದ್ದಾರೆ.

ತೇಜ್ ನಿರ್ದೇಶಿಸಿ ನಟಿಸುತ್ತಿರುವ ಈ ಸಿನಿಮಾಗೆ, ಶಶಿಧರ್ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ಮೊಹಮದ್ ಅವರ ಸಂಗೀತ ಮಂಜು ದೊಡ್ಮನಿ ಅವರ ಸಾಹಿತ್ಯ ಇರಲಿದೆ. ಸಿನಿಮಾದ ಹಾಡುಗಳಿಗೆ ರಾಜಶೇಖರ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ.

ಸಿನಿಮಾದ ಇನ್ನೊಂದು ವಿಶೇಷತೆ ಅಂದ್ರೆ ಬರೋಬ್ಬರಿ 12 ಜನ ಬ್ಯೂಟಿಫುಲ್ ಹೀರೋಯಿನ್ ಗಳು ಸಿನಿಮಾದಲ್ಲಿ ಇರಲಿದ್ದಾರೆ, ಪೂಜ ರಾಜು, ಚಿತ್ರಲ್ ರಂಗಸ್ವಾಮಿ ರೋಹಿಣಿ, ಪ್ರಣವಿ ಗೌಡ, ಸಹನಗೌಡ, ಸಾನಿಯಾ, ಜೀವತಾ, ದೃತಿ, ಸೌಮ್ಯ, ರೊಸ್ಲಿಂಗ್, ಮಿಶೇಲ್ ನೊರೋನ, ಹೀಗೆ 12 ಜನ ನಾಯಕಿಯರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಫುಟ್ಬಾಲ್ ಕ್ರೀಡೆಯ ಸುತ್ತ ತಿರುಗುವ ಈ ಸಿನಿಮಾದಲ್ಲಿ ರಂಗಾಯಣ ರಘು, ಸ್ಪರ್ಶ ರೇಖಾ, ಇನ್ನುಳಿದ ಅನುಭವಿ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.