Exclusive Interview :“ಶೆಫ್ ಚಿದಂಬರ” ನಾಗಿ ನಟ ಅನಿರುದ್ಧ್: 5 ವರ್ಷಗಳ ಬಳಿಕ ಮರಳಿ ಚಿತ್ರದಲ್ಲಿ ನಟನೆ
ನಟ ಅನಿರುದ್ಧ್ “ಜೊತೆ ಜೊತೆಯಲಿ” ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಹವಾ ಎಬ್ಬಸಿದ್ದರು. ಹೀಗಾಗಿ ಚಿತ್ರರಂಗದಿಂದ ತುಸು ದೂರವಿದ್ದರು. ಇದೀಗ ಮತ್ತೆ 5 ವರ್ಷದ ಬಳಿಕ “ ಶೆಫ್ ಚಿದಂಬರ”ನಾಗಿ ಹಿರಿ ತೆರೆಯಲ್ಲಿಯೂ ಮೋಡಿ ಮಾಡಲು ಮುಂದಾಗಿದ್ದಾರೆ.
“ರಾಘು” ಚಿತ್ರದ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಎಂ.ಆನಂದರಾಜ್ ನಿರ್ದೇಶನದ ನೂತನ ಚಿತ್ರ “ಶೆಫ್ ಚಿದಂಬರ”ದಲ್ಲಿ ನಟ ಅನಿರುದ್ಧ್ ನಟಿಸುತ್ತಿದ್ದಾರೆ. ಇದೀಗ ನಟ ಕಿಚ್ಚ ಸುದೀಪ್ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡದ ಬೆನ್ನಿಗೆ ನಿಂತಿದ್ಧಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಟ ಅನಿರುದ್ಧ್, ಇದುವರೆಗೂ ಮಾಡಿರುವ ಎಲ್ಲಾ ಚಿತ್ರಗಳು ವಿಭಿನ್ನ, ವಿಶಿಷ್ಠ ಮತ್ತು ವಿನೂತನವಾದವು. ಧಾರಾವಾಹಿಯಲ್ಲಿ ನಟಿಸಲಿ, ಸಿನಿಮಾದಲ್ಲಿ ನಟಿಸಲಿ ನಾನು ಶೇಕಡ ನೂರರಷ್ಟು ಶ್ರಮ ಹಾಕುತ್ತೇನೆ, ಜೊತೆಗೆ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ ಎಂದಿದ್ಧಾರೆ.
ಇದೊಂದು ವಿಭಿನ್ನ, ವಿನೂತನ ಚಿತ್ರ, ಕನ್ನಡದಲ್ಲಿ ಈ ರೀತಿಯ ಕಥೆಗಳು ತುಂಬಾನೇ ವಿರಳ, ರಾಘು ಚಿತ್ರವೂ ಕೂಡ ವಿನೂತನ ಪ್ರಯತ್ನ, ಒಬ್ಬರೇ ನಟ ನಟಿಸಿದ್ದ ಚಿತ್ರ. ತುಂಬಾ ಅಪರೂಪದ ಕಥೆಯನ್ನು ನಿರ್ದೇಶಕರು ಮಾಡಿದ್ದರು ಈ ರೀತಿಯ ಕಥೆಗಳು ಕನ್ನಡ ಚಿತ್ರರಂಗದಲ್ಲಿ ವಿರಳ, ಇದೊಂದು ಡಾರ್ಕ್ ಕಾಮಿಡಿ ಚಿತ್ರ. ಥ್ರಿಲ್ಲರ್, ಮರ್ಡರಿ ಮಿಸ್ಟ್ರಿ, ಚೆಫ್ ಪಾತ್ರ. ವಿಭಿನ್ನ,ಪಾತ್ರ. ಕತೆ ಕೇಳಿದಾಗ ಖುಷಿ ಆಯ್ತು. ಇದೇ 10 ರಂದು ಮುಹೂರ್ತ ನಡೆಯಲಿದೆ. ಅಂದೇ ಟೀಸರ್ ಗ್ಲಿಂಪ್ಸ್ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ನಟ ಕಿಚ್ಚ ಸುದೀಪ್ ಪೋಸ್ಟರ್ ಬಿಡುಗಡೆ ಮಾಡಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಅಭಯ ನೀಡಿದ್ದಾರೆ. ಅಷ್ಟೇ ಅಲ್ಲ ಹಂಚಿಕೆದಾರರ ಜೊತೆ ಮಾತನಾಡಿದ ಬೆಂಬಲವಾಗಿ ನಿಂತಿದ್ದಾರೆ. ಬೆಂಗಳೂರು, ತುಮಕೂರು, ಮಂಗಳೂರು ಮತ್ತಿತರ ಕಡೆ ಚಿತ್ರೀಕರಣ, ರಚೆಲ್ ಡೆವಿಡ್, ನಿಧಿ ಸುಬ್ಬಯ್ಯ ಶರತ್ ಲೋಹಿತಾಶ್ವ, ಶಿವಮಣಿ ಮತ್ತಿತರಿದ್ದಾರೆ. ಕೆರಿಯರ್‍ನಲ್ಲಿ ಪ್ರತಿಯೊಂದು ಸಿನಿಮಾನೂ ವಿಶೇಷವೇ.ಎಲ್ಲವೂ ವಿಭಿನ್ನ ಅನುಭವ ತಂದುಕೊಟ್ಟಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದೇ 10 ರಿಂದ ಚಿತ್ರೀಕರಣ
ಒಂದೇ ಪಾತ್ರವನ್ನಿಟ್ಟುಕೊಂಡು ವಿಜಯ ರಾಘವೇಂದ್ರ ನಟನೆಯ “ರಾಘು” ಚಿತ್ರ ನಿರ್ದೇಶನ ಮಾಡಿದ್ದ ಎಂ. ಆನಂದ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಟ ಅನಿರುದ್ಧ್ ಈ ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರದಲ್ಲಿ ಅನಿರುದ್ದ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಚಿತ್ರಕ್ಕೆ ನಿರ್ದೇಶಕ ಆನಂದ್ ರಾಜ್ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, “ವಿಕ್ರಾಂತ್ ರೋಣ” ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಖ್ಯಾತಿಯ ರೆಚೆಲ್ ಡೇವಿಡ್ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಮುಂತಾದವರು “ಶೆಫ್ ಚಿದಂಬರ” ಚಿತ್ರದಲ್ಲಿ ನಟಿಸುತ್ತಿದ್ದಾರೆ.